ರಕ್ತನಾಳಗಳ ಕಾಯಿಲೆಯ ಜಾಗೃತಿ ಪ್ರತಿಯೊಬ್ಬರಿಗೂ ಅವಶ್ಯಕ

ರಕ್ತನಾಳಗಳ ಕಾಯಿಲೆಯ ಜಾಗೃತಿ ಪ್ರತಿಯೊಬ್ಬರಿಗೂ ಅವಶ್ಯಕ

ಶಿವಮೊಗ್ಗ | 5 ಆಗಸ್ಟ್‌ 2023 | ಡಿಜಿ ಮಲೆನಾಡು.ಕಾಂ

ಪ್ರತಿ ವರ್ಷ ಆಗಸ್ಟ್ 6 ರಂದು ದೇಶಾದ್ಯಂತ ವ್ಯಾಸ್ಕೂಲರ್ ದಿನಾಚರಣೆ ಆಚರಿಸುತ್ತಿದ್ದು, ಸಾರ್ವಜನಿಕರಲ್ಲಿ ರಕ್ತನಾಳಗಳ ಕಾಯಿಲೆಗಳ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದೇ ರಾಷ್ಟ್ರೀಯ ವ್ಯಾಸ್ಕೂಲರ್ ದಿನಾಚರಣೆಯ ಪ್ರಮುಖ ಆಶಯ ಎಂದು ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯಾಸ್ಕೂಲರ್ ಸರ್ಜನ್ ಡಾ. ಶ್ರೀಶ ರಾವ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಭಾರತ ದೇಶದಲ್ಲಿ 2023ರ ರಾಷ್ಟ್ರೀಯ ವ್ಯಾಸ್ಕೂಲರ್ ದಿನಾಚರಣೆಯ ಮೂಲ ಗುರಿ ಮತ್ತು ಧೈಯವು ರಕ್ತನಾಳದ ಸಮಸ್ಯೆಗಳಿರುವ ಕಾಲನ್ನು ಕತ್ತರಿಸದೇ ಉಳಿಸುವುದೇ ಆಗಿದೆ. ರಕ್ತನಾಳಗಳಲ್ಲಿ ಸಮಸ್ಯೆ ಉಂಟಾಗಲು 3 ಮುಖ್ಯ ಕಾರಣಗಳಿದ್ದು, ತಂಬಾಕು ಸೇವನೆ, ಧೂಮಪಾನ, ಮಧುಮೇಹ ಕಾಯಿಲೆಗಳಿಂದ ಪಾದಗಳಲ್ಲಿ ಉಂಟಾಗುವ ಸೊಂಕು ಹಾಗೂ ರಸ್ತೆ ಅಪಘಾತಗಳು ಕಾರಣವಾಗುತ್ತವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Click on below this picture, Like & Follow Facebook Page ” Digi Malenadu “

ಅತಿಯಾದ ತಂಬಾಕು ಸೇವನೆ ಮತ್ತು ಧೂಮಪಾನದಿಂದ ಶುದ್ಧ ರಕ್ತನಾಳಗಳು ಮುಚ್ಚಲ್ಪಡುತ್ತವೆ. ಇದರಿಂದ ಕಾಲುಗಳಲ್ಲಿ ನಡೆದಾಡುವಾಗ ನೋವು ಉಂಟಾಗುತ್ತದೆ. ಕಾಲಕ್ರಮೇಣ ನಿರ್ಲಕ್ಷಿಸಿದ್ದಲ್ಲಿ ಕಾಲುಗಳಲ್ಲಿ ಗ್ಯಾಂಗ್ರಿನ್ ಆಗಿ ಕಾಲು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ಕಾಲಿನ ರಕ್ತನಾಳಗಳ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಕಲರ್ ಡಾಪ್ಲರ್ ಪರೀಕ್ಷೆ ನಡೆಸಲಾಗುತ್ತದೆ ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ರಕ್ತನಾಳದ ಸಮಸ್ಯೆ ದೃಢಪಟ್ಟಲ್ಲಿ Angioplasty, Stenting, Bypass ಶಸ್ತ್ರ ಚಿಕಿತ್ಸೆಗಳ ಮೂಲಕ ಗ್ಯಾಂಗ್ರೀನ್ ಆಗುವುದನ್ನು ತಪ್ಪಿಸಿ ಕಾಲನ್ನು ಉಳಿಸಿಕೊಳ್ಳಬಹುದು. ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ರಾಷ್ಟ್ರೀಯ ವ್ಯಾಸ್ಕೂಲರ್ ದಿನಾಚರಣೆ ಪ್ರಯುಕ್ತ ಕಲರ್ ಡಾಪ್ಲರ್ ಪರೀಕ್ಷೆಗಳ ಮೇಲೆ ವಿಶೇಷ ಶೇ. 30 ರಿಯಾಯಿತಿ ಇರಲಿದೆ. ಆಗಸ್ಟ್‌ ತಿಂಗಳ 30ರ ವರೆಗೆ ಆಯೋಜಿಸಲಾಗಿದೆ ಎಂದು ತಿಳಿಸಿದರು. ಮಾರ್ಕೆಟಿಂಗ್‌ ಮ್ಯಾನೇಜರ್‌ ರಾಜಾಸಿಂಗ್‌, ಮೆಡಿಕಲ್‌ ಸೂಪರಿಂಟೆಂಡೆಂಟ್‌ ಡಾ. ಚಕ್ರವರ್ತಿ ಸುದ್ದಿಗೋಷ್ಠಿಯಲ್ಲಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!