ಸಾಧನೆಗೆ ಧನಾತ್ಮಕ ಆಲೋಚನೆ ಮುಖ್ಯ, ಪ್ರತಿಯೊಬ್ಬರಲ್ಲಿಯೂ ಇರಲಿದೆ ಯಶಸ್ಸು ಗಳಿಸುವ ಸಾಮಾರ್ಥ್ಯ

ಸಾಧನೆಗೆ ಧನಾತ್ಮಕ ಆಲೋಚನೆ ಮುಖ್ಯ, ಪ್ರತಿಯೊಬ್ಬರಲ್ಲಿಯೂ ಇರಲಿದೆ ಯಶಸ್ಸು ಗಳಿಸುವ ಸಾಮಾರ್ಥ್ಯ

ಶಿವಮೊಗ್ಗ | 26 ಜುಲೈ 2023 | ಡಿಜಿ ಮಲೆನಾಡು.ಕಾಂ

ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕಾದರೆ ಯಾವುದೇ ಅಂಜಿಕೆ ಇರಬಾರದು. ಸಾಧನೆಗೆ ಧನಾತ್ಮಕ ಆಲೋಚನೆಗಳು ತುಂಬಾ ಮುಖ್ಯ. ಪ್ರತಿಯೊಬ್ಬರಲ್ಲಿ ಯಶಸ್ಸು ಗಳಿಸುವ ಸಾಮಾರ್ಥ್ಯ ಇರುತ್ತದೆ ಎಂದು ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ಬಿಂದುಮಣಿ ಆರ್.ಎನ್.‌ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ನಗರದ ಕಸ್ತೂರ ಬಾ ಬಾಲಿಕಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿನಿ ಸಾಂಸ್ಕೃತಿಕ ವೇದಿಕೆ, ಕ್ರೀಡಾ ವಿಭಾಗ, ಎನ್.ಎಸ್.ಎಸ್ ಘಟಕಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Click on below this picture, Like & Follow Facebook Page ” Digi Malenadu “

ಸಾಧನೆಗೆ ನಿರ್ದಿಷ್ಟ ವ್ಯಾಪ್ತಿಯಿಲ್ಲ. ಒಬ್ಬ ಉತ್ತಮ ನಾಗರೀಕ ಕೂಡ ಸಮಾಜದ ದೊಡ್ಡ ಸಾಧಕ. ಇತರರು ಗುರುತಿಸಿ ಖ್ಯಾತಿ ಪಡೆದಾಗ ಮಾತ್ರ ನಿಜವಾದ ಸಾಧಕ ಎಂಬ ಭ್ರಮೆ ಬೇಡ. ವಿದ್ಯಾಭ್ಯಾಸದ ಜತೆಗೆ ವ್ಯಕ್ತಿತ್ವ ವಿಕಸನ ಕೂಡ ಮುಖ್ಯ. ಒಳ್ಳೆಯ ಪುಸ್ತಕಗಳ ಅಧ್ಯಯನಗಳನ್ನು ಮಾಡಬೇಕು ಎಂದು ತಿಳಿಸಿದರು.

ಕೌಶಲ್ಯತೆ ಪುಸ್ತಕಗಳಿಂದ ಸಿಗುವುದಿಲ್ಲ. ವಿದ್ಯಾರ್ಥಿ ದೆಸೆಯಲ್ಲಿ ಲಭ್ಯವಿರುವ ಕೌಶಲ್ಯಾಧಾರಿತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇದರಿಂದ ಸಮಯ ನಿರ್ವಹಣೆ, ನಾಯಕತ್ವ ಗುಣ ಬೆಳೆಸಿಕೊಳ್ಳಬಹುದು. ಸಾಮಾಜಿಕ ಜಾಲತಾಣಗಳಿಂದ ಉತ್ತಮ ವಿಚಾರಗಳನ್ನು ಕಲಿಯಬಹುದು ಎಂದರು.

ಸಾಮಾಜಿಕ ಜಾಲತಾಣಗಳಿಂದ ಅತಿ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗುತ್ತಿದೆ. ಮಹಿಳಾ ಪೋಲೀಸ್ ಠಾಣೆಗಳ ಮೂಲಕ ಯುವತಿಯರು ಯಾವುದೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಅವಕಾಶವಿದೆ. ಆತ್ಮಹತ್ಯೆ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ. ಸಮಸ್ಯೆಗಳನ್ನು ಎದುರಿಸುವ ಆಧಾರದ ಮೇಲೆ ಪರಿಹಾರಗಳು ದೊರೆಯುತ್ತದೆ. ಪೋಲೀಸ್ ಇಲಾಖೆ ಸದಾ ನಾಗರಿಕ ಸ್ನೇಹಿಯಾಗಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ ಎಂದು ತಿಳಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು. ಡಿಡಿಪಿಯು ಬಿ.ಕೃಷ್ಣಪ್ಪ, ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್, ಕಾಲೇಜಿನ ಪ್ರಾಚಾರ್ಯ ಬಿ.ರಂಗಪ್ಪ, ಉಪಪ್ರಾಚಾರ್ಯ ಕೆ.ಆರ್.ಉಮೇಶ್, ಉಪನ್ಯಾಸಕ ನಿರಂಜನ್, ವಿದ್ಯಾರ್ಥಿನಿ ಸಂಘದ ನಂದಿತಾ, ಲೀಲಾವತಿ, ಸ್ಪೂರ್ತಿ.ಕೆ.ಪಿ ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

digimalenadu

ಶಿವಮೊಗ್ಗ
error: Content is protected !!