ಸಹಚೇತನ ನಾಟ್ಯಾಲಯ ವತಿಯಿಂದ ಅಜೀತಶ್ರೀ ಪುರಸ್ಕಾರ ಫೆಬ್ರವರಿ 23ಕ್ಕೆ
ಶಿವಮೊಗ್ಗ | 21 ಫೆಬ್ರವರಿ 2024 | ಡಿಜಿ ಮಲೆನಾಡು.ಕಾಂ
ಸಮಾಜ ಸೇವಕ ಅಜಿತ್ ಕುಮಾರ್ ಅವರ ಸ್ಮರಣಾರ್ಥ ಶಿವಮೊಗ್ಗ ನಗರದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಫೆಬ್ರವರಿ 23ಕ್ಕೆ ಸಹಚೇತನ ನಾಟ್ಯಾಲಯ ವತಿಯಿಂದ “ಭಾರತೀಯಂ ನೃತ್ಯ ಕಾರ್ಯಕ್ರಮ ಹಾಗೂ ಅಜಿತಶ್ರೀ ಪುರಸ್ಕಾರ” ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೆಬ್ರವರಿ 23ರ ಸಂಜೆ 5.30ಕ್ಕೆ ಭಾರತೀಯಂ ನೃತ್ಯ ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹ ಟಿ.ಪಟ್ಟಾಭಿರಾಮ ಉದ್ಘಾಟಿಸುವರು. ವಿಧಾನ ಪರಿಷತ್ ಮಾಜಿ ಶಾಸಕ ಎಂ.ಬಿ.ಭಾನುಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್, ಸಹಚೇತನ ನಾಟ್ಯಾಲಯ ಕಾರ್ಯದರ್ಶಿ ಸಹನಾ ಚೇತನ್ ಉಪಸ್ಥಿತರಿರುವರು. ಗೌರವಾಧ್ಯಕ್ಷ, ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು.
Click on below this picture, Like & Follow Facebook Page ” Digi Malenadu “
ಫೆಬ್ರವರಿ 23ರ ಕಾರ್ಯಕ್ರಮದಲ್ಲಿ ಯೋಗಾಚಾರ್ಯೆ ವನಜಾಕ್ಷಿ ನಾಗೇಂದ್ರಪ್ಪ, ಶಿಕ್ಷಕ ಪಾಂಡುರಂಗ ಹ.ಪರಾಂಡೆ ಅವರಿಗೆ ಹಾಗೂ ಜ್ಞಾನೇಶ್ವರಿ ಗೋಶಾಲೆ ಸಂಸ್ಥೆಗೆ “ಅಜೀತಶ್ರೀ” ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 13 ವರ್ಷಗಳಿಂದ ಸಹಚೇತನ ಸಂಸ್ಥೆಯು ನಿರಂತರವಾಗಿ ಸೇವಾ ದಿನ ಆಚರಿಸಿಕೊಂಡು ಬರುತ್ತಿದ್ದು, ಇದೇ ದಿನ ದೇಶಭಕ್ತಿ ಗೀತೆಗಳಿಗೆ ಮಕ್ಕಳು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ನೃತ್ಯಗುರು ಸಹನಾ ಚೇತನ್ ಮಾರ್ಗದರ್ಶನದಲ್ಲಿ ನೃತ್ಯ ಕಲಿಯುತ್ತಿರುವ ಹಿಂದುಳಿದ ಬಡಾವಣೆಯ ಹಾಗೂ ಸರ್ಕಾರಿ ಶಾಲಾ ಮಕ್ಕಳು “ಭಾರತೀಯರಂ” ನೃತ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ : https://digimalenadu.com/about-us/