ಸುಮಧುರ ಸಂಗೀತ ಸಂಜೆ, ಪ್ರೇಕ್ಷಕರ ರಂಜಿಸಿದ ಸಂಗೀತ್ ಸಮರ್ಪಣ ಟ್ರಸ್ಟ್

ಸುಮಧುರ ಸಂಗೀತ ಸಂಜೆ, ಪ್ರೇಕ್ಷಕರ ರಂಜಿಸಿದ ಸಂಗೀತ್ ಸಮರ್ಪಣ ಟ್ರಸ್ಟ್

ಶಿವಮೊಗ್ಗ | 6 ಮಾರ್ಚ್‌ 2024 | ಡಿಜಿ ಮಲೆನಾಡು.ಕಾಂ

ಸಂಗೀತ ಸಮರ್ಪಣ್‌ ಟ್ರಸ್ಟ್‌ ವತಿಯಿಂದ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಸ್ವರಧಾರ ಆವೃತ್ತಿ 2 ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು. ಅಪರೂಪದ ಎಂದೂ ಮರೆಯದ ಹಾಡುಗಳ ಗಾಯನ ನಡೆಯಿತು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

1970 ಹಾಗೂ 90ರ ದಶಕಗಳ ಅವಧಿಯ ಜನಪ್ರಿಯ ಹಾಗೂ ಸುಮಧುರ ಗೀತೆಗಳನ್ನು ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಲಾಯಿತು. ಸಾಂಪ್ರದಾಯಿಕ ಗಣಪತಿ ಸ್ತುತಿಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಅನೇಕ ಗೀತೆಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

Click on below this picture, Like & Follow Facebook Page ” Digi Malenadu “

ಕಾರ್ಯಕ್ರಮದ ಆಯೋಜಕಿ, ಗಾಯಕಿ ಸುರೇಖಾ ಹೆಗಡೆಯವರೊಂದಿಗೆ ಬೆಂಗಳೂರಿನ ಗಾಯಕ ಹ್ಯಾರಿಸ್, ಶಶಿಕಿರಣ್ ಸುಮಧುರ ಗೀತೆಗಳನ್ನು ಪ್ರಸ್ತುತ ಪಡಿಸಿದರು. ವಾದ್ಯದಲ್ಲಿ  ಮೆಲ್ವಿನ್ ಲೀಮಾ, ಬಸವರಾಜ್ ರಾಣಿಬೆನ್ನೂರು, ರಾಮರಾವ್ ರಂಗಧೋಳ್, ವಿಠಲ್ ರಂಗಧೋಳ್, ಸಂದೀಶ್ ಹೊಸಪೇಟೆ ಸಹಕಾರ ನೀಡಿದರು.

ಸುಮಧುರ ಗೀತೆಗಳ ಕಾರ್ಯಕ್ರಮವನ್ನು ಶಾಸಕ, ರಂಗಕರ್ಮಿ ಎಸ್. ಎನ್. ಚನ್ನಬಸಪ್ಪ ಉದ್ಘಾಟಿಸಿ ಮಾತನಾಡಿದರು. ಕಲಾಪೋಷಕ ಲಕ್ಷ್ಮೀನಾರಾಯಣ ಕಾಶಿ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಸುರೇಖಾ ಹೆಗಡೆ ವಹಿಸಿದ್ದರು. ಸ್ವರ ಅವರು ಸುಶ್ರಾವ್ಯವಾಗಿ ಪ್ರಾರ್ಥನಾ ಗೀತೆ ಹಾಡಿದರು. ಸಮನ್ವಯ ಕಾಶಿ ಕಾರ್ಯಕ್ರಮ ನಿರೂಪಿಸಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ :[email protected]

ನಿನದೇ ನೆನಪು, ಅಲ್ಲಿ ಇಲ್ಲಿ ನೋಡುವೆ ಏಕೆ, ಹೇಳೇ ಕೋಗಿಲೇ, ಮೀನಾಕ್ಷಿ ನಿನ್ನ ಕಣ್ಣ, ರೂಪ್ ತೇರಾ ಮಸ್ತಾನ, ಏನೇ ಕೇಳು ಕೊಡುವೆ ನಿನಗೆ ನಾನೀಗ, ಹೋದೆಯ ದೂರ ಓ ಜೊತೆಗಾರ, ಬಾರೆ ಸಂತೆಗೆ ಹೋಗೋಣ ಬಾ, ಮೇರಿ ಸಪನೋಂಕಿ ರಾಣಿ, ನಾನು ಯಾರು, ಯಾವ ಊರು, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಗೂ ಎದೆ ತುಂಬಿ ಹಾಡಿದೆನು ಇಂದು ನಾನು ಗೀತೆಗಳನ್ನು ಹಾಡಿದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!