ವ್ಯಾಪಾರ ವಹಿವಾಟಿನ ಜತೆಯಲ್ಲಿ ಸಮಾಜಮುಖಿ ಕಾರ್ಯ ಶ್ಲಾಘನೀಯ
ಶಿವಮೊಗ್ಗ | 10 ಅಕ್ಟೋಬರ್ 2023 | ಡಿಜಿ ಮಲೆನಾಡು.ಕಾಂ
ಗ್ರಾಹಕರು ನೇರವಾಗಿ ವ್ಯಾಪಾರ ವಹಿವಾಟು ನಡೆಸಿದಾಗ ಉತ್ತಮ ಬಾಂಧವ್ಯ ವೃದ್ಧಿ ಆಗುವ ಜತೆಯಲ್ಲಿ ವ್ಯಾಪಾರಸ್ಥರು ಒಳ್ಳೆಯ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶ್ರೀನಿಧಿ ಸಿಲ್ಕ್ ಮತ್ತು ಟೆಕ್ಸ ಟೈಲ್ಸ್ ವತಿಯಿಂದ ಅಭಿಯಂತರು, ಗುತ್ತಿಗೆದಾರರು ಹಾಗೂ ಕಾರ್ಮಿಕರಿಗೆ ಆಯೋಜಿಸಿದ್ದ ರಿಯಾಯಿತಿ ಮೇಳ ಉದ್ಘಾಟಿಸಿ ಮಾತನಾಡಿದರು.
Click on below this picture, Like & Follow Facebook Page ” Digi Malenadu “
ತಂತ್ರಜ್ಞಾನ ಯುಗದಲ್ಲಿ ಆನ್‌ಲೈನ್ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಹೆಚ್ಚು ನಡೆಯುತ್ತಿದ್ದು, ಆದರೆ ಗುಣಮಟ್ಟದ ಬಗ್ಗೆ ಸರಿಯಾಗಿ ಗ್ರಾಹಕರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಫ್ ಲೈನ್‌ನಲ್ಲಿ ಗ್ರಾಹಕರು ನೇರ ಖರೀದಿಗೆ ಮುಂದಾದಗ ಗುಣಮಟ್ಟದ ಖಾತ್ರಿ ಸಿಗುತ್ತದೆ ಎಂದು ತಿಳಿಸಿದರು.
ಶ್ರೀನಿಧಿ ಸಿಲ್ಕ್ ಮತ್ತು ಟೆಕ್ಸ್ ಟೈಲ್ಸ್ ಸಂಸ್ಥೆಯು ಸುದೀರ್ಘ ದಶಕಗಳ ಅವಧಿಯಿಂದ ವ್ಯಾಪಾರ ವಹಿವಾಟು ನಡೆಸಿಕೊಂಡು ಬಂದಿದ್ದು, ಉದ್ಯಮದ ಜತೆಯಲ್ಲಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ವಿಶೇಷವಾಗಿ ಆಯೋಜಿಸಿಕೊಂಡು ಬರುತ್ತಿದೆ. ವಿಶೇಷ ರಿಯಾಯಿತಿ ಮೇಳ ಎಲ್ಲರಿಗೂ ಉಪಯೋಗ ಆಗಲಿ ಎಂದರು.
ಶ್ರೀನಿಧಿ ಸಿಲ್ಕ್ ಮತ್ತು ಟೆಕ್ಸ್ ಟೈಲ್ಸ್ ಸಂಸ್ಥೆಯ ಟಿ.ಆರ್.ಅಶ್ವತ್ಥ್ ನಾರಾಯಣಶೆಟ್ಟಿ ಮಾತನಾಡಿ, ಗ್ರಾಹಕರು ಆನ್‌ಲೈನ್‌ನಲ್ಲಿ ಖರೀದಿಸುವಾಗ ಬಟ್ಟೆಯ ಬಣ್ಣ, ಗುಣಮಟ್ಟ ತಿಳಿಯುವುದಿಲ್ಲ. ಆರ್ಡರ್ ತಲುಪಿದಾಗಲೇ ತಿಳಿಯುತ್ತದೆ. ಆದರೆ. ಸ್ಥಳೀಯವಾಗಿ ನೇರವಾಗಿ ಅಂಗಡಿಗಳಿಗೆ ಭೇಟಿ ಮಾಡಿ ಖರೀದಿ ಮಾಡಿದರೆ ಒಳ್ಳೆಯ ಉತ್ಪನ್ನಗಳು ನಮ್ಮದಾಗುತ್ತವೆ ಎಂದು ಹೇಳಿದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಶ್ರೀನಿಧಿ ಸಂಸ್ಥೆಯು ದಶಕಗಳಿಂದ ಶಿವಮೊಗ್ಗ ನಗರದಲ್ಲಿ ಉದ್ಯಮ ನಡೆಸುತ್ತಿದ್ದು, ವಿಶೇಷವಾಗಿ ಹಬ್ಬದ ಸಂದರ್ಭದಲ್ಲಿ ರಿ ಯಾಯತಿ ಮೇಳ ಹಮ್ಮಿಕೊಂಡಿದ್ದು, ಅಭಿಯಂತರು, ಗುತ್ತಿಗೆದಾರರು ಹಾಗೂ ಕಾರ್ಮಿಕರಿಗೆ ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ಗುತ್ತಿಗೆದಾರ ಮಂಜುನಾಥ್ ಅವರು ಶ್ರೀನಿಧಿ ಸಿಲ್ಕ್ ಮತ್ತು ಟೆ ಕ್ಸ್ ಟೈಲ್ಸ್ ಸಂಸ್ಥೆಯು ಆಯೋಜಿಸಿರುವ ರಿಯಾಯತಿ ಮೇಳಕ್ಕೆ ಶುಭಹಾರೈಸಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಶ್ರೀನಿಧಿ ಸಂಸ್ಥೆಯ ವೆಂಕಟೇಶ್, ರಾಮಪ್ರಸಾದ್, ಚೇತನ್, ಬದ್ರೀನಾಥ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ : https://digimalenadu.com/about-us/