ಶಿವಮೊಗ್ಗದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಆರಂಭ, ಮೊದಲ ದಿನ ದೇವರ ದರ್ಶನಕ್ಕೆ ಬಂದ ಸಾವಿರಾರು ಜನರು

ಶಿವಮೊಗ್ಗದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಆರಂಭ, ಮೊದಲ ದಿನ ದೇವರ ದರ್ಶನಕ್ಕೆ ಬಂದ ಸಾವಿರಾರು ಜನರು

ಶಿವಮೊಗ್ಗ | 12 ಮಾರ್ಚ್‌ 2024 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ ನಗರದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಮಾರ್ಚ್‌ 12ರ ಮಂಗಳವಾರದಿಂದ ಆರಂಭಗೊಂಡಿದ್ದು, ಬೆಳಗ್ಗೆಯಿಂದಲೇ ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಗಾಂಧಿ ಬಜಾರ್‌ನಲ್ಲಿ ಮಂಗಳವಾರ ಬೆಳಗ್ಗೆ ಮೊದಲ ಪೂಜೆ ನಡೆದ ನಂತರ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಿದ್ದು, ಗಾಂಧಿ ಬಜಾರ್‌ನಲ್ಲಿ ದೇವರ ದರ್ಶನ ಪಡೆಯಲು ನಿಂತಿರುವ ಸಾಲು ಹರ್ಷ ಕಾಂಪ್ಲೆಕ್ಸ್‌, ಮೀನಾಕ್ಷಿ ಭವನ ದಾಟಿ ಹೊಳೆ ಬಸ್‌ ನಿಲ್ದಾಣದವರೆಗೂ ತಲುಪುತ್ತಿದ್ದು, ಜನರು ನಿರಂತರವಾಗಿ ಬಂದು ಸಾಲಿನಲ್ಲಿ ಸೇರುತ್ತಿದ್ದಾರೆ.

Click on below this picture, Like & Follow Facebook Page ” Digi Malenadu “

ದೇವರ ದರ್ಶನಕ್ಕೆ ಅನುಕೂಲವಾಗುವಂತೆ ಆಡಳಿತ ಮಂಡಳಿಯು ಸಕಲ ವ್ಯವಸ್ಥೆ ಮಾಡಿದ್ದು, ಪೊಲೀಸ್‌ ಇಲಾಖೆಯು ಅಗತ್ಯ ಬಂದೋಬಸ್ತ್‌ ವ್ಯವಸ್ಥೆ ಮಾಡಿದೆ. ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಅಲಂಕೃತಗೊಳಿಸಲಾಗಿದೆ.

ಜಾತ್ರೆಯ ಪ್ರಯುಕ್ತ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ವಿಶೇಷವಾಗಿ ಅಲಂಕರಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ವರ್ಷ ಅದ್ಧೂರಿಯಾಗಿ ಅಲಂಕಾರ ನಡೆಸುವ ಮೂಲಕ ಜಾತ್ರೆ ಸಂಭ್ರಮ ಹೆಚ್ಚಿಸಿದೆ.

ಕೋಟೆ ಶ್ರೀ ಮಾರಿಕಾಂಬ ಜಾತ್ರೆಯು ಮಾರ್ಚ್‌ 12ರ ಬೆಳಗ್ಗೆ 7ಕ್ಕೆ ಗಾಂಧಿ ಬಜಾರಿನ ತವರು ಮನೆಯಲ್ಲಿ ಶ್ರೀ ಅಮ್ಮನವರಿಗೆ ವಿಶೇಷ ಪೂಜೆಯ ಮೂಲಕ ಜಾತ್ರೆ ಆರಂಭಗೊಂಡಿದ್ದು, ಐದು ದಿನಗಳ ಕಾಲ ವಿವಿಧ ಸಮಾಜದವರಿಂದ ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಲಿವೆ. ಮಾರ್ಚ್‌ 12ರ ರಾತ್ರಿ 9ಕ್ಕೆ ಗಾಂಧಿ ಬಜಾರ್‌ನಿಂದ ಉತ್ಸವದೊಂದಿಗೆ ಮಾರಿಕಾಂಬೆಯನ್ನು ಗದ್ದುಗೆಗೆ ತರಲಾಗುತ್ತದೆ.

ಡಿಜಿಮಲೆನಾಡು.ಕಾಂ | ಇ-ಮೇಲ್‌ :[email protected]

ಮಾರ್ಚ್‌ 13ರಿಂದ 16ರವರೆಗೆ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಪ್ರತಿ ದಿನ ಹರಕೆ, ಪೂಜೆ, ಪ್ರಸಾದ ವಿನಿಯೋಗ ಇರುತ್ತದೆ. ಮಾರ್ಚ್‌ 16ರ ರಾತ್ರಿ ಮಹಾಮಂಗಳಾರತಿ ನಂತರ ಜಾನಪದ ಕಲಾ ತಂಡಗಳ ಉತ್ಸವದೊಂದಿಗೆ ದೇವಿಯನ್ನು ವನ ಪ್ರವೇಶಕ್ಕೆ ಕಳುಹಿಸಲಾಗುತ್ತದೆ.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!