ಮನೆ ಮನೆಗೂ ತಲುಪಿರುವ ಕೇಂದ್ರ ಸರ್ಕಾರದ ಯೋಜನೆ, ಶಿಕಾರಿಪುರದಲ್ಲಿ ವಿಕಸಿತ ಭಾರತ ಭಾರತ ಸಂಕಲ್ಪ ಯಾತ್ರೆ

ಮನೆ ಮನೆಗೂ ತಲುಪಿರುವ ಕೇಂದ್ರ ಸರ್ಕಾರದ ಯೋಜನೆ, ಶಿಕಾರಿಪುರದಲ್ಲಿ ವಿಕಸಿತ ಭಾರತ ಭಾರತ ಸಂಕಲ್ಪ ಯಾತ್ರೆ

ಶಿಕಾರಿಪುರ | 17 ಜನವರಿ 2024 | ಡಿಜಿ ಮಲೆನಾಡು.ಕಾಂ

ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸುವುದು ಹಾಗೂ ಹೊಸ ಫಲಾನುಭವಿಗಳಿಗೆ ಯೋಜನೆ ಸೌಲಭ್ಯ ಒದಗಿಸುವುದು ವಿಕಸಿತ ಸಂಕಲ್ಪ ಯಾತ್ರೆಯ ಪ್ರಮುಖ ಆಶಯ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಪಟ್ಟಣದ ಬಯಲು ರಂಗಮಂದಿರದಲ್ಲಿ ಬ್ಯಾಂಕ್ ಆಫ್ ಬರೋಡಾ ಶಿಕಾರಿಪುರ ಶಾಖೆ ಹಾಗೂ ಪುರಸಭೆ ಶಿಕಾರಿಪುರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರೆ , ನಮ್ಮ ಸಂಕಲ್ಪ ವಿಕಸಿತ ಭಾರತ” ಕಾರ್ಯಕ್ರಮದಲ್ಲಿ ಮಾತನಾಡಿದರು.

Click on below this picture, Like & Follow Facebook Page ” Digi Malenadu “

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಯು ಪ್ರತಿ ಮನೆ ಮನೆಗೂ ತಲುಪುವಂತೆ ಅನುಷ್ಠಾನ ಗೊಳಿಸಲಾಗುತ್ತಿದೆ. ಉಜ್ವಲ ಯೋಜನೆಯಡಿ ಲಕ್ಷಾಂತರ ಕುಟುಂಬಕ್ಕೆ ಉಚಿತ ಗ್ಯಾಸ್ ನೀಡಲಾಗಿದೆ ಎಂದು ತಿಳಿಸಿದರು.

ಆಯುಷ್ಮಾನ್ ಭಾರತ ಯೋಜನೆಯಲ್ಲಿ ಐದು ಲಕ್ಷ ರೂ.ವರೆಗೂ ಸೌಲಭ್ಯ ಒದಗಿಸುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಫಲಾನುಭವಿಗಳ ಆರೋಗ್ಯ ರಕ್ಷಣೆಗೆ ಕೇಂದ್ರ ಸರ್ಕಾರವು 180 ಕೋಟಿ ರೂ. ವ್ಯಯಿಸಿದೆ. ಮನೆ ಮನೆಗೆ ನೀರು ತಲುಪಿಸುವ ಯೋಜನೆ ಜಾರಿಯಾಗಿದೆ. ತಾಲ್ಲೂಕಿನಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಜಾರಿಗೊಳಿಸಿದ ನೀರಾವರಿ ಯೋಜನೆಗಳ ಪ್ರತಿಫಲ ಎಲ್ಲರಿಗೂ ಸಿಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ  ರಸ್ತೆ ಸಂಪರ್ಕ ವ್ಯವಸ್ಥಿತವಾಗಿ ನಡೆದಿದೆ. ಆಸ್ಪತ್ರೆಗಳ ಆಧುನೀಕರಣ ಆಗಿದೆ ಎಂದರು.

ಪ್ರಧಾನ ಮಂತ್ರಿ ಜನಧನ್ ಯೋಜನೆ, ಸುರಕ್ಷಾ ಬಿಮಾ ಯೋಜನೆ, ಜೀವನ ಜ್ಯೋತಿ ಬಿಮಾ ಯೋಜನೆ, ವಿಶ್ವಕರ್ಮ ಯೋಜನೆ, ಸ್ವನಿಧಿ ಯೋಜನೆ, ಉಜ್ವಲ ಯೋಜನೆ, ಮುದ್ರಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಜನ ಆರೋಗ್ಯ ಯೋಜನೆ, ಗರೀಬ್ ಕಲ್ಯಾಣ ಯೋಜನೆ, ಹೀಗೆ ನೂರಾರು ಯೋಜನೆಯ ಮೂಲಕ ಶಿವಮೊಗ್ಗ ಜಿಲ್ಲೆಯ ಪ್ರತಿಯೊಬ್ಬ ವ್ಯಕ್ತಿಗೂ ಕೇಂದ್ರ ಸರ್ಕಾರದ ಯೋಜನೆಯ ಸೌಲಭ್ಯ ಸಿಗುತ್ತಿದೆ ಎಂದು ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿದರು. ಪುರಸಭೆ ಶಿಕಾರಿಪುರ ವತಿಯಿಂದ ಪಿಎಂ ಸ್ವ ನಿಧಿ ಯೋಜನೆ ಬಗ್ಗೆ ಜಾಗೃತಿ ಮೂಡಿಸಿ ಮಾಹಿತಿ ನೀಡಲಾಯಿತು. ಬ್ಯಾಂಕ್ ‌ಆಫ್ ಬರೋಡಾ ಶಿಕಾರಿಪುರ ಶಾಖೆ ವತಿಯಿಂದ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ಶಿಕಾರಿಪುರ ವತಿಯಿಂದ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಕುರಿತ ಉಚಿತ ತಪಾಸಣಾ ಶಿಬಿರ‌ ಹಮ್ಮಿಕೊಳ್ಳಲಾಗಿತ್ತು. ನೇಸರ ಕಲಾತಂಡ ಶಿವಮೊಗ್ಗದ ಕಲಾವಿದರು ಜಾಗೃತಿ ಗೀತೆಗಳನ್ನು ಹಾಡಿದರು. ಅಂಬಾರಗೊಪ್ಪ ಕಲಾವಿದರು ‌ಡೊಳ್ಳು ಕುಣಿತ ನಡೆಸಿಕೊಟ್ಟರು.

ರೇಖಾ ಬಾಯಿ, ಶೈಲಾ ಯೋಗೀಶ್, ಮಹಮ್ಮದ್ ಸಾಧಿಕ್, ಎಚ್.ಪಾಲಾಕ್ಷಣ್ಣ, ರಮೇಶ್, ಸುರೇಶ್, ರೂಪಾಕಲಾ, ಯೋಗೀಶ್ ಎಸ್,  ಪುರಸಭೆ ಮುಖ್ಯಾಧಿಕಾರಿ ಭರತ್,  ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಕಚೇರಿ ಯೋಗೇಶ್ ಎಸ್. , ಬ್ಯಾಂಕ್ ಆಫ್ ಬರೋಡಾ ಶಿಕಾರಿಪುರ ಶಾಖೆಯ ಸಂದೇಶ ಕುಮಾರ್ ಎ ಎಂ ಹಾಗು ಸಿಬ್ಬಂದಿ ವರ್ಗ,  ಗುಡದಯ್ಯ , ರಾಜಕುಮಾರ.ಎಚ್.ಎಂ, ಸ್ಥಳೀಯ ಪ್ರಮುಖ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!