ತುಂಗಾ ರಿವರ್ ಫ್ರಂಟ್ ಯೋಜನೆ ಪ್ರಾಯೋಗಿಕವಾಗಿ ಸಾರ್ವಜನಿಕರಿಗೆ ಉಚಿತ ಪ್ರವೇಶ

ತುಂಗಾ ರಿವರ್ ಫ್ರಂಟ್ ಯೋಜನೆ ಪ್ರಾಯೋಗಿಕವಾಗಿ ಸಾರ್ವಜನಿಕರಿಗೆ ಉಚಿತ ಪ್ರವೇಶ

ಶಿವಮೊಗ್ಗ | 23 ಫೆಬ್ರವರಿ 2024 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಅನುಷ್ಟಾನಗೊಳಿಸಿರುವ “ತುಂಗಾ ನದಿ ಉತ್ತರ ದಂಡೆ ಅಭಿವೃದ್ದಿ ಯೋಜನೆ”ಯನ್ನು ಫೆಬ್ರವರಿ 23 ರಿಂದ ಮಾರ್ಚ್ 3 ರವರೆಗೆ ಸಾರ್ವಜನಿಕರು ಉಚಿತ ಪ್ರವೇಶ ಮೂಲಕ ವೀಕ್ಷಿಸಲು ಅವಕಾಶ ನೀಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಪ್ರವೇಶ ದ್ವಾರ ಸಂಖ್ಯೆ : 02 ಇಮಾಂಬಡ, ಬಿಬಿ ರಸ್ತೆ ಶಿವಮೊಗ್ಗ. ಪ್ರವೇಶ ದ್ವಾರ ಸಂಖ್ಯೆ: 05 ರಾಮಣ್ಣ ಶ್ರೇಷ್ಟಿ ಪಾರ್ಕ್ ಪಕ್ಕ, ಗಾಂಧಿ ಬಜಾರ್, ಪ್ರವೇಶ ದ್ವಾರ ಸಂಖ್ಯೆ : 09 ಬಿಸಿಎ ಹಾಸ್ಟೆಲ್ ಪಕ್ಕ, ಎಸ್‍ಪಿಎಂ ರಸ್ತೆ, ಶಿವಮೊಗ್ಗ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಪ್ರವೇಶ ಸಮಯವಾಗಿರುತ್ತದೆ ಎಂದು ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

Click on below this picture, Like & Follow Facebook Page ” Digi Malenadu “

ತುಂಗಾ ರಿವರ್ ಫ್ರೆಂಟ್ ಯೋಜನೆಯು ಶಿವಮೊಗ್ಗ ಪ್ರವಾಸಿ ತಾಣವಾಗಿ ರೂಪುಗೊಂಡಿದ್ದು, ಶಿವಮೊಗ್ಗ ನಗರದ ತುಂಗಾ ನದಿಯ ಉತ್ತರ ದಂಡೆಯ ಮುಂಭಾಗದಲ್ಲಿ ಪಾದಾಚಾರಿ ಸೇತುವೆ, ವಾಯುವಿಹಾರದೊಂದಿಗೆ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಯೋಜನೆಯಾಗಿ ಅನುಷ್ಠಾನಗೊಂಡಿದೆ. ಶಿವಮೊಗ್ಗ ನಗರದ ಅತ್ಯಾಕರ್ಷಕ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಉದ್ದೇಶದಿಂದ 10 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ಸ್ಮಾರ್ಟ್‌ಸಿಟಿ ವತಿಯಿಂದ ಯೋಜನೆ ಅನುಷ್ಠಾನಗೊಳಿಸಲಾಗಿದೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಯೋಜನೆಯಲ್ಲಿ ನದಿ ದಂಡೆಯ ಉದ್ದಕ್ಕೂ ಪಾದಾಚಾರಿ ಮಾರ್ಗ, ಸೈಕಲ್ ಪಥ, ವಿವಿಧ ಜಾತಿಯ ಮರಗಿಡಗಳು, ಉದ್ಯಾನಗಳು ಹಾಗೂ ಹೂದೋಟಗಳನ್ನು ನಿರ್ಮಿಸಲಾಗಿದೆ. ಮನೋರಂಜನೆಗೆ ಮಕ್ಕಳ ಆಟದ ತಾಣಗಳು, ಕಾರಂಜಿ, ಜಿಮ್ ಉಪಕರಣಗಳು, ಸಾಹಸಿಗರಿಗೆ ಹತ್ತುವ ಗೋಡೆಗಳು, ಕ್ರೀಡಾಸಕ್ತರಿಗೆ ವಿವಿಧ ಉದ್ದೇಶ ಕ್ರೀಡಾ ಸಂಕೀರ್ಣ, ವಿವಿಧ ಪ್ರಾಣಿ ಶಿಲ್ಪಗಳು, ಗೋಡೆಗಳ ಮೇಲೆ ಆಕರ್ಷಣೀಯ ಚಿತ್ರಮಾಲಿಕೆಗಳು, ಲತಾ ಮಂಟಪ, ನದಿ ಪಾತ್ರಕ್ಕೆ ಇಳಿಜಾರು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!