ಶಿವಮೊಗ್ಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ “ನಾಡಿಗೆ ನಾರಿಯ ನಡಿಗೆ” ವಿಶೇಷ ಕಾರ್ಯಕ್ರಮ ನವೆಂಬರ್ 4ಕ್ಕೆ

ಶಿವಮೊಗ್ಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ “ನಾಡಿಗೆ ನಾರಿಯ ನಡಿಗೆ” ವಿಶೇಷ ಕಾರ್ಯಕ್ರಮ ನವೆಂಬರ್ 4ಕ್ಕೆ

ಶಿವಮೊಗ್ಗ | 6 ಅಕ್ಟೋಬರ್ 2023 | ಡಿಜಿ ಮಲೆನಾಡು.ಕಾಂ

ಕನ್ನಡ ರಾಜ್ಯೋತ್ಸವ ಪ್ರಯುಕ್ತ ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ಹಾಗೂ ಸಮನ್ವಯ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ನಗರದ ಅಂಬೇಡ್ಕರ್ ಭವನದದಲ್ಲಿ ನವೆಂಬರ್ 4ರ ಮಧ್ಯಾಹ್ನ 3ಕ್ಕೆ “ನಾಡಿಗೆ ನಾರಿಯ ನಡಿಗೆ” ಎನ್ನುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ನಾಡಹಬ್ಬಕ್ಕೆ 2 ಕಿಮೀ ನಡಿಗೆ ಘೋಷವಾಕ್ಯದಡಿ ಆಯೋಜಿಸಿರುವ ನಾಡಿಗೆ ನಾರಿಯ ನಡಿಗೆ ಕಾರ್ಯಕ್ರಮದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರು ಹಾಗೂ ಮಹಿಳಾ ಸಂಘದ ಪ್ರತಿನಿಧಿಗಳು ಭಾಗವಹಿಸಬಹುದಾಗಿದೆ. ಅಂಬೇಡ್ಕರ್ ಭವನ, ಗೋಪಿ ವೃತ್ತ ( ಟಿಎಸ್‌ಬಿ ವೃತ್ತ ), ಎಎ ವೃತ್ತ, ವೀರಭದ್ರೇಶ್ವರ ಚಿತ್ರಮಂದಿರ, ಸಿಟಿ ಕ್ಲಬ್ ಮುಖಾಂತರ ಮತ್ತೆ ಅಂಬೇಡ್ಕರ್ ಭವನ ತಲುಪುವುದು ನಡಿಗೆಯ ಮಾರ್ಗವಾಗಿದೆ.

Click on below this picture, Like & Follow Facebook Page ” Digi Malenadu “

68 ಮೀಟರ್ ಉದ್ದದ ನಮ್ಮ ನಾಡಿನ ಧ್ವಜವನ್ನು ನಡಿಗೆಯಲ್ಲಿ ಪ್ರದರ್ಶಿಸುವುದು ವಿಶೇಷ ಆಕರ್ಷಣೆಯಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾರೋಣ, ಎಲ್ಲರೂ ಒಂದಾಗಿ ನಡೆಯೋಣ, ಕನ್ನಡಾಂಬೆಗೆ ಜೈಕಾರ ಹಾಕೋಣ ಎಂಬ ಘೋಷಣೆಯನ್ನು ಪ್ರತಿಬಿಂಬಿಸಲಾಗುತ್ತದೆ.

ರಾಜ್ಯದಲ್ಲಿಯೇ ಮೊದಲ ಬಾರಿಗೆ ಇಂತಹ ವಿಭಿನ್ನ ಕಾರ್ಯಕ್ರಮವು ಶಿವಮೊಗ್ಗ ನಗರದಲ್ಲಿ ಆಯೋಜನೆ ಆಗಿದ್ದು, ಕರ್ನಾಟಕದ ವಿಭಿನ್ನ ಶೈಲಿಯ ಸೀರೆಯುಟ್ಟು ನಮ್ಮ ನಾಡು ನುಡಿ ಪರಂಪರೆ, ಸಂಸ್ಕೃತಿ ಬಿಂಬಿಸುವ ಉಡುಗೆ ತೊಡುಗೆಯ ವಸ್ತ್ರ ಸಂಹಿತೆಯಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಪ್ರವೇಶ ಶುಲ್ಕವು ಒಂದು ತಂಡಕ್ಕೆ 500 ರೂ ಹಾಗೂ ಒಬ್ಬರಿಗೂ 100 ರೂ. ಇರಲಿದೆ. 15 ಸಾವಿರ ರೂ. ಮೊದಲ ಬಹುಮಾನ, 10 ಸಾವಿರ ರೂ. ಎರಡನೇ ಬಹುಮಾನ ಹಾಗೂ 5 ಸಾವಿರ ರೂ. ಮೂರನೇ ಬಹುಮಾನ ಇರಲಿದೆ.

ಮಹಿಳೆಯರ ಅತ್ಯಾಕರ್ಷಕ ಒಡವೆ, ಸೀರೆ ತೊಡುಗೆಯ ಪ್ರದರ್ಶನ, ಮನೋರಂಜನೆ ಚಟುವಟಿಕೆಗಳು, ರುಚಿಕರ ತಿಂಡಿ ತಿನಿಸು ಮಳಿಗೆ, ಪೋಟೋ ಬೂತ್ ಮುಂತಾದ ಆಕರ್ಷಣೆಗಳು ಕಾರ್ಯಕ್ರಮದಲ್ಲಿ ಇರಲಿದೆ. ಸ್ಪರ್ಧೆಯ ನಿಯಮ, ಮಾಹಿತಿ ಹಾಗೂ ನೋಂದಣಿಗೆ 9980181488 ಸಂಪರ್ಕಿಸಬಹುದಾಗಿದೆ.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!