ಐದು ದಶಕ ಪೂರೈಸಿದ ಪಿಯರ್ ಲೈಟ್ ಸಂಸ್ಥೆ

ಐದು ದಶಕ ಪೂರೈಸಿದ ಪಿಯರ್ ಲೈಟ್ ಸಂಸ್ಥೆ

ಶಿವಮೊಗ್ಗ | 1 ಮಾರ್ಚ್‌ 2024 | ಡಿಜಿ ಮಲೆನಾಡು.ಕಾಂ

ಫೌಂಡ್ರಿ ಕ್ಷೇತ್ರದಲ್ಲಿ ಐದು ದಶಕಗಳ ಸಾರ್ಥಕ ಸೇವೆ ಸಲ್ಲಿಸಿರುವ ಪಿಯರ್‌ಲೈಟ್ ಲೈನರ್ಸ್‌ ಸಂಸ್ಥೆಯು ದೇಶಕ್ಕೆ ಆರ್ಥಿಕ ಕೊಡುಗೆ ನೀಡುವಲ್ಲಿಯೂ ಮಹತ್ತರ ಪಾತ್ರ ವಹಿಸಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ಲೈಕ್‌ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ನಗರದ ಪಿಯರ್‌ಲೈಟ್ ಲೈನರ್ಸ್‌ ಸಂಸ್ಥೆ ಐದು ದಶಕ ಪೂರೈಸಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಮಾತನಾಡಿ, ಕೈಗಾರಿಕಾ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುವ ಜತೆಯಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಕೀರ್ತಿ ಸಲ್ಲುತ್ತದೆ ಎಂದು ತಿಳಿಸಿದರು.

Click on below this picture, Like & Follow Facebook Page ” Digi Malenadu “

1974ರಲ್ಲಿ ಸಂಸ್ಥೆ ಆರಂಭಗೊಂಡು ಸಿಲಿಂಡರ್ ಲೈನರ್ಸ್‌ ಮತ್ತು ಇಂಜಿನ್ ಉತ್ಪನ್ನಗಳ ತಯಾರಿಕೆಯಲ್ಲಿ ಗುಣಮಟ್ಟ ಮತ್ತು ನಾವೀನ್ಯತೆಯ ಮೂಲಕ ಖ್ಯಾತಿ ಹೊಂದಿದೆ. ವಿಶ್ವದ ಬಹುತೇಕ ರಾಷ್ಟ್ರ ಗಳಿಗೆ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿರುವುದು ವಿಶೇಷ ಎಂದರು.

ಇಟಲಿ, ಅಮೇರಿಕಾ, ಇಂಗ್ಲೆಂಡ್, ಯುಎಇ, ಜರ್ಮನಿ ಮತ್ತು ಹಲವಾರು ದೇಶಗಳಲ್ಲಿರುವ ಗೌರವಾನ್ವಿತ ಗ್ರಾಹಕರನ್ನು ಪಿಯರ್‌ಲೈಟ್ ತಲುಪುತ್ತಿದೆ. ಫೌಂಡ್ರಿ ಉತ್ಪನ್ನಗಳು ಮೂರು ದಶಕಗಳಿಂದಲೂ ವಿದೇಶಗಳಿಗೆ ರಫ್ತಾಗುತ್ತಿದೆ. ಪಿಯರ್‌ಲೈಟ್ ಲೈನರ್ಸ್‌ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಹೆಚ್ಚು ನುರಿತ ಹಾಗೂ ಅನುಭವಿ ವೃತ್ತಿಪರರ ತಂಡ ಹೊಂದಿರುವ ಮೂಲಕ ಗ್ರಾಹಕರ ಬೇಡಿಕೆಗಳನ್ನು ನೀರಿಕ್ಷೆಗೆ ತಕ್ಕಂತೆ ಪೂರೈಸುತ್ತಿದೆ ಎಂದು ತಿಳಿಸಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ :[email protected]

ಪಿಯರ್‌ಲೈಟ್ ಲೈನರ್ಸ್‌ ಸಂಸ್ಥೆಯ ರಾಮಪ್ರಸಾದ್.ಎಚ್.ಜಿ., ಶಿವದಾಸ್ ಜಿ.ದಿವೇಕರ್, ಸವ್ಯಸಾಚಿ.ಎಚ್.ಆರ್., ಅಂಕಿತ್ ಎಸ್.ದಿವೇಕರ್, ಜೆ.ರಘುದತ್ ಅವರನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಅಭಿನಂದಿಸಲಾಯಿತು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಮಾಜಿ ಅಧ್ಯಕ್ಷ ಡಿ.ಎಂ.ಶಂಕರಪ್ಪ, ನಿರ್ದೇಶಕ ಇ.ಪರಮೇಶ್ವರ್, ಪ್ರದೀಪ್ ಎಲಿ ಮತ್ತಿತರರು ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!