ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ “ನಿಲ್ದಾಣ ಮಹೋತ್ಸವ” ಆಚರಣೆ
ಶಿವಮೊಗ್ಗ | 1 ಡಿಸೆಂಬರ್ 2023 | ಡಿಜಿ ಮಲೆನಾಡು.ಕಾಂ
ಬೀರೂರಿನಿಂದ ಶಿವಮೊಗ್ಗಕ್ಕೆ ಮೀಟರ್ ಗೇಜ್ ರೈಲು ಮಾರ್ಗವನ್ನು ತೆರೆದ ಮತ್ತು ಮೊತ್ತ ಮೊದಲ ಪ್ಯಾಸೆಂಜರ್ ರೈಲನ್ನು 1899ರ ಡಿಸೆಂಬರ್ 1 ರಂದು ಬರಮಾಡಿಕೊಂಡ ರೈಲ್ವೆ ನಿಲ್ದಾಣದ ನೆನಪಿಗಾಗಿ ಶಿವಮೊಗ್ಗ ಟೌನ್ ರೈಲು ನಿಲ್ದಾಣದಲ್ಲಿ “ನಿಲ್ದಾಣ ಮಹೋತ್ಸವ” ಆಚರಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
Click on below this picture, Like & Follow Facebook Page ” Digi Malenadu “
1889 ರಲ್ಲಿ ಅಂದಿನ ಮೈಸೂರು ಮಹಾಸಂಸ್ಥಾನದಿಂದ 37.92 ಮೈಲುಗಳ ಮೀಟರ್ ಗೇಜ್ ರೈಲುಮಾರ್ಗದ ಉದ್ಘಾಟನೆಯಾಗಿ ಮೊದಲ ಪ್ಯಾಸೆಂಜರ್ ರೈಲು ಶಿವಮೊಗ್ಗ ನಿಲ್ದಾಣವನ್ನು ಪ್ರವೇಶಿಸಿತು. ಡಿಸೆಂಬರ್ 1ರಂದು ಶಿವಮೊಗ್ಗ ಟೌನ್ ರೈಲ್ವೆ ನಿಲ್ದಾಣದಲ್ಲಿ ನಡೆದ ‘ನಿಲ್ದಾಣ ಮಹೋತ್ಸವ’ ಕಾರ್ಯಕ್ರಮವು ಅತ್ಯಂತ ಐತಿಹಾಸಿಕ ಮಹತ್ವ ಹೊಂದಿದೆ.
ರೈಲ್ವೆ ನೌಕರರು ಮತ್ತು ಸ್ಥಳೀಯ ಜನರಿಗೆ ರೈಲ್ವೆ ವ್ಯವಸ್ಥೆಯ ಸ್ಥಾಪನೆಯ ಇತಿಹಾಸ ಮತ್ತು ಪಾರಂಪರಿಕ ಆಸ್ತಿಗಳಾದ ರೈಲ್ವೆ ನಿಲ್ದಾಣ, ಉಪಯೋಗಿಸುವ ಉಪಕರಣಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ರೈಲ್ವೆ ನಿಲ್ದಾಣದೊಂದಿಗೆ ಜನರ ಸಂಬಂಧವನ್ನು ಪ್ರದರ್ಶಿಸುವುದು ಮುಖ್ಯ ಕಾರಣವಾಗಿತ್ತು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಮೈಸೂರಿನ ಯಾದವಗಿರಿಯ ಲಲಿತಾ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಮರಣೀಯ ಕಾರ್ಯಕ್ರಮದ ವಿಶೇಷತೆ ಹೆಚ್ಚಿಸಿತ್ತು. ನೈಋತ್ಯ ರೈಲ್ವೆ ಮೈಸೂರು ವಿಭಾಗದ ಸಹಾಯಕ ವಾಣಿಜ್ಯ ವ್ಯವಸ್ಥಾಪಕ ರಾಜ್ಕುಮಾರ್ ಹಾಗೂ ರೈಲ್ವೇ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ : https://digimalenadu.com/about-us/