ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆ ಕಲ್ಪಿಸುವ ಸಾರ್ಥಕ ಕೆಲಸ

ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆ ಕಲ್ಪಿಸುವ ಸಾರ್ಥಕ ಕೆಲಸ

ಸಾಗರ | 19 ಡಿಸೆಂಬರ್ 2023 | ಡಿಜಿ ಮಲೆನಾಡು.ಕಾಂ

ಪರಿಣಿತಿ ಕಲಾಕೇಂದ್ರ ಉತ್ತಮವಾಗಿ ನೃತ್ಯ ಉತ್ಸವ ಆಯೋಜಿಸುವ ಜತೆಯಲ್ಲಿ ಪ್ರತಿಭಾನ್ವಿತ ಕಲಾವಿದರಿಗೆ ರಾಷ್ಟ್ರೀಯ ವೇದಿಕೆಗಳನ್ನು ಕಲ್ಪಿಸುವ ಸಾರ್ಥಕ ಕೆಲಸ ಮಾಡುತ್ತಿದೆ ಎಂದು ಬೆಂಗಳೂರು ಐಸಿಸಿಆರ್ ವಲಯ ನಿರ್ದೇಶಕ ಕೆ.ಅಯ್ಯನಾರ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಪರಿಣಿತಿ ಕಲಾಕೇಂದ್ರದ ವತಿಯಿಂದ ಸಾಗರದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ “9ನೇ ವರ್ಷದ ಪರಿಣಿತಿ ರಾಷ್ಟ್ರೀಯ ನೃತ್ಯ, ಯೋಗ ಹಾಗೂ ಸಂಗೀತೋತ್ಸವ” ಕಾರ್ಯಕ್ರಮದಲ್ಲಿ ಮಾತನಾಡಿದರು.

Click on below this picture, Like & Follow Facebook Page ” Digi Malenadu “

ದೇಶದ ವೈವಿಧ್ಯ ನೃತ್ಯ ಪ್ರಕಾರಗಳನ್ನು ಒಂದೇ ಸೂರಿನಡಿ ಪ್ರದರ್ಶಿಸಲು ಹಾಗೂ ಸ್ಥಳೀಯ ಕಲಾವಿದರಿಗೆ ನೃತ್ಯ ಪ್ರಕಾರಗಳ ಬಗ್ಗೆ ಜ್ಞಾನ ಒದಗಿಸಲು ನೃತ್ಯ ಉತ್ಸವಗಳು ಸಹಕಾರಿ ಆಗುತ್ತವೆ. ಪರಿಣಿತಿ ಕಲಾಕೇಂದ್ರದ ಪ್ರೋತ್ಸಾಹ ಕಾರ್ಯ ನಿರಂತರ ಆಗಿರಲಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ವಿದ್ವಾನ್ ಎಂ.ಗೋಪಾಲ್ ಅವರು ನೃತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪರಿಣಿತಿ ಕಲಾಕೇಂದ್ರದ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದು, ಸಾಗರದ ಕಲಾವಿದರನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನ ನೀಡುವಷ್ಟು ಉತ್ತಮ ತರಬೇತಿ ನೀಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.

ಪಶ್ಚಿಮ ಬಂಗಾಳದ ರಾಜೀಬ್ ಭಟ್ಟಾಚಾರ್ಯ ಅವರಿಂದ ಓಡಿಸ್ಸಿ ನೃತ್ಯ, ನೃತ್ಯಾಂಜಲಿ ಸಂಸ್ಥೆಯ ಗುರು ಕರ್ನಾಟಕ ಕಲಾಶ್ರೀ ಪೂರ್ಣಿಮಾ ತಂಡದಿAದ ಭರತನಾಟ್ಯ, ವಿದೂಷಿ ಸುಶ್ಮಿತಾ ಬ್ಯಾನರ್ಜಿ ತಂಡದಿಂದ ಕಥಕ್ ನೃತ್ಯ, ಕಲಾಮಂಡಲಮ್ ಡಾ. ಸೌಮ್ಯ ಹಾಗೂ ಲತಿಕಾ ಅವರಿಂದ ಮೋಹಿನಿಅಟ್ಟಂ ಹಾಗೂ ಶ್ರೀ ಭಾರತೀ ಕಲಾವಿದರು ಹೊಸೂರು ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

“9ನೇ ವರ್ಷದ ಪರಿಣಿತಿ ರಾಷ್ಟ್ರೀಯ ನೃತ್ಯ, ಯೋಗ ಹಾಗೂ ಸಂಗೀತೋತ್ಸವ” ಪ್ರಯುಕ್ತ ಪರಿಣಿತಿ ಕಲಾಕೇಂದ್ರದ ವತಿಯಿಂದ ಆಯೋಜಿಸಿದ್ದ ಶಿವಾರತಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಸಾಗರದ ಜೇಡಿಕುಣಿ ಮಂಜುನಾಥ್ ಅವರಿಗೆ ಪರಿಣಿತಿ ಕಲಾಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.

ಪರಿಣಿತಿ ಕಲಾಕೇಂದ್ರದ ಗೌರವಾಧ್ಯಕ್ಷೆ ವೀಣಾ ಬೆಳೆಯೂರು, ಕಾರ್ಯದರ್ಶಿ ವಿದ್ವಾನ್ ಎಂ.ಗೋಪಾಲ್, ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ ಸಮಿತಿ ಅರುಣ್ ಕುಮಾರ್, ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್, ಮೈತ್ರಿ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!