ಎನ್ ಯು ಆಸ್ಪತ್ರೆಯಿಂದ ನೂತನ ತಂತ್ರಜ್ಞಾನ ಬಳಸಿ ಯಶಸ್ವಿ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆ
ಶಿವಮೊಗ್ಗ | 27 ಸೆಪ್ಟೆಂಬರ್ 2023 | ಡಿಜಿ ಮಲೆನಾಡು.ಕಾಂ
ಮೂವತ್ತು ವರ್ಷಕ್ಕಿಂತ ಕೆಳಗಿನವರಲ್ಲಿ ಕಿಡ್ನಿ ವೈಫಲ್ಯ ಸಾಮಾನ್ಯ ಸಂಗತಿ ಆಗಿದ್ದು, ಅತೀ ಕಿರಿಯ ವಯಸ್ಸಿನಲ್ಲಿ ಕಿಡ್ನಿ ವೈಫಲ್ಯಕ್ಕೊಳಗಾದ ಮೂವರಿಗೆ ಶಿವಮೊಗ್ಗದ ಎನ್ ಯು ಆಸ್ಪತ್ರೆಯಲ್ಲಿ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ ಎಂದು ಟ್ರಾನ್ಸ್ ಪ್ಲಾಂಟ್ ಫಿಷಿಶಿಯನ್ ಡಾ. ಪ್ರವೀಣ್ ಮಾಳವದೆ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಟೈಪ್ 1 ಡಯಾಬಿಟಿಸ್‌ನಿಂದ ಬಳಲುತ್ತಿರುವ 22 ವರ್ಷದ ಯುವಕನಲ್ಲಿ ಕಿಡ್ನಿ ಕಾಯಿಲೆ ಕಾಣಿಸಿಕೊಂಡಿತ್ತು. ಜುಲೈ 27 ರಂದು ಕಿಡ್ನಿ ಟ್ರಾನ್ಸ್ ಪ್ಲಾಂಟ್ ಯಶಸ್ವಿಯಾಗಿ ಮಾಡಲಾಗಿದೆ. ಈ ಪ್ರಕರಣದಲ್ಲಿ ತಾಯಿಯೇ ಮಗನಿಗೆ ಕಿಡ್ನಿ ದಾನ ಮಾಡಿದ್ದಾರೆ. ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಎನ್‌ಯು ಆಸ್ಪತ್ರೆಯು ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Click on below this picture, Like & Follow Facebook Page ” Digi Malenadu “
ರೋಬೊಟಿಕ್ ಸರ್ಜನ್ ಡಾ. ಪ್ರದೀಪ ಎಂ.ಜಿ ಮಾತನಾಡಿ, ಹುಟ್ಟಿನಿಂದಲೇ ಒಂದೇ ಕಿಡ್ನಿ ಮತ್ತು ಮೆಗಾ ಯುರೆಟರ್‌ನೊಂದಿಗೆ ಜನಿಸಿದ್ದ ಬಾಲಕನಿಗೆ 11 ವರ್ಷವಿದ್ದಾಗ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಎನ್‌ಯು ಟ್ರಸ್ಟ್ ಆರ್ಥಿಕ ಸಹಾಯದೊಂದಿಗೆ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಅನ್ನು ಯಶಸ್ವಿಯಾಗಿ ನಡೆಸಲಾಯಿತು. ಈಗ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಇನ್ನೊಂದು ಪ್ರಕರಣದಲ್ಲಿ 3 ರಕ್ತನಾಳಗಳುಳ್ಳ ಕಿಡ್ನಿ ಹೊಂದಿದ್ದರಿಂದ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಶಸ್ತ್ರಚಿಕಿತ್ಸೆಯು ಸವಾಲಿನಿಂದ ಕೂಡಿತ್ತು. ಆದರೆ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ ಸವಾಲನ್ನು ಎನ್‌ಯು ಆಸ್ಪತ್ರೆಯ ಕಿಡ್ನಿ ಟ್ರಾನ್ಸ್ ಪ್ಲಾಂಟ್ ತಂಡ ಯಶಸ್ವಿಯಾಗಿ ಮಾಡಿದೆ ಎಂದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಟ್ರಾನ್ಸ್ ಪ್ಲಾಂಟ್ ಅನಸ್ತೇಸ್ಟ್ ಡಾ. ಕಾರ್ತಿಕ್ ಎಸ್.ಎಲ್, ಮೊಹಮ್ಮದ್ ಸುದ್ದಿಗೋಷ್ಠಿಯಲ್ಲಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ : https://digimalenadu.com/about-us/