ಬದುಕು ರೂಪಿಸಿಕೊಳ್ಳಲು ವಿದ್ಯಾಸಂಸ್ಥೆಗಳ ಪಾತ್ರ ಮಹತ್ತರ

ಬದುಕು ರೂಪಿಸಿಕೊಳ್ಳಲು ವಿದ್ಯಾಸಂಸ್ಥೆಗಳ ಪಾತ್ರ ಮಹತ್ತರ

ಶಿವಮೊಗ್ಗ | 8 ಅಕ್ಟೋಬರ್ 2023 | ಡಿಜಿ ಮಲೆನಾಡು.ಕಾಂ

ಹಿರಿಯ ವಿದ್ಯಾರ್ಥಿಗಳೇ ವಿದ್ಯಾಸಂಸ್ಥೆಯ ನಿಜವಾದ ರಾಯಭಾರಿಗಳು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಅಭಿಪ್ರಾಯ ಪಟ್ಟರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Click on below this picture, Like & Follow Facebook Page ” Digi Malenadu “

ಬದುಕನ್ನ ರೂಪಿಸಿಕೊಳ್ಳುವಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ಯಾವುದೇ ವಿದ್ಯಾ ಸಂಸ್ಥೆ ಗಟ್ಟಿಗೊಳ್ಳಲು ಕಾಲೇಜಿನ ಬೋಧನಾ ಕ್ರಮದ ಜೊತೆಗೆ ಹಿರಿಯ ವಿದ್ಯಾರ್ಥಿಗಳ ಭಾಗವಹಿಸುವಿಕೆಯು ಅಷ್ಟೇ ಮುಖ್ಯ. ಇದರಿಂದ ಸ್ನೇಹ ಸಂಬಂಧಗಳು ಗಟ್ಟಿಗೊಳ್ಳಲಿದೆ ಎಂದು ತಿಳಿಸಿದರು.

ಕಾಲೇಜಿನ ಅವಿನಾಭಾವ ಸಂದರ್ಭ ನೆನೆದಾಗ ನಮಗೆ ರೋಮಾಂಚನ ಆಗುತ್ತದೆ. ಇನ್ನಷ್ಟು ರೋಮಾಂಚಿತವೆಂದರೆ ನಮ್ಮ ಬಾಲ್ಯದ ದಿನ. ಅಂತಹ ವಿಶೇಷ ಸಂದರ್ಭ ನೆನೆದು ಹಿರಿಯ ವಿದ್ಯಾರ್ಥಿಗಳು ಹೇಳುವ ಒಳ್ಳೆಯ ಮಾತುಗಳೇ ಸಂಸ್ಥೆಯ ಉನ್ನತಿಗೆ ನಿಜವಾದ ಪೂರಕ ಶಕ್ತಿ ಎಂದರು.

ಕಲಿಯಲು ಅನೇಕ ವಿಚಾರಗಳಿವೆ, ಅಂತಹ ಹೊಸತನವನ್ನು ಕಲಿಯುವ ಸೌಜನ್ಯತೆ ನಮ್ಮದಾಗಬೇಕಿದೆ. ಇಲ್ಲವಾದಲ್ಲಿ ಅಹಂಕಾರ ನಮ್ಮ ಹೆಗಲ ಮೇಲೇರಿ ಕುಳಿತುಬಿಡುತ್ತದೆ. ಸ್ನೇಹವೆಂಬುದು ಅಮೂಲ್ಯ ಆಯ್ಕೆಯಾಗಿದ್ದು ಸಣ್ಣವರೊಂದಿಗೆ ಸ್ನೇಹ ಮಾಡಲು ಹಿಂಜರಿಯದಿರಿ ಅದರೇ ಸಣ್ಣತನ ಇರುವವರಲ್ಲಿ ಎಂದಿಗೂ ಸ್ನೇಹ ಮಾಡಿಕೊಳ್ಳಬೇಡಿ ಎಂದು ಹೇಳಿದರು.

ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಹಿರಿಯ ವಿದ್ಯಾರ್ಥಿಗಳ ಸಂಘದ ವಿಶೇಷವೆಂದರೆ ಅಲ್ಲಿ ವಯಸ್ಸಿನ ಅಂತರವಿರುವುದಿಲ್ಲ, ಸ್ನೇಹ ಸಂಬಂಧಗಳಿಗೆ ಹೆಚ್ಚಿನ ಆದ್ಯತೆಯಿರುತ್ತದೆ. ಹಿರಿಯ ವಿದ್ಯಾರ್ಥಿಗಳಿಗೆ ನಾಲ್ಕು ಗೊಡೆಯ ನಡುವಿನ ಅನುಭವವಿರುತ್ತದೆ. ಹೊರಜಗತ್ತಿನ ಅನುಭವವಿರುತ್ತದೆ. ಇಂತಹ ಅನುಭವಗಳಿಂದ ನಾವು ಓದಿದ ವಿದ್ಯಾಸಂಸ್ಥೆಗಳಲ್ಲಿ ಏನೆಲ್ಲಾ ಮಾರ್ಪಾಟುಗಳನ್ನು ಮಾಡಬಹುದು ಎಂದು ಆಲೋಚಿಸುವಂತೆ ಮನವಿ ಮಾಡಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸದಸ್ಯ ಎಸ್.ಚಂದ್ರಶೇಖರ, ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಫಾರ್ಮಸಿ ನಿರ್ದೇಶಕ ಡಾ. ಜಗದೀಶ ಸಿಂಗ್, ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಎಸ್.ಎಂ.ಪ್ರಸನ್ನ ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!