ಸ್ವದೇಶಿ ಜಾಗರಣ ಮಂಚ್‌ ಕರ್ನಾಟಕ ವತಿಯಿಂದ ಶಿವಮೊಗ್ಗದಲ್ಲಿ “ಸ್ವದೇಶಿ ಮೇಳ” ಡಿಸೆಂಬರ್‌ 6ರಿಂದ 10ರವರೆಗೆ, ಪ್ರತಿ ದಿನ ಲಕ್ಕಿ ಡಿಪ್‌ ಮುಖಾಂತರ ಸೀರೆ ಉಡುಗೊರೆ

ಸ್ವದೇಶಿ ಜಾಗರಣ ಮಂಚ್‌ ಕರ್ನಾಟಕ ವತಿಯಿಂದ ಶಿವಮೊಗ್ಗದಲ್ಲಿ “ಸ್ವದೇಶಿ ಮೇಳ” ಡಿಸೆಂಬರ್‌ 6ರಿಂದ 10ರವರೆಗೆ, ಪ್ರತಿ ದಿನ ಲಕ್ಕಿ ಡಿಪ್‌ ಮುಖಾಂತರ ಸೀರೆ ಉಡುಗೊರೆ

ಶಿವಮೊಗ್ಗ | 1 ಡಿಸೆಂಬರ್ 2023 | ಡಿಜಿ ಮಲೆನಾಡು.ಕಾಂ

ದೇಶಿಯ ವಸ್ತುಗಳ ಪರಿಚಯ ಹಾಗೂ ಸ್ವದೇಶಿ ವಸ್ತುಗಳ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಠಿಯಿಂದ ಶಿವಮೊಗ್ಗ ನಗರದಲ್ಲಿ ಡಿಸೆಂಬರ್‌ 6 ರಿಂದ 10ರವರೆಗೆ “ಸ್ವದೇಶಿ ಮೇಳ” ಹಮ್ಮಿಕೊಳ್ಳಲಾಗಿದೆ ಎಂದು ಸ್ವದೇಶಿ ಜಾಗರಣ ಮಂಚ್‌ ದಕ್ಷಿಣ ಮಧ್ಯ ಕ್ಷೇತ್ರಿಯ ಸಂಘಟಕ್‌ ಕೆ.ಜಗದೀಶ್‌ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಸ್ವದೇಶಿ ಮೇಳದಲ್ಲಿ ಎರಡು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನೀರಿಕ್ಷೆ ಇದ್ದು, ದೇಶಿಯ ಕ್ರೀಡೆ, ಆಹಾರ, ವೈವಿಧ್ಯಮಯ ಸಾಂಸ್ಕೃತಿಕ, ಉಪನ್ಯಾಸ, ಯೋಗ, ಜಾದೂ ಪ್ರದರ್ಶನ, ನೃತ್ಯರೂಪಕ, ಸ್ಪರ್ಧೆ, ಕಾರ್ಯಕ್ರಮಗಳು ಇರಲಿವೆ. 250ಕ್ಕೂ ಹೆಚ್ಚು ಮಳಿಗೆಗಳಲ್ಲಿ ಉತ್ಪನ್ನಗಳ ಮಾರಾಟ, ಪ್ರದರ್ಶನ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Click on below this picture, Like & Follow Facebook Page ” Digi Malenadu “

ಡಿಸೆಂಬರ್‌ 6ರ ಸಂಜೆ 6.30ಕ್ಕೆ ಆಯೋಜಿಸಿರುವ ಸ್ವದೇಶಿ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿರಿಗೆರೆ ತರಳುಬಾಳು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡುವರು. ಮೈಸೂರು ಸಂಸ್ಥಾನದ ಶ್ರೀ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆ ವಹಿಸುವರು. ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಸ್ವದೇಶಿ ಚಿಂತಕ ಪ್ರೊ. ಬಿ.ಎಂ.ಕುಮಾರಸ್ವಾಮಿ ಭಾಗವಹಿಸುವರು ಎಂದರು.

ಸಂಯೋಜಕ ಡಾ. ಧನಜಂಯ ಸರ್ಜಿ ಮಾತನಾಡಿ, ಐದು ದಿನಗಳ ಸ್ವದೇಶಿ ಮೇಳದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದು, ಪ್ರತಿ ದಿನ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದ್ದು, ಜಾನಪದ ಕಲಾವೈಭವ, ತಾರಸಿ ತೋಟ ತರಬೇತಿ, ಆಯುರ್ವೇದ ಶಿಬಿರ, ಯಕ್ಷಗಾನ, ನಿತ್ಯ ಬಳಕೆ ವಸ್ತುಗಳ ತಯಾರಿಕಾ ಕಾರ್ಯಾಗಾರ, ರೈತರೊಂದಿಗೆ ಸಂವಾದ ನಡೆಯಲಿದೆ ಎಂದು ಹೇಳಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಸಂಚಾಲಕ ಡಿ.ಎಸ್‌.ಅರುಣ್‌ ಮಾತನಾಡಿ, ಭಾರತೀಯ ಪಾರಂಪರಿಕ ಉಡುಗೆಯಾದ ಸೀರೆ ಧರಿಸಿ ಬರುವ ಮಹಿಳೆಯರಿಗೆ ಲಕ್ಕಿ ಡಿಪ್‌ ಮುಖಾಂತರ ಸೀರೆಯನ್ನು ಉಡುಗೊರೆಯಾಗಿ ನೀಡಲಾಗುವುದು. ಪ್ರತಿ ದಿನ 10 ಮಹಿಳೆಯರಿಗೆ “ಸೌಭಾಗ್ಯವತಿ ಸೀರೆ” ಉಡುಗೊರೆ ಸಿಗಲಿದೆ. ಸಾರ್ವಜನಿಕರು ಐದು ದಿನದ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಾಹಿತಿ ನೀಡಿದರು.

ಪ್ರೊ. ಬಿ.ಎಂ.ಕುಮಾರಸ್ವಾಮಿ, ಸಂಘಟಕ ಹರ್ಷ ಬಿ.ಕಾಮತ್‌, ಎಸ್‌.ದತ್ತಾತ್ರಿ, ದಿಲೀಪ್‌, ಸುರೇಖಾ ಮುರಳೀಧರ್‌, ಸ್ವದೇಶಿ ಮೇಳದ ಪದಾಧಿಕಾರಿಗಳು ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!