ಸಹಚೇತನ ನಾಟ್ಯಾಲಯದಿಂದ ನಾಟ್ಯಾರಾಧನಾ 12, ರಾಷ್ಟ್ರೀಯ ನೃತ್ಯ ಮಹೋತ್ಸವ

ಸಹಚೇತನ ನಾಟ್ಯಾಲಯದಿಂದ ನಾಟ್ಯಾರಾಧನಾ 12, ರಾಷ್ಟ್ರೀಯ ನೃತ್ಯ ಮಹೋತ್ಸವ

ಶಿವಮೊಗ್ಗ | 29 ಆಗಸ್ಟ್‌ 2023 | ಡಿಜಿ ಮಲೆನಾಡು.ಕಾಂ

ಸಹಚೇತನದ ನಾಟ್ಯಾಲಯ ವತಿಯಿಂದ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಸೆಪ್ಟೆಂಬರ್‌ 1 ರಿಂದ 3 ರವರೆಗೆ ಪ್ರತಿ ದಿನ ಸಂಜೆ 6.30ಕ್ಕೆ ನಾಟ್ಯಾರಾಧನಾ 12  ರಾಷ್ಟ್ರೀಯ ನೃತ್ಯ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ನಾಟ್ಯಾಲಯ ಗೌರವಾಧ್ಯಕ್ಷ, ಶಾಸಕ ಎಸ್‌.ಎನ್‌.ಚನ್ನಬಸಪ್ಪ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಸೆ. 1ರ ಸಂಜೆ 6.30ಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಉದ್ಘಾಟಿಸುವರು. ಮೂರು ದಿನಗಳ ಕಾಲ  ನೃತ್ಯ ಮಹೋತ್ಸವ ಜರುಗಲಿದ್ದು, ಶುಕ್ರವಾರ ನಾಟ್ಯಾಲಯದ ಸಮಸ್ತ ವಿದ್ಯಾರ್ಥಿಗಳು ಚಿಂತಯಾಮಿ ಜಗದಂಬಾ ಎಂಬ ನರ್ತನ ಮಾರ್ಗ ಪ್ರಸ್ತುತಿ ಪಡಿಸಲಿದ್ದಾರೆ. ನಾಟ್ಯಾಲಯದ 162 ಶಿಷ್ಯಂದಿರು ಹೆಜ್ಜೆ ಹಾಕಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Click on below this picture, Like & Follow Facebook Page ” Digi Malenadu “

ಸೆ. 2 ರ ಶನಿವಾರ ಸಂಜೆ 6.30 ಕ್ಕೆ ಬಸವಕೇಂದ್ರದ ಡಾ. ಬಸವಕೇಂದ್ರ ಮರುಳ ಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಾಟ್ಯಾಲಯದ ನೃತ್ಯಗುರು ಸಹನಾ ಚೇತನ್‌ಅವರು ಏಕವ್ಯಕ್ತಿ ನೃತ್ಯ ರೂಪಕ ಹನುಮಂತ ದೇವ ನಮೋ ಪ್ರಸ್ತುತ ಪಡಿಸಲಿದ್ದಾರೆ. ಹಿರಿಯ ವಿದ್ಯಾರ್ಥಿಗಳು ಜಯಜಯ ವಿಶ್ವವಿಜಯಿ ಬಸವ, ಬಸವಣ್ಣನವರ ವಚನಾಧಾರಿತ ನೃತ್ಯರೂಪಕ ನಡೆಸಿಕೊಡುವರು ಎಂದರು.

ಸೆ. 3 ರ ಭಾನುವಾರ ಸಂಜೆ 6:30ಕ್ಕೆ ವಿಧಾನ ಪರಿಷತ್‌ ಶಾಸಕ ಡಿ.ಎಸ್‌.ಅರುಣ್‌, ಪಾಲಿಕೆ ಸದಸ್ಯ ಪ್ರಭಾಕರ್ ಭಾಗವಹಿಸುವರು. ‌ಸಹಚೇತನ ನಾಟ್ಯಾಲಯ ಅಧ್ಯಕ್ಷ ಎನ್.ಆರ್.ಪ್ರಕಾಶ್‌, ನೃತ್ಯ ಗುರು ಸಹನಾ ಚೇತನ್ ಉಪಸ್ಥಿತರಿರುವರು. ಅಂತರಾಷ್ಟ್ರೀಯ ನೃತ್ಯ ಕಲಾವಿದರಾದ ಶುಭಿ ಜೋಹರಿ ಹಾಗೂ ಅಮಿತ್ ಖಿಂಚಿ ಅವರ ಯುಗಳ ಕಥಕ್ ನೃತ್ಯ ಪ್ರಸ್ತುತಗೊಳ್ಳಲಿದೆ. ಪಂಜಾಬ್ ಪ್ರಾಂತ್ಯದ ರೋಚಕ ಸಾಹಸಮಯ ನೃತ್ಯ ಘಟ್ಕಾ – ಸಮರ ಕಲೆ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಪ್ರಮುಖರಾದ ಎನ್. ಆರ್. ಪ್ರಕಾಶ್, ನೃತ್ಯಗುರು ಸಹನಾ ಚೇತನ್, ಮಾಲತೇಶ್, ಚೇತನ್‌, ಡಾ. ನಾಗಮಣಿ, ಆನಂದ್ ರಾಮ್, ಸಿಂಧುಶ್ರೀ ಅಡಿಗ ಸುದ್ದಿಗೋಷ್ಠಿಯಲ್ಲಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!