ಸರ್ಜಿ ಆಸ್ಪತ್ರೆಯಲ್ಲಿ “ಅಮೃತ ಬಿಂದು” ಉದ್ಘಾಟನೆ ಡಿಸೆಂಬರ್ 20ಕ್ಕೆ

ಸರ್ಜಿ ಆಸ್ಪತ್ರೆಯಲ್ಲಿ “ಅಮೃತ ಬಿಂದು” ಉದ್ಘಾಟನೆ ಡಿಸೆಂಬರ್ 20ಕ್ಕೆ

ಶಿವಮೊಗ್ಗ | 18 ಡಿಸೆಂಬರ್ 2023 | ಡಿಜಿ ಮಲೆನಾಡು.ಕಾಂ

ಸರ್ಜಿ ಆಸ್ಪತ್ರೆಗಳ ಸಮೂಹ ಹಾಗೂ ರೋಟರಿ ಕ್ಲಬ್‌ ಶಿವಮೊಗ್ಗ ಸೆಂಟ್ರಲ್‌ ಸಹಯೋಗದಲ್ಲಿ ಶಿವಮೊಗ್ಗ ನಗರದ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಡಿಸೆಂಬರ್‌ 20ರಂದು ತಾಯಂದಿರ ಎದೆ ಹಾಲು ಬ್ಯಾಂಕ್‌ “ಅಮೃತ ಬಿಂದು” ಉದ್ಘಾಟನೆಯಾಗಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯ ಸರ್ಜಿ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ಜನಿಸಿದ ಮಗುವಿಗೆ ಸಂಪೂರ್ಣ ಪೌಷ್ಠಿಕ ಆಹಾರ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಹಾರ ಎಂದರೆ ತಾಯಿ ಎದೆಹಾಲು. ಆದರೆ ಶೇ. 46ರಷ್ಟು ಮಕ್ಕಳಿಗೆ ತಾಯಿ ಎದೆಹಾಲು ಸಮರ್ಪಕವಾಗಿ ಸಿಗುತ್ತಿಲ್ಲ. ಇದರ ಪರಿಣಾಮ ಪ್ರತಿ ಮಗುವಿಗೆ ತಾಯಿ ಎದೆಹಾಲು ದೊರಕಿಸುವ ಆಶಯದಿಂದ ವಿಶ್ವದ ಬಹುತೇಕ ಕಡೆಗಳಲ್ಲಿ ತಾಯಿ ಎದೆ ಹಾಲಿನ ಬ್ಯಾಂಕ್‌ ಸ್ಥಾಪಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Click on below this picture, Like & Follow Facebook Page ” Digi Malenadu “

ತಾಯಿ ಎದೆಹಾಲನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಅಗತ್ಯ ಇರುವ ನವಜಾತ ಶಿಶುಗಳಿಗೆ ಪೂರೈಸುವ ಸಲುವಾಗಿ ಮಿಲ್ಕ್‌ ಬ್ಯಾಂಕ್‌ ಸ್ಥಾಪಿಸಲಾಗುತ್ತಿದೆ. ಇದರಿಂದ ತಾಯಿ ಎದೆ ಹಾಲು ವಂಚಿತ ಮಕ್ಕಳಿಗೆ ತಾಯಿಯ ಎದೆಹಾಲು ದೊರಕಲು ಸಹಕಾರಿ ಆಗುತ್ತದೆ. ತಾಯಿ ಎದೆಹಾಲಿನ ಸೇವನೆಯು ಮಕ್ಕಳಿಗೆ ಅತ್ಯಂತ ಮುಖ್ಯ ಎಂದು ವಿವರಿಸಿದರು.

ಡಿಸೆಂಬರ್‌ 20ರಂದು ಬೆಳಗ್ಗೆ 11ಕ್ಕೆ “ಅಮೃತ ಬಿಂದು” ಉದ್ಘಾಟನೆ ಆಗಲಿದ್ದು, ಕೋಡಿಹಳ್ಳಿ ಮಠದ ಶ್ರೀ ಡಾ. ಶಿವಾನಂದ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರೋಟರಿ ಜಿಲ್ಲಾ ಗವರ್ನರ್‌ ಬಿ.ಸಿ.ಗೀತಾ, ವೈದ್ಯೆ ಡಾ. ಆಶಾ ಬೆನಕಪ್ಪ, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ.ಆರ್.‌, ರೋಟರಿ ಜಿಲ್ಲಾ ಮಾಜಿ ಗವರ್ನರ್‌ ಡಾ. ಪಿ.ನಾರಾಯಣ್‌, ಆರ್‌ಎಸ್‌ಎಸ್‌ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್‌, ರೋಟರಿ ಸಹಾಯಕ ಗವರ್ನರ್‌ ರವಿ ಕೋಟೋಜಿ, ರೋಟರಿ ಕ್ಲಬ್‌ ಶಿವಮೊಗ್ಗ ಸೆಂಟ್ರಲ್‌ ಅಧ್ಯಕ್ಷ ಶಿವರಾಜ್‌ ಎಚ್‌.ಪಿ. ಉಪಸ್ಥಿತಿ ಇರುವರು ಎಂದು ತಿಳಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ವೈದ್ಯ ಡಾ. ಪಿ.ನಾರಾಯಣ್‌, ರೋಟರಿ ಸಹಾಯಕ ಗವರ್ನರ್‌ ರವಿ ಕೋಟೋಜಿ, ಡಾ. ಪ್ರಶಾಂತ್.ಎಸ್.ವಿ., ಪ್ರಮುಖರಾದ ಶಿವರಾಜ್‌ ಎಚ್‌.ಪಿ., ಚಂದ್ರು.ಜೆ.ಪಿ. ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!