ಮನೆಯಿಂದಲೇ ಮತದಾನ ಪ್ರಕ್ರಿಯೆ ಆರಂಭ

ಮನೆಯಿಂದಲೇ ಮತದಾನ ಪ್ರಕ್ರಿಯೆ ಆರಂಭ

ಶಿವಮೊಗ್ಗ | 26 ಏಪ್ರಿಲ್‌ 2024 | ಡಿಜಿ ಮಲೆನಾಡು.ಕಾಂ

ಲೋಕಸಭಾ ಚುನಾವಣೆ 2024 ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಶಿವಮೊಗ್ಗ ನಗರದ ವಿವಿಧೆಡೆಗಳಲ್ಲಿ ನಡೆದ ಮನೆಯಿಂದಲೇ ಮತದಾನ ಪ್ರಕ್ರಿಯೆಯನ್ನು ಜಿಪ ಸಿಇಒ ಸ್ನೇಹಲ್‌ ಲೋಖಂಡೆ ವೀಕ್ಷಿಸಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ನಗರ  ವ್ಯಾಪ್ತಿಯ ಶರಾವತಿ ನಗರದ 91 ವರ್ಷದ ಹಿರಿಯ ನಾಗರೀಕ ಚಂದ್ರಶೇಖರಪ್ಪ, ಕೋಟೆ ರೋಡ್‌ ವ್ಯಾಪ್ತಿಯ 90 ವರ್ಷದ ಹಿರಿಯ ನಾಗರಿಕ ಅನ್ನಪೂರ್ಣಮ್ಮ ಹಾಗೂ ಹೊಸಮನೆ ವ್ಯಾಪ್ತಿಯ ವಿಶೇಷ ಚೇತನ ಮತದಾರ ಹನುಮಂತರಾಯಪ್ಪ ಸೇರಿದಂತೆ ಅನೇಕರು ಪೋಸ್ಟಲ್‌ ಬಾಲೆಟ್‌ ಮೂಲಕ ಮತದಾನ ಮಾಡಿದರು.

ಮತದಾನ ಮಾಡಿದ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರು ಕಡ್ಡಾಯವಾಗಿ ಮತದಾನ ಮಾಡುವ ಅಭಿಲಾಷೆಯನ್ನು ಹೊಂದಿರುವ ಬಗ್ಗೆ ಜಿಪಂ ಸಿಇಒ ಸ್ನೇಹಲ್‌ ಲೋಖಂಡೆ ಸಂತಸ ವ್ಯಕ್ತಪಡಿಸಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ :[email protected]

ಮುಖ್ಯ ಯೋಜನಾಧಿಕಾರಿ, ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ, ಸೆಕ್ಟರ್‌ ಅಧಿಕಾರಿ ಹಾಗೂ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳು, ಬಿಎಲ್ಓ ಹಾಜರಿದ್ದರು. ಏಪ್ರಿಲ್‌ 30ರವರೆಗೂ ಮನೆ ಮತದಾನಕ್ಕೆ ಅವಕಾಶವಿದೆ.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!