ಔಷಧಗಳ ಜಾಗತಿಕ ಸ್ಪರ್ಧೆಗೆ ಪೇಟೆಂಟ್ ತುಂಬಾ ಮುಖ್ಯ

ಔಷಧಗಳ ಜಾಗತಿಕ ಸ್ಪರ್ಧೆಗೆ ಪೇಟೆಂಟ್ ತುಂಬಾ ಮುಖ್ಯ

ಶಿವಮೊಗ್ಗ | 2 ಸೆಪ್ಟೆಂಬರ್ 2023 | ಡಿಜಿ ಮಲೆನಾಡು.ಕಾಂ

ಭಾರತದಲ್ಲಿ ಪ್ರತಿ ತಿಂಗಳು 250ಕ್ಕೂ ಹೆಚ್ಚು ಹೊಸ ಔಷಧೀಯ ಉತ್ಪನ್ನಗಳು ಹೊರಬರುತ್ತಿದ್ದು ನಾವೀನ್ಯತೆ ಮತ್ತು ಪೇಟೆಂಟ್ ಇದ್ದಾಗ ಜಾಗತಿಕವಾಗಿ ಸ್ಪರ್ಧೆ ನೀಡಲು ಸಾಧ್ಯ ಎಂದು ಜಗದಾಲೆ ಇಂಡಸ್ಟ್ರೀಸ್ ಮಾರುಕಟ್ಟೆ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಕೆ.ಎಲ್.ಶಿವಕುಮಾರ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ನಾವೀನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವತಿಯಿಂದ ಫಾರ್ಮಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪೇಟೆಂಟ್ ಫೈಲಿಂಗ್ ಮತ್ತು ನಾವೀನ್ಯ ಯೋಚನೆಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

Click on below this picture, Like & Follow Facebook Page ” Digi Malenadu “

1970 ರ ಪೇಟೆಂಟ್ ಕಾಯಿದೆಯಿಂದ ಭಾರತ ಔಷಧೀಯ ಕ್ಷೇತ್ರದಲ್ಲಿ ಉತ್ಪನ್ನಗಳ ಸ್ವಾವಲಂಬನೆ ಪಡೆಯಿತು. ದೇಶದ ಔಷಧ ವಿಜ್ಞಾನಿಗಳ‌ ನಿರಂತರ ಶ್ರಮ ಸಾಧನೆಗೆ ಕಾರಣವಾಗಿದೆ. ಭಾರತದಲ್ಲಿ ಮೂರು ಸಾವಿರ ಔಷಧೀಯ ಕಂಪನಿಗಳು, ಹತ್ತು ಸಾವಿರ ಕಾರ್ಖಾನೆಗಳಿವೆ. ಭಾರತದ ಫಾರ್ಮಸಿ ಕ್ಷೇತ್ರ ಅತ್ಯಧಿಕ ಉದ್ಯೋಗವಕಾಶ ಮತ್ತು ಸಂಶೋಧನಾ ಅವಕಾಶಗಳನ್ನು ಹೊಂದಿದೆ ಎಂದು ತಿಳಿಸಿದರು.

ಪದವಿ ಪಡೆದು ಕಾಲೇಜಿನಿಂದ ಹೊರಬಂದ ನಂತರ ಬದುಕಿನ ನಿಜವಾದ ಅರ್ಥ ತಿಳಿಯುತ್ತದೆ. ಪ್ರತಿ ದಿನವು ಆರೋಗ್ಯ ಕ್ಷೇತ್ರ ಸವಾಲುಗಳನ್ನು ಎದರಿಸುತ್ತಿದೆ. ಅಂತಹ ಸವಾಲುಗಳಿಗೆ ನಾವೀನ್ಯತೆಯ ಪರಿಹಾರ ನೀಡಬೇಕು. ರೋಗಗಳ ನಿವಾರಣೆ ಮತ್ತು ರೋಗಿಗಳ ಆರೈಕೆಯಲ್ಲಿ ಫಾರ್ಮಸಿಯ ನಾವೀನ್ಯಯುತ ಯೋಜನೆಗಳ ಅವಶ್ಯಕತೆಯ ಅರಿವು ಪಡೆಯಬೇಕು ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ರಾಷ್ಟ್ರೀಯ ಶಿಕ್ಷಣ ಸಮಿತಿಯ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಮಾತನಾಡಿ, ಫಾರ್ಮಸಿ ಮತ್ತು ತಾಂತ್ರಿಕತೆ ಒಟ್ಟಾಗಿ ಸಂಶೋಧನೆಗಳನ್ನು ನಡೆಸಲು ಅನೇಕ ಅವಕಾಶಗಳಿವೆ. ಕಾಲೇಜುಗಳ ಸಂಶೋಧನಾ ಪ್ರಯೋಗಾಲಯಗಳು ಸಮಯದ ನಿರ್ಬಂಧವಿಲ್ಲದೆ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.

ಜಗದಾಲೆ ಇಂಡಸ್ಟ್ರೀಸ್ ನಿಯಂತ್ರಕ ವ್ಯವಹಾರಗಳ ಸಹಾಯಕ ವ್ಯವಸ್ಥಾಪಕ ಲತಾ.ಸಿ.ವಿ., ರಾಷ್ಟ್ರೀಯ ಔಷಧ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಜಿ.ನಾರಾಯಣಮೂರ್ತಿ, ಜೆಎನ್ಎನ್ ಎಂಜಿನಿಯರಿಂಗ್ ಕಾಲೇಜಿನ ನಾವೀನ್ಯತೆ ಮತ್ತು ಸಂಶೋಧನೆ ಕೇಂದ್ರದ ಸಂಯೋಜಕ ಕೆ.ಎಲ್.ಅರುಣ್ ಕುಮಾರ್, ಸಿ.ಎಂ.ನೃಪತುಂಗ ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!