ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರತಿಭಾ ಪುರಸ್ಕಾರ ಜನವರಿ 19ಕ್ಕೆ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಭಾಗಿ

ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರತಿಭಾ ಪುರಸ್ಕಾರ ಜನವರಿ 19ಕ್ಕೆ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಭಾಗಿ

ಶಿವಮೊಗ್ಗ | 17 ಜನವರಿ 2024 | ಡಿಜಿ ಮಲೆನಾಡು.ಕಾಂ

ಕುವೆಂಪು ವಿಶ್ವವಿದ್ಯಾಲಯದ 2022-23ನೇ ಸಾಲಿನ ಪದವಿ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದಿಸಲು ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ಜನವರಿ 19ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಎನ್‌ಇಎಸ್‌ ಆವರಣದಲ್ಲಿ ಜನವರಿ 19ರ ಬೆಳಗ್ಗೆ 11ಕ್ಕೆ ಆಯೋಜಿಸಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಶಾಸಕ, ಪರಿಶ್ರಮ ನೀಟ್‌ ಅಕಾಡೆಮಿ ಮುಖ್ಯಸ್ಥ ಪ್ರದೀಪ್‌ ಈಶ್ವರ್‌ ಭಾಗವಹಿಸಲಿದ್ದು, ನಮ್ಮ ಭವಿಷ್ಯ ನಮ್ಮ ಕೈಯಲ್ಲಿ ವಿಷಯ ಕುರಿತು ದಿಕ್ಸೂಚಿ ಭಾಷಣ ಮಾಡುವರು.

Click on below this picture, Like & Follow Facebook Page ” Digi Malenadu “

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್‌.ನಾರಾಯಣ ರಾವ್‌ ಅಧ್ಯಕ್ಷತೆ ವಹಿಸುವರು. ವಿಶ್ವವಾಣಿ, ಲೋಕಧ್ವನಿ ಪತ್ರಿಕೆ ಸಿಇಒ ಚಿದಾನಂದ ಕಡಲಾಸ್ಥರ, ಎನ್‌ಇಎಸ್‌ ಉಪಾಧ್ಯಕ್ಷ ಸಿ.ಆರ್.ನಾಗರಾಜ್‌, ಕಾರ್ಯದರ್ಶಿ ಎಸ್‌.ಎನ್‌.ನಾಗರಾಜ್‌, ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ, ಖಜಾಂಚಿ ಡಿ.ಜಿ.ರಮೇಶ್‌ ಉಪಸ್ಥಿತರಿರುವರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಕೆಎನ್‌ಎಂಎನ್‌ಸಿ ಪ್ರಾಚಾರ್ಯ ಡಾ. ಎಚ್‌.ಎಸ್‌.ನಾಗಭೂಷಣ, ಎಟಿಎನ್‌ಸಿಸಿ ಪ್ರಾಚಾರ್ಯೆ ಪ್ರೊ. ಪಿ.ಆರ್.ಮಮತಾ, ಕೋಣಂದೂರು ಎಸ್‌ಎಫ್‌ಜಿಸಿ  ಪ್ರಾಚಾರ್ಯ ಪ್ರೊ. ಎಂ.ಜಿ.ಸುಭಾಷ್‌, ಎಸ್‌ಆರ್‌ಎಂಎನ್‌ಸಿ ಪ್ರಾಚಾರ್ಯ ಡಾ. ಕೆ.ಎಲ್‌.ಅರವಿಂದ, ಎನ್‌ಇಎಸ್‌ಐಎಎಸ್‌ ಪ್ರಾಚಾರ್ಯ ಬಿ.ಎಸ್‌.ಶಿವಪ್ರಸಾದ, ನೃಪತುಂಗ.ಸಿ.ಎಂ. ಹಾಜರಿರುವರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!