ರಾಷ್ಟ್ರೀಯ ಶಿಕ್ಷಣ ಸಮಿತಿಗೆ ಗ್ರೀನ್ ಚಾಂಪಿಯನ್ ಪ್ರಶಸ್ತಿ

ರಾಷ್ಟ್ರೀಯ ಶಿಕ್ಷಣ ಸಮಿತಿಗೆ ಗ್ರೀನ್ ಚಾಂಪಿಯನ್ ಪ್ರಶಸ್ತಿ

ಶಿವಮೊಗ್ಗ | 8 ನವೆಂಬರ್ 2023 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ಜೆಎನ್‌ಎನ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಅಳವಡಿಸಿರುವ 400 ಕಿಲೋವ್ಯಾಟ್‌ ಸೌರ ವಿದ್ಯುತ್‌ ಸ್ಥಾವರಕ್ಕೆ ಟಾಟಾ ಕಂಪನಿಯು “ಗ್ರೀನ್‌ ಚಾಂಪಿಯನ್‌” ಪ್ರಶಸ್ತಿ ನೀಡಿ ಗೌರವಿಸಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

Click on below this picture, Like & Follow Facebook Page ” Digi Malenadu “

ಸಂಪೂರ್ಣ ಪರಿಸರ ಸ್ನೇಹಿಯಾದ ವಿದ್ಯುತ್‌ ಸ್ಥಾವರದಿಂದ ಪ್ರತಿ ವರ್ಷ 5 ಲಕ್ಷದ 50 ಸಾವಿರ ಯುನಿಟ್‌ ವಿದ್ಯುತ್‌ ಉತ್ಫಾದನೆಯಾಗುತ್ತಿದ್ದು, 12 ಸಾವಿರ ಟನ್‌ ಇಂಗಾಲ ( ಕಾರ್ಬನ್‌ ಡೈ ಆಕ್ಸೈಡ್) ಹೊರಸೂಸುವಿಕೆ ಕಡಿಮೆಯಾಗಿದೆ ಎಂದು ಕಂಪನಿ ಉಲ್ಲೇಖಿಸಿದೆ.

2020 ರಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಜೆಎನ್‌ಎನ್‌ ಎಂಜಿನಿಯರಿಂಗ್‌ ಕಾಲೇಜಿನ ವಿವಿಧ ವಿಭಾಗಗಳ ಕಟ್ಟಡದ ಮೇಲ್ಛಾವಣಿಯಲ್ಲಿ ಸ್ಥಾವರ ಅಳವಡಿಸಲಾಗಿದೆ. ಕಾಲೇಜಿಗೆ ಅಗತ್ಯವಿರುವ ದೈನಂದಿನ ವಿದ್ಯುತ್‌ ಪೂರೈಕೆಯ ಜೊತೆಗೆ ಗ್ರಿಡ್‌ ಸಂಪರ್ಕದ ಮೂಲಕ ವಿದ್ಯುಚ್ಚಕ್ತಿ ನಿಗಮಕ್ಕೆ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ದೇಶಿಯ ಉತ್ಫಾದನೆಗೆ ಹೆಚ್ಚು ಒತ್ತು ನೀಡಿ ದಾಬಸ್‌ಪೇಟೆಯಲ್ಲಿ ತಯಾರಾದ ಟಾಟಾ ಪವರ್‌ ಕಂಪನಿಯ ಉಪಕರಣಗಳನ್ನೆ ವಿದ್ಯುತ್‌ ಸ್ಥಾವರಕ್ಕೆ ಬಳಸಲಾಗಿತ್ತು. ವಿದ್ಯುತ್‌ ಸ್ಥಾವರದ ಮೂಲಕ 2020 ರಿಂದ ಈವೆರೆಗೆ 1 ಕೋಟಿ 73 ಲಕ್ಷ ರೂ.ಗಳಷ್ಟು ಸಂಸ್ಥೆಗೆ ಉಳಿತಾಯವಾಗಿದೆ.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!