ಸಾಂಪ್ರದಾಯಿಕ ಉಡುಪು ಧರಿಸಿ ಮಿಂಚಿದ ವಿದ್ಯಾರ್ಥಿಗಳು, ಶಿವಮೊಗ್ಗದ ಎಸ್ ಆರ್ ಎನ್ ಎಂ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಭ್ರಮ

ಸಾಂಪ್ರದಾಯಿಕ ಉಡುಪು ಧರಿಸಿ ಮಿಂಚಿದ ವಿದ್ಯಾರ್ಥಿಗಳು, ಶಿವಮೊಗ್ಗದ ಎಸ್ ಆರ್ ಎನ್ ಎಂ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಭ್ರಮ

ಶಿವಮೊಗ್ಗ | 8 ಆಗಸ್ಟ್‌ 2023 | ಡಿಜಿ ಮಲೆನಾಡು.ಕಾಂ

ಕಾಲೇಜು ಯೂನಿಫಾರಂ ಧರಿಸಿ ದಿನ ನಿತ್ಯ ಬರುತ್ತಿದ್ದ ವಿದ್ಯಾರ್ಥಿಗಳು ಮಂಗಳವಾರ ಬಣ್ಣ ಬಣ್ಣದ ವಿಶೇಷ ಉಡುಪುಗಳನ್ನು ಧರಿಸಿ ಸಂಭ್ರಮಿಸಿದರು. ಪಂಚೆ, ಧೋತಿ ತೊಟ್ಟ ವಿದ್ಯಾರ್ಥಿಗಳು, ಸೀರೆ ಹೂವು ಮುಡಿದ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ನಗರದ ಎಸ್.ಆರ್.ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಂಪ್ರದಾಯಿಕ ದಿನ (ಟ್ರೆಡಿಷನಲ್ ಡೇ) ಕಾರ್ಯಕ್ರಮದಲ್ಲಿ ಬಿಸಿಎ, ಬಿಎಸ್‌ಸಿ ವಿದ್ಯಾರ್ಥಿಗಳು ವಿವಿಧ ಬಗೆಯ ವೇಷಭೂಷಣಗಳನ್ನು ಧರಿಸಿದ್ದರು.

Click on below this picture, Like & Follow Facebook Page ” Digi Malenadu “

ಉತ್ತರ ಕರ್ನಾಟಕ, ಮಂಗಳೂರು, ಕೇರಳ ಹಾಗೂ ಕೊಡಗಿನ ಸಾಂಪ್ರದಾಯಿಕ ಉಡುಗೆ ಸೇರಿದಂತೆ ವೈವಿಧ್ಯ ಪ್ರಾದೇಶಿಕತೆ ಪ್ರತಿಬಿಂಬಿಸುವ ಉಡುಪುಗಳನ್ನು ಧರಿಸಿ ವಿದ್ಯಾರ್ಥಿಗಳು ಮಿಂಚಿದರು. ಹುಡುಗಿಯರು ಓಣಂ ಸೀರೆ, ಲಂಬಾಣಿ ಉಡುಗೆ, ಇಳಕಲ್ ಸೀರೆ, ಮೈಸೂರು ಮಲ್ಲಿಗೆ ಮುಡಿಯಲ್ಲಿಟ್ಟು ದೇಸಿ ಉಡುಪುಗಳಲ್ಲಿ ವಿದ್ಯಾರ್ಥಿನಿಯರು ಕಂಗೊಳಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಹುಡುಗರು ಜುಬ್ಬಾ, ಪೈಜಾಮ್, ಧೋತಿ, ಕತ್ತಿಗೆ ಸ್ಕಾರ್ಪ್, ಲುಂಗಿ, ರೇಷ್ಮೆ ಅಂಗಿ ಧರಿಸಿ ಗಮನ ಸೆಳೆದರು. ಇದೇ ವೇಳೆ ಸರಸ್ವತಿ ಪೂಜೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಗೋಡೆಯ ಮೇಲೆ ಹಸೆ ಚಿತ್ತಾರ ಬರೆದು ಸಂಭ್ರಮಿಸಿದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!