“ಕುಷ್ಠ ಮುಕ್ತ ಭಾರತದ ಕಡೆಗೆ” ಘೋಷವಾಕ್ಯ, ಕುಷ್ಠ ರೋಗ ನಿರ್ಮೂಲನಾ ಕಾರ್ಯಕ್ರಮ, ಆರೋಗ್ಯ ಸಹಾಯವಾಣಿ ಸಂಖ್ಯೆ 104ಕ್ಕೆ ಕರೆ ಮಾಡಿ

“ಕುಷ್ಠ ಮುಕ್ತ ಭಾರತದ ಕಡೆಗೆ” ಘೋಷವಾಕ್ಯ,  ಕುಷ್ಠ ರೋಗ ನಿರ್ಮೂಲನಾ ಕಾರ್ಯಕ್ರಮ, ಆರೋಗ್ಯ ಸಹಾಯವಾಣಿ ಸಂಖ್ಯೆ 104ಕ್ಕೆ ಕರೆ ಮಾಡಿ

ಶಿವಮೊಗ್ಗ | 8 ಆಗಸ್ಟ್‌ 2023 | ಡಿಜಿ ಮಲೆನಾಡು.ಕಾಂ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಜಿಲ್ಲಾ ಕುಷ್ಠ ರೋಗ ನಿರ್ಮೂಲನಾ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದು, ಕುಷ್ಠ ಮುಕ್ತ ಭಾರತದ ಕಡೆಗೆ ಎಂಬ ಘೋಷವಾಕ್ಯದೊಂದಿಗೆ ಅರಿವು ಮೂಡಿಸುವ ಕಾರ್ಯ ನಡೆಸುತ್ತಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಕುಷ್ಠ ರೋಗ ಕುರಿತು ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ 104 ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಕುಷ್ಠ ರೋಗದ ಬಗ್ಗೆ ಸರಿಯಾದ ತಿಳವಳಿಕೆ ಹೊಂದುವ ಜತೆಯಲ್ಲಿ ಇತರರಿಗೂ ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ.

Click on below this picture, Like & Follow Facebook Page ” Digi Malenadu “

ಕುಷ್ಠ ರೋಗದ ಲಕ್ಷಣಗಳು : *‌ ವ್ಯಕ್ತಿಯ ಚರ್ಮದ ಮೇಲಿನ ಯಾವುದೇ ತಿಳಿ, ಬಿಳಿ, ತಾಮ್ರ ಮಚ್ಚೆ ಅಥವಾ ಹೊಳೆಯುವ ಮತ್ತು ಎಣ್ಣೆಯುಕ್ತ ಚರ್ಮ. * ಗಂಟುಗಳು ಮತ್ತು ಕಣ್ಣಿನ ರೆಪ್ಪೆಗಳನ್ನು ಮುಚ್ಚಲು ಅಸಮರ್ಥತೆ. * ಕೈ ಅಥವಾ ಕಾಲುಗಳಲ್ಲಿ ಬೆರಳು ಮಡಚಿಕೊಂಡಿರುವುದು ಮತ್ತು ನಡೆಯುವಾಗ ಕಾಲು ಎಳೆಯುವುದು. * ಕೈ ಅಥವಾ ಕಾಲುಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ ಮತ್ತು ಅಂಗೈ ಅಥವಾ ಪಾದಗಳಲ್ಲಿ ಶೀತ/ಬಿಸಿ/ಸಂವೇದನೆ ನಷ್ಟವಾಗಿರುವುದು ಮತ್ತು ಕೈಗಳಲ್ಲಿ ವಸ್ತುಗಳನ್ನು ಹಿಡಿಯಲು ಅಥವಾ ಪಾದರಕ್ಷೆ ತೊಡುವಲ್ಲಿ ಬಲಹೀತೆ.

ರೋಗದ ಹರಡುವಿಕೆ : ಚಿಕಿತ್ಸೆ ಪಡೆಯದ ಕುಷ್ಠ ರೋಗಿಗಳ ಮೂಗಿನ ದ್ರವದಿಂದ, ಉಸಿರಿನ ಮೂಲಕ ಆರೋಗ್ಯವಂತನಿಗೆ ಹರಡುತ್ತದೆ. ಈ ರೋಗವು ವಂಶಪಾರಂಪರ್ಯವಲ್ಲ. ರೋಗವು ಪಾಪ, ಶಾಪಗಳಿಂದ ಬರುವುದಿಲ್ಲ. ರೋಗವನ್ನು ತಡೆಟ್ಟುವುದು ಹೇಗೆ : ಮಚ್ಚೆಗಳನ್ನು ಗುಪ್ತವಾಗಿರಿಸದೇ ವೈದ್ಯರಿಗೆ ತೋರಿಸುವುದು. ರೋಗದ ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆಯುವುದು. ಇದರಿಂದ ಅಂಗವಿಕಲತೆಯನ್ನು ತಡೆಯಬಹುದಾಗಿದೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ರೋಗದ ಚಿಕಿತ್ಸೆ : ಕುಷ್ಠ ರೋಗವನ್ನು ಬಹು ಔಷಧಿ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಚಿಕಿತ್ಸೆಯು 6 ತಿಂಗಳ ಅಥವಾ 12 ತಿಂಗಳಲ್ಲಿ ಪೂರ್ಣಗೊಳ್ಳುತ್ತದೆ. ಕುಷ್ಠ ರೋಗ ಕುರಿತು ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ 104 ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!