ಮಹಿಳಾ ಸಾಧಕರಿಗೆ ನೀವು ನಮ್ಮ ಹೆಮ್ಮೆ ಸ್ಮರಣಿಕೆ ನೀಡಿ ಸನ್ಮಾನ

ಮಹಿಳಾ ಸಾಧಕರಿಗೆ ನೀವು ನಮ್ಮ ಹೆಮ್ಮೆ ಸ್ಮರಣಿಕೆ ನೀಡಿ ಸನ್ಮಾನ

ಶಿವಮೊಗ್ಗ | 21 ಜುಲೈ 2023 | ಡಿಜಿ ಮಲೆನಾಡು.ಕಾಂ

ಜಗತ್ತಿನ ಸೃಷ್ಟಿಗೆ ಕಾರಣವಾದ ತಾಯಿಯು ತಾಳ್ಮೆ ಮತ್ತು ವಾತ್ಸಲ್ಯದ ಪ್ರತೀಕ, ಆಕೆ ದೊಡ್ಡ ಶಕ್ತಿ ಕೂಡ ಎಂದು ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ನಗರದ ಬಸವ ಕೇಂದ್ರದಲ್ಲಿ ಸರ್ಜಿ ಫೌಂಡೇಶನ್‌ ಹಾಗೂ ಅಭ್ಯುದಯ ಪ್ರಕಾಶನ ಸಹಯೋಗದಲ್ಲಿ ಆಯೋಜಿಸಿದ್ದ ನಾರಿಯರಿಗೊಂದು ನಮನ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರನ್ನು ಸನ್ಮಾನಿಸಿ, ಗೌರವಿಸಿ ಆಶೀರ್ವಚನ ನೀಡಿದರು.

Click on below this picture, Like & Follow Facebook Page ” Digi Malenadu “

 

ಜಗತ್ತಿನಲ್ಲಿ ಅತ್ಯಂತ ಸಹನಾ ಶಕ್ತಿ ಇರೋದು ಭೂಮಿಗೆ ಮಾತ್ರ, ಅದು ಬಿಟ್ಟರೆ ಅಂತಹ ತಾಳ್ಮೆ ಇರುವುದು ತಾಯಂದಿರಿಗೆ. ಮನೆ ನಿರ್ವಹಣೆ, ಮಕ್ಕಳ ಲಾಲನೆ, ಪಾಲನೆ, ಮನೆಯ ಒಳಗೂ ಹೊರಗೂ ಹೀಗೆ ಎಲ್ಲ ಜವಾಬ್ದಾರಿಯೊಂದಿಗೆ ಕುಟುಂಬವನ್ನು ನಿಭಾಯಿಸುವುದರಲ್ಲಿ ಆಕೆ ಅತ್ಯಂತ ಸಹನಾಮಯಿ. ತಾಳ್ಮೆ ಎಂದರೆ ಅದು ಸ್ತ್ರೀ, ಆಕೆ ವಾತ್ಸಲ್ಯ ದ ಪ್ರತೀಕ, ಜಗತ್ತಿನ ಅತ್ಯಂತ ದೊಡ್ಡ ಶಕ್ತಿಯೂ ಹೌದು ಎಂದು ತಿಳಿಸಿದರು.

 

ಸರ್ಜಿ ಫೌಂಡೇಷನ್‌ ಮ್ಯಾನೇಜಿಂಗ್‌ ಟ್ರಸ್ಟಿ ಡಾ. ಧನಂಜಯ ಸರ್ಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯು ಸಾಹಿತ್ಯ, ಸಾಂಸ್ಕೃತಿಕವಾಗಿ ಅಪಾರ ಕೊಡುಗೆಯನ್ನು ನೀಡಿದೆ. ಹೋರಾಟ ದೃಷ್ಟಿಕೋನದಲ್ಲಿ ನೋಡುವುದಾದರೆ ವೀರ ಮಹಿಳೆ ಕಳದಿ ಚೆನ್ನಮ್ಮ, ಸಾಹಿತ್ಯದಲ್ಲಿ ಮೊದಲ ಕವಿಯತ್ರಿ ಶಿವಶರಣೆ ಅಕ್ಕಮಹಾದೇವಿ, ಶರಣೆ ಸತ್ಯಕ್ಕ ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಬೆಳೆಯುತ್ತದೆ ಎಂದು ಹೇಳಿದರು.

ನಮ್ಮ ದೇಶ ಮತ್ತು ಸಂಸ್ಕೃತಿಯಲ್ಲಿಯೂ ಮಾತೆಯರಿಗೆ ಅತ್ಯಂತ ಹೆಚ್ಚಿನ ಮಹತ್ವ ಇದೆ. ಗಂಗೆಯನ್ನು ಗಂಗಾ ಮಾತೆ ಎಂತಲೂ, ತುಂಗೆಯನ್ನು ತುಂಗಾ ಮಾತೆ, ಭಾರತವನ್ನು ಭಾರತ ಮಾತೆ ಎಂದು, ಹಾಗೆಯೇ ಕನ್ನಡವನ್ನು ಕನ್ನಡಾಂಬೆ ಎಂತಲೂ, ವೃಕ್ಷಕ್ಕೆ ವೃಕ್ಷಮಾತೆ ಎಂದು ಗೌರವಿಸುತ್ತೇವೆ. ಇದು ಭಾರತದ ಸಂಸ್ಕೃತಿ ಮತ್ತು ಸಂಸ್ಕಾರವೂ ಹೌದು ಎಂದು ತಿಳಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಇದೇ ಸಂದರ್ಭದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ನಾರಿಶಕ್ತಿ ವಿಷಯ ಕುರಿತು ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಕ್ಷೇತ್ರದ ಸಾಧಕ ಮಹಿಳೆಯರಿಗೆ ಸರ್ಜಿ ಫೌಂಡೇಷನ್‌ ವತಿಯಿಂದ ನೀವು ನಮ್ಮ ಹೆಮ್ಮೆ ಶಿರೋನಾಮೆಯ ಸ್ಮರಣಿಕೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.

ಉಷಾ ನರ್ಸಿಂಗ್‌ ಹೋಂನ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ. ರಕ್ಷಾ ರಾವ್‌ ಅವರು ಮಹಿಳಾ ಆರೋಗ್ಯ ಒಂದು ಅವಲೋಕನ ಕುರಿತು ಉಪನ್ಯಾಸ ನೀಡಿದರು. ಸಿಹಿಮೊಗೆಯ ಸಾಲು ದೀಪಗಳು ಕೃತಿಯ ಲೇಖಕಿ , ಶಿಕ್ಷಕಿ ದೀಪಾ ಕುಬಸದ್‌, ಶಾಂತಾ ಆನಂದ್‌, ಉಪನ್ಯಾಸಕ ಎಂ.ವಿ. ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

digimalenadu

ಶಿವಮೊಗ್ಗ
error: Content is protected !!