ಸಂಭ್ರಮ ಸಡಗರದಲ್ಲಿ ಎನ್‌ಇಎಸ್‌ ವಿದ್ಯಾರ್ಥಿಗಳು, ಅಮೃತ ಮಹೋತ್ಸವದಲ್ಲಿ ಕಣ್ಮನ ಸೆಳೆದ ಮಲೆನಾಡ ಚಿತ್ರಣ

ಸಂಭ್ರಮ ಸಡಗರದಲ್ಲಿ ಎನ್‌ಇಎಸ್‌ ವಿದ್ಯಾರ್ಥಿಗಳು, ಅಮೃತ ಮಹೋತ್ಸವದಲ್ಲಿ ಕಣ್ಮನ ಸೆಳೆದ ಮಲೆನಾಡ ಚಿತ್ರಣ

ಶಿವಮೊಗ್ಗ | 20 ಜೂನ್ 2023 | ಡಿಜಿ ಮಲೆನಾಡು.ಕಾಂ

ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವ ಪ್ರಯುಕ್ತ ಎನ್‌ಇಎಸ್‌ ಮೈದಾನದಲ್ಲಿ ಆಯೋಜಿಸಿರುವ ಎನ್‌ಇಎಸ್‌ ಹಬ್ಬದಲ್ಲಿ ಸಾವಿರಾರು ಸಂಭ್ರಮ ಸಡಗರದಿಂದ ಪಾಲ್ಗೊಂಡರು. ಮಲೆನಾಡ ವೈಭವ ಪ್ರದರ್ಶಿಸುವ ದೃಶ್ಯ ವೈಭವವನ್ನು ವಿದ್ಯಾರ್ಥಿಗಳು ಕಣ್ತುಂಬಿಕೊಂಡರು. ಮಲೆನಾಡ ಗ್ರಾಮೀಣ ಪ್ರದೇಶದ ಸಿಹಿ ತಿನಿಸುಗಳು, ವಿವಿಧ ಖಾದ್ಯಗಳ ರುಚಿಯನ್ನು ಸವಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಅಮೃತ ಮಹೋತ್ಸವ ಪ್ರಯುಕ್ತ ಬಹುದೊಡ್ಡ ವೇದಿಕೆಯಲ್ಲಿ ನೂರಾರು ವಿದ್ಯಾರ್ಥಿಗಳಿಂದ ನಡೆದ ಪ್ರಾರ್ಥನಾ ನೃತ್ಯ ಎಲ್ಲರ ಮೆಚ್ಚುಗೆ ಗಳಿಸಿತು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್‌, ತುಮಕೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ವೆಂಕಟೇಶ್ವರಲು, ಎನ್‌ಇಎಸ್‌ ಅಧ್ಯಕ್ಷ ಜಿ.ಎಸ್‌.ನಾರಾಯಣರಾವ್‌ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.

ಪದವಿ ಶಿಕ್ಷಣದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಅಮೃತ ಮಹೋತ್ಸವ ಪ್ರಯುಕ್ತದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು. ಎನ್‌ಇಎಸ್‌ ಸಂಸ್ಥೆಯ ಆವರಣದಲ್ಲಿ ಜಾತ್ರೆಯ ವಾತಾವರಣವೇ ರೂಪುಗೊಂಡಿತ್ತು. ಯುವಕ ಯುವತಿಯರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ರಾಷ್ಟ್ರೀಯ ಶಿಕ್ಷಣ ಸಮಿತಿ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ ಎಲ್ಲರೂ ಎನ್‌ಇಎಸ್‌ ಹಬ್ಬದ ಕ್ಷಣಗಳನ್ನು ಸಂಭ್ರಮಿಸಿದರು. ಗಂಗಾವತಿ ಪ್ರಾಣೇಶ್‌ ಅವರು ಹಾಸ್ಯ ಭಾಷಣದ ಮೂಲಕ ಎಲ್ಲರನ್ನು ರಂಜಿಸಿದರು.

ತುಮಕೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ವೆಂಕಟೇಶ್ವರಲು, ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್‌, ಎನ್‌ಇಎಸ್‌ ಅಧ್ಯಕ್ಷ ಜಿ.ಎಸ್‌. ನಾರಾಯಣರಾವ್‌, ಕಾರ್ಯದರ್ಶಿ ಎಸ್‌.ಎನ್‌.ನಾಗರಾಜ್‌, ಡಾ. ಪಿ.ನಾರಾಯಣ, ಡಿ.ಜಿ.ರಮೇಶ್‌, ಸಿ.ಆರ್.ನಾಗರಾಜ್ ವೇದಿಕೆಯಲ್ಲಿ‌ ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

digimalenadu

ಶಿವಮೊಗ್ಗ
error: Content is protected !!