ಧನಾತ್ಮಕ ಆಲೋಚನೆಯಿಂದ ಉದ್ಯಮದ ಬೆಳವಣಿಗೆ

ಧನಾತ್ಮಕ ಆಲೋಚನೆಯಿಂದ ಉದ್ಯಮದ ಬೆಳವಣಿಗೆ

ಶಿವಮೊಗ್ಗ | 30 ಜನವರಿ 2024 | ಡಿಜಿ ಮಲೆನಾಡು.ಕಾಂ

ಧನಾತ್ಮಕ ಅಲೋಚನೆಯೊಂದಿಗೆ ಸಮುದಾಯದ ಜನರು ಸಂಘಟನಾತ್ಮಕವಾಗಿ ತೊಡಗಿಸಿಕೊಂಡು ಮುನ್ನಡೆದಲ್ಲಿ ನಮ್ಮೆಲ್ಲರ ಉದ್ಯಮದ ಬೆಳವಣಿಗೆ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ನಗರದ ಶುಭಂ ಸಭಾಂಗಣದಲ್ಲಿ ಆರ್ಯವೈಶ್ಯ ಸಮುದಾಯದ ” ನಾವು ವೈಶ್ಯ ( We Vysya ) ” ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

Click on below this picture, Like & Follow Facebook Page ” Digi Malenadu “

ಜಗತ್ತಿನಲ್ಲಿ ಇರುವ ಅವಕಾಶಗಳ ಬಗ್ಗೆ ” ನಾವು ವೈಶ್ಯ – We Vysya ” ಸಮುದಾಯವು ನಮ್ಮೆಲ್ಲರಿಗೂ ಉಪಯೋಗ ಆಗುವಂತೆ ವೇದಿಕೆ ಸೃಷ್ಟಿಸುತ್ತದೆ. ಪ್ರತಿ ಉದ್ಯಮಿಯು ಹೊಸ ಪ್ರಯತ್ನದ ಜತೆ ಕೈಜೋಡಿಸಬೇಕು. ನಾವು ಒಟ್ಟಾಗಿ ಬೆಳೆಯೋಣ ಎಂದು ಶುಭ ಕೋರಿದರು.

ಯುವ ಉದ್ಯಮಿಗಳು ಯಾವುದೇ ಆತಂಕಕ್ಕೆ ಒಳಗಾಗಬಾರದು. ಈಗಾಗಲೇ ವೃತ್ತಿ ಕ್ಷೇತ್ರದಲ್ಲಿ ಇರುವವರು ಸೂಕ್ತ ಮಾರ್ಗದರ್ಶನ ನೀಡಬೇಕು. ಉದ್ಯಮದಲ್ಲಿ ಎದುರಾಗುವ ಸವಾಲು ಹಾಗೂ ಹೊಸ ಸಾಧ್ಯತೆಗಳ ಬಗ್ಗೆ ತಿಳುವಳಿಕೆ ನೀಡಬೇಕು. ಇದರಿಂದ ಎಲ್ಲರೂ ಒಟ್ಟಾಗಿ ಬೆಳೆಯಲು ಸಾಧ್ಯವಿದೆ ಎಂದು ತಿಳಿಸಿದರು.

ಉದ್ಯಮಿ ಟಿ.ಆರ್.ಅಶ್ವತ್ಥ್ ನಾರಾಯಣ ಶೆಟ್ಟಿ ಮಾತನಾಡಿ, ಆರ್ಯವೈಶ್ಯ ಸಮುದಾಯದ ಜನರು ಅತಿ ಹೆಚ್ಚು ವ್ಯಾಪಾರ ವಹಿವಾಟು ನಡೆಸುವ ಉದ್ಯಮಿ‌ಗಳಾಗಿದ್ದು, ನಾವು ಎಲ್ಲರೂ ಒಟ್ಟಿಗೆ ಸೇರಿಸಿಕೊಂಡು ಉದ್ಯಮ ನಡೆಸಿದಾಗ ಸಮುದಾಯದ ಎಲ್ಲರೂ ಬೆಳವಣಿಗೆ ಹೊಂದುವುದು ಸಾಧ್ಯವಿದೆ ಎಂದು ಹೇಳಿದರು.

ಆರ್ಯವೈಶ್ಯ ಸಮುದಾಯವು ಉದ್ಯಮದ ಜತೆಯಲ್ಲಿ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲೂ ಎಲ್ಲರ ಬೆಂಬಲದಿಂದ ಯುವಜನತೆ ಹೆಚ್ಚು ತೊಡಗಿಸಿಕೊಳ್ಳಬೇಕು.  ಸಮುದಾಯದ ಜನರು ಪ್ರತಿಯೊಂದು ಕ್ಷೇತ್ರದಲ್ಲೂ ತೊಡಗಿಸಿಕೊಂಡು ಪರಸ್ಪರ ಸಹಕಾರ ಹಾಗೂ ಬೆಂಬಲ ನೀಡಬೇಕು ಎಂದು ಸಲಹೆ ನೀಡಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

” ನಾವು ವೈಶ್ಯ ” ಸ್ಥಾಪಕ ಅನಿಲ್ ಗುಪ್ತ , ಶಿವಮೊಗ್ಗ ವಿಭಾಗದ ಸಂಚಾಲಕ ಟಿ.ಎಸ್.ಎನ್.ಮೂರ್ತಿ, ರಾಜ್ಯ ಅಧ್ಯಕ್ಷ ಗಣೇಶ್, ಸಮಿತಿ ಸದಸ್ಯರಾದ ಸಂಜಯ್.ಜಿ.ಆರ್., ಉನ್ನತಿ ಸುಪ್ರೀತ್, ನವೀನ್ ರತ್ನಂ, ಶ್ರೀನಿವಾಸ ಮೂರ್ತಿ, ಗಣೇಶ್, ಸಂತೋಷ್, ಸಂದೇಶ್, ಸುಪ್ರೀತ್, ಸಂಘರ್ಷ್, ಅಜಯ್, ಶ್ರೀನಿವಾಸ್, ಡಿಸ್ಕೊ ಗುಪ್ತಾ, ಸೂರ್ಯ, ನವೀನ್ ಲಿಂಗಂ, ಶಿವಮೊಗ್ಗದ ಬದ್ರೀನಾಥ್.ಟಿ.ಎಸ್., ಚೇತನ್, ಸುಪ್ರೀತ್, ವೆಂಕಟೇಶ್ ಮೂರ್ತಿ, ಪ್ರದೀಪ್, ಬದ್ರಿ.ಟಿ.ಎಸ್., ಚೇತನ್, ಬಾಬು, ಬದ್ರಿಪ್ರಸಾದ್, ಸಂದೀಪ್.ಟಿ.ಎಸ್. ಮತ್ತಿತರರು ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!