ಶಿವಮೊಗ್ಗದಲ್ಲಿ ಮಲ್ನಾಡ್‌ ಶೈರ್‌ ರೆಸಾರ್ಟ್‌ ಅಕ್ಟೋಬರ್‌ 18ರಿಂದ ಪ್ರಾರಂಭ

ಶಿವಮೊಗ್ಗದಲ್ಲಿ ಮಲ್ನಾಡ್‌ ಶೈರ್‌ ರೆಸಾರ್ಟ್‌ ಅಕ್ಟೋಬರ್‌ 18ರಿಂದ ಪ್ರಾರಂಭ

ಶಿವಮೊಗ್ಗ | 17 ಅಕ್ಟೋಬರ್ 2023 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕೇಂದ್ರಿಯ ವಿದ್ಯಾಲಯ ಸಮೀಪದಲ್ಲಿ ಡಾ. ಮಲ್ಲೇಶ್‌ ಕನ್ವೆಷನ್‌ ಸೆಂಟರ್‌ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ “ಮಲ್ನಾಡ್‌ ಶೈರ್‌ ರೆಸಾರ್ಟ್‌” ಅಕ್ಟೋಬರ್‌ 18ರಿಂದ ಶುಭಾರಂಭಗೊಳ್ಳಲಿದೆ ಎಂದು ರೆಸಾರ್ಟ್‌ ಎಂ.ಡಿ. ಡಾ. ಸ್ವರೂಪ್‌ ಮಲ್ಲೇಶ್‌ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

Click on below this picture, Like & Follow Facebook Page ” Digi Malenadu “

ಮಲ್ನಾಡ್‌ ಶೈರ್‌ ರೆಸಾರ್ಟ್‌ನಲ್ಲಿ ಆಧುನಿಕ ಸೌಕರ್ಯವುಳ್ಳ ಕೊಠಡಿಗಳಿದ್ದು, ಮೂರು ಸ್ವಿಮ್ಮಿಂಗ್‌ ಫೂಲ್‌, ಬ್ಯಾಂಕ್ವೆಟ್‌ ಹಾಲ್‌, ಕ್ಲಬ್‌, ಸ್ಪಾ, ಗೇಮ್ಸ್‌ ಏರಿಯಾ, ರೆಸ್ಟೋರೆಂಟ್‌, ಜಿಮ್‌ ಸೇರಿದಂತೆ ವಿಶೇಷ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಕ್ಟೋಬರ್‌ 18ರ ಬೆಳಗ್ಗೆ 9.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್‌.ಕೆ.ಪಾಟೀಲ್‌ ಉದ್ಘಾಟನೆ ನೆರವೇರಿಸಲಿದ್ದಾರೆ. ಎಪಿಎಂಸಿ ಸಚಿವ ಶಿವಾನಂದ ಪಾಟೀಲ್‌, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ, ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ಶಿವಮೊಗ್ಗ ಶಾಸಕ ಎಸ್‌.ಎನ್‌.ಚನ್ನಬಸಪ್ಪ, ಶಾಸಕಿ ಶಾರದಾ ಪೂರ್ಯಾನಾಯ್ಕ, ಶಾಸಕ ಬಿ.ಕೆ.ಸಂಗಮೇಶ್‌, ಶಾಸಕ ಬಿ.ವೈ.ವಿಜಯೇಂದ್ರ, ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ, ಕೆ.ಗೋಪಾಲಯ್ಯ, ಎಂಎಲ್‌ಸಿ ಎಸ್‌.ರುದ್ರೇಗೌಡ, ಡಿ.ಎಸ್‌.ಅರುಣ್‌, ಮಂಜುನಾಥ್‌ ಭಂಡಾರಿ, ಬ್ಯಾಂಕ್‌ ಆಫ್‌ ಬರೋಡಾ ಜನರಲ್‌ ಮ್ಯಾನೇಜರ್‌ ಗಾಯತ್ರಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಡಾ. ಶಶಿಕಲಾ ಮಲ್ಲೇಶ್‌ ಮಾತನಾಡಿ, ಡಾ. ಮಲ್ಲೇಶ್‌ ಹುಲ್ಲಮನಿ ಅವರ ಕನಸಿನ ಕೂಸಾದ ಯೋಜನೆಯು ಅನಾವರಣಗೊಂಡಿದ್ದು, ಅಕ್ಟೋಬರ್‌ 18ರಂದು ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು. ಕರಿಬಸವರಾಜ್‌ ಬೆನ್ನೂರು, ರಾಜೇಶ್‌ ರಾವತ್‌, ಶ್ರೇಯಾ ಮಲ್ಲೇಶ್‌, ರಾಮಚಂದ್ರ ರೆಡ್ಡಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!