ಮನೆ ಮನಗಳಲ್ಲಿಯೂ ಧಾರ್ಮಿಕ ಜಾಗೃತಿ, ಕಾರ್ತಿಕ ಚಿಂತನ ಕಾರ್ಯಕ್ರಮ

ಮನೆ ಮನಗಳಲ್ಲಿಯೂ ಧಾರ್ಮಿಕ ಜಾಗೃತಿ, ಕಾರ್ತಿಕ ಚಿಂತನ ಕಾರ್ಯಕ್ರಮ

ಶಿವಮೊಗ್ಗ | 28 ನವೆಂಬರ್ 2023 | ಡಿಜಿ ಮಲೆನಾಡು.ಕಾಂ

ಮನೆ ಮನಗಳಲ್ಲಿಯೂ ಧಾರ್ಮಿಕ ಚಿಂತನೆ ಜಾಗೃತಿಗೊಳಿಸುವ ಆಶಯದಿಂದ ಚಿಂತನ ಕಾರ್ತಿಕ ಹಮ್ಮಿಕೊಳ್ಳುತ್ತಿದ್ದು, ಮುಂದಿನ ಯುವಪೀಳಿಗೆಯಲ್ಲಿ ಧರ್ಮದ ಮಹ್ವತ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಬಸವ ಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ನಗರದ ಕೃಷಿ ನಗರದಲ್ಲಿರುವ ರೋಟರಿ ಜಿ.ವಿಜಯ್‌ಕುಮಾರ್ ಅವರ ಬಸವೇಶ್ವರ ನಿಲಯದಲ್ಲಿ ಬಸವಕೇಂದ್ರದ ವತಿಯಿಂದ ಆಯೋಜಿಸಿದ್ದ “ಚಿಂತನ ಕಾರ್ತಿಕ” ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

Click on below this picture, Like & Follow Facebook Page ” Digi Malenadu “

ಚಿಂತನಾ ಕಾರ್ತಿಕ ಮಾಸ ಪೂರ್ಣ ನಡೆಯುತ್ತಿದ್ದು, ಪ್ರತಿಯೊಂದು ದಿನವು ಒಂದೊಂದು ವಿಷಯಗಳ ಬಗ್ಗೆ ವಿಶೇಷ ಉಪನ್ಯಾಸಗಳ ಮೂಲಕ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಶಯಗಳ ಬಗ್ಗೆ ತಿಳಿಸುವ ಕೆಲಸ ಆಗುತ್ತಿದೆ. ಇದು ಅತ್ಯಂತ ಸಾರ್ಥಕ ಕಾರ್ಯ ಎಂದು ತಿಳಿಸಿದರು.

ಬೆಂಗಳೂರಿನ ಟೌನ್ ಹಾಲ್ ಕೊಡುಗೆ ನೀಡಿದ ದಾನಿ ಸರ್ ಕೆ.ಪಿ.ಪುಟ್ಟಣ್ಣ ಶೆಟ್ಟರು ಕುರಿತು ಎಂ.ವಿರೂಪಾಕ್ಷಪ್ಪ ಉಪನ್ಯಾಸದ ನೀಡಿದರು. ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಚಿಂತನ ಲಹರಿ ಕಾರ್ಯಕ್ರಮ ನಡೆಯಿತು. ಸೇವಾರ್ಥಿಗಳಾದ ಜಿ.ವಿಜಯ್‌ಕುಮಾರ್ ಮತ್ತು ಬಿಂದು ವಿಜಯ್‌ಕುಮಾರ್ ದಂಪತಿಯನ್ನು ಅಭಿನಂದಿಸಲಾಯಿತು.

ಮಹಾನಗರ ಪಾಲಿಕೆಯ ಸದಸ್ಯರಾದ ವಿಶ್ವಾಸ ಹಾಗೂ ಧೀರಜ್ ಹೊನ್ನವಿಲೆ ಮಾತನಾಡಿದರು. ಮನೆ ಮನಗಳನ್ನು ಬೆಳಗುತ್ತಿರುವ ಚಿಂತನ ಕಾರ್ತಿಕ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ ಎಲ್ಲಾ ಬಡಾವಣೆಗಳಲ್ಲಿ ನಡೆಯುತ್ತಿದೆ. ಧಾರ್ಮಿಕ ಜಾಗೃತಿಯನ್ನು ಮೂಡಿಸುವುದರ ಮುಖಾಂತರ ಸಂಸ್ಕಾರವನ್ನು ಕಲಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಇದರಿಂದ ಮನಸ್ಸುಗಳು ಸ್ವಚ್ಛವಾಗುತ್ತವೆ. ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ವೃದ್ಧಿಸುತ್ತದೆ. ಧಾರ್ಮಿಕ ಮನೋಭಾವನೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಶ್ರೀ ಶಿವಗಂಗಾ ರಾಘವ ಶಾಖೆ ಮತ್ತು ಕೃಷಿ ನಗರ ಯೋಗ ಶಾಖೆಯ ಶಿಕ್ಷಕರು ಪೂಜ್ಯರಿಂದ ಆಶೀರ್ವಾದ ಪಡೆದರು. ಯೋಗ ಶಿಕ್ಷಕರಾದ ಜಿ.ಎಸ್.ಓಂಕಾರ್, ನೀಲ್ಕಂಠರಾವ್, ಮಲ್ಲಿಕಾರ್ಜುನ್ ಕಾನೂರು, ಗಣೇಶ್, ಸವಿತಾ, ಶ್ರೀ ಶಿವಗಂಗಾ ರಾಘವ ಶಾಖೆ ಮತ್ತು ಕೃಷಿ ನಗರ ಯೋಗ ಶಾಖೆಯ ಶಿಕ್ಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!