ಮಲೆನಾಡಿನ ಉದ್ಯಮ ಆಕಾಂಕ್ಷಿಗಳಿಗೆ ಅನ್ವೇಷಣಾ ಫೋರಂನಿಂದ ವೇದಿಕೆ ಒದಗಿಸುವ ಕಾರ್ಯ

ಮಲೆನಾಡಿನ ಉದ್ಯಮ ಆಕಾಂಕ್ಷಿಗಳಿಗೆ ಅನ್ವೇಷಣಾ ಫೋರಂನಿಂದ ವೇದಿಕೆ ಒದಗಿಸುವ ಕಾರ್ಯ

ಶಿವಮೊಗ್ಗ | 18 ಡಿಸೆಂಬರ್ 2023 | ಡಿಜಿ ಮಲೆನಾಡು.ಕಾಂ

ಯುವ ವಿದ್ಯಾರ್ಥಿಗಳಲ್ಲಿ ಹೊಸ ಆಲೋಚನೆ ಬೆಳೆಸುವುದು ಮತ್ತು ನೂತನ ಉದ್ಯಮಗಳಿಗೆ ಪ್ರೋತ್ಸಾಹಿಸುವುದು ಅನ್ವೇಷಣಾ ಫೋರಂ ಪ್ರಮುಖ ಆಶಯ ಎಂದು ಅನ್ವೇಷಣಾ ಫೋರಂ ವ್ಯವಸ್ಥಾಪಕ ನಿರ್ದೇಶಕ ಸಿ.ಎಂ.ಪಾಟೀಲ್‌ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ನಗರದ ಪೆಸಿಟ್‌ ಕಾಲೇಜಿನಲ್ಲಿ ಅನ್ವೇಷಣಾ ಫೋರಂ ವತಿಯಿಂದ ಆಯೋಜಿಸಿದ್ದ “ನೂತನ ಪರಿಕಲ್ಪನೆ ಪ್ರಸ್ತುತಿ” ಸ್ಪರ್ಧೆಯ ಆಯ್ಕೆ ತಂಡಗಳ ಘೋಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Click on below this picture, Like & Follow Facebook Page ” Digi Malenadu “

ಮಲೆನಾಡು ಪ್ರದೇಶದಲ್ಲಿ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಪೂರಕ ವಾತಾವರಣ ನಿರ್ಮಿಸುವುದು ಹಾಗೂ ಆವಿಷ್ಕಾರ ಕ್ಷೇತ್ರದಲ್ಲಿ ಕೆಲಸ ಮಾಡುವ ವಿದ್ಯಾಥಿಗಳಿಗೆ ವೇದಿಕೆ ಕಲ್ಪಿಸುವುದು, ಮಾರ್ಗದರ್ಶನ ನೀಡುವ ಕೆಲಸವನ್ನು ಫೋರಂ ಮಾಡಲಿದೆ ಎಂದು ತಿಳಿಸಿದರು.

ಒಟ್ಟು 40 ವಿದ್ಯಾರ್ಥಿಗಳನ್ನು 11 ತಂಡಗಳಾಗಿ ರೂಪಿಸಿ ಸ್ಪರ್ಧೆ ನಡೆಸಲಾಯಿತು. ಪ್ರತಿ ತಂಡವು ವಿನೂತನ ಆಲೋಚನೆಗಳನ್ನು ಪ್ರಸ್ತುತ ಪಡಿಸಿದರು. ಎಲ್ಲ ವಿದ್ಯಾರ್ಥಿಗಳಿಗೂ ತೀರ್ಪುಗಾರರ ತಂಡವು ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿತು. ತೀರ್ಪುಗಾರ ಸದಸ್ಯ ಹರೀಶ್‌ ಗದಗಿನ್‌ ಹಾಗೂ ಡಾ. ಲಿಕ್ವಿನ್‌ ಥಾಮಸ್‌ ಐದು ತಂಡಗಳನ್ನು ಆಯ್ಕೆ ಮಾಡಿದರು.

“ನೂತನ ಪರಿಕಲ್ಪನೆ ಪ್ರಸ್ತುತಿ” ಸ್ಪರ್ಧೆಯಲ್ಲಿ ಆಯ್ಕೆ ಆಗಿರುವ ತಂಡಗಳು ಅನ್ವೇಷಣೆ ತಂಡದಲ್ಲಿ ಸೇರ್ಪಡೆಗೊಂಡು ಕೆಲಸ ಮಾಡಲಿದ್ದಾರೆ. ಆಕ್ಟ್‌ ಸಮೂಹವು ಅನ್ವೇಷಣೆಯ ಒಂದು ಭಾಗ ಆಗಿದ್ದು, ಯುವ ಉದ್ಯಮಿಗಳನ್ನು ರೂಪಿಸುವುದು ಪ್ರಮುಖ ಆಶಯವಾಗಿದೆ.

ಐದು ತಂಡಗಳು ಒಬ್ಬ ಮಾರ್ಗದರ್ಶಕರೊಂದಿಗೆ ಕಾರ್ಯ ನಿರ್ವಹಿಸಲಿದ್ದು, ಮಾರುಕಟ್ಟೆಯ ಹಂತದಲ್ಲಿಯೂ ಸಹಕಾರ ನೀಡಲಾಗುತ್ತದೆ. ಯುವ ತಂಡಗಳನ್ನು ಯಶಸ್ವಿ ಉದ್ಯಮಿಗಳನ್ನಾಗಿ ಬೆಳೆಸುವುದು ಅನ್ವೇಷಣಾ ಫೋರಂ ಕಾರ್ಯವಾಗಿದೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

“ನೂತನ ಪರಿಕಲ್ಪನೆ ಪ್ರಸ್ತುತಿ” ಸ್ಪರ್ಧೆಯ ತಂಡಗಳ ಆಯ್ಕೆ ಘೋಷಣೆ ಸಂದರ್ಭದಲ್ಲಿ ಪ್ರದೀಪ್‌ ಕುಮಾರ್‌, ಡಾ. ಅರುಣಾ.ಎ., ಡಾ. ಹರಿಶ್‌ ಗದಗಿನ್‌ ಮತ್ತಿತರರು ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!