ಅಧ್ಯಾಪಕರು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ

ಅಧ್ಯಾಪಕರು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ

ಶಿವಮೊಗ್ಗ | 22 ಮೇ 2024 | ಡಿಜಿ ಮಲೆನಾಡು.ಕಾಂ

ಅಧ್ಯಾಪಕರು ನಿರಂತರವಾದ ಕಲಿಕೆ ಮತ್ತು ನಾವಿನ್ಯತೆಗೆ ಅನುಗುಣವಾಗಿ ಸಿದ್ಧರಾಗಬೇಕು. ಕಲಿಕೆ ಮತ್ತು ಬೋಧನೆ ಇವೆರಡು ಕೂಡ ವಿಭಿನ್ನ ಪ್ರಕ್ರಿಯೆಗಳು. ಅತ್ಯಂತ ಪರಿಣಾಮಕಾರಿಯಾಗಿ ಬೋಧಿಸಲು ನಿರಂತರ ಅಧ್ಯಯನ ಅಗತ್ಯವಿದೆ ಎಂದು ಪಿಇಎಸ್‌ ಟ್ರಸ್ಟ್‌ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಡಾ. ನಾಗರಾಜ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ನಗರದ ಪಿಇಎಸ್‌ ಐಎಎಮ್‌ಎಸ್ ಪದವಿ ಕಾಲೇಜಿನ ಐಕ್ಯುಎ ಸೆಲ್, ಕಂಪ್ಯೂಟರ್ ಸೈನ್ಸ್ ವಿಭಾಗ, ಕ್ಲಸ್ಟರ್ ಫೋರಂ ಹಾಗೂ ಐಸಿಟಿ ಅಕಾಡೆಮಿ ಕರ್ನಾಟಕದ ಸಹಯೋಗದಲ್ಲಿ ಏರ್ಪಡಿಸಿದ್ದ 5 ದಿನಗಳ ಎಫ್‌ಡಿಪಿ ಕಾರ್ಯಾಗಾರದಲ್ಲಿ ಮಾತನಾಡಿ, ಪ್ರಾಯೋಗಿಕ ಕೌಶಲ್ಯದ ಜತೆಗೆ ತಂತ್ರಜ್ಞಾನ ಮಾಹಿತಿಯನ್ನು ಹೆಚ್ಚು ಅಧ್ಯಯನ ನಡೆಸಬೇಕು ಎಂದು ತಿಳಿಸಿದರು.

ಅಧ್ಯಾಪಕರು ಒಂದು ಗಂಟೆ ಬೋಧಿಸಲು ಕನಿಷ್ಠ ಮೂರ್ನಾಲ್ಕು ಗಂಟೆಗಳ ಕಾಲ ಅಧ್ಯಯನ ಮಾಡುವುದು ಅಗತ್ಯವಿದೆ. ಶಿಕ್ಷಣ ಕ್ಷೇತ್ರಕ್ಕೂಕೈಗಾರಿಕೋದ್ಯಮಕ್ಕೂ ಸಾಕಷ್ಟು ಅಂತರವಿದೆ. ಅಧ್ಯಾಪಕರು ಕಡ್ಡಾಯವಾಗಿ ಗುಣಮಟ್ಟದ ಎಫ್‌ಡಿಪಿ ಕಾರ್ಯಾಗಾರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಐಸಿಟಿ ಅಕಾಡೆಮಿ ತರಬೇತಿ ಮತ್ತುಅಭಿವೃದ್ಧಿ ವಿಭಾಗದ ತಾಂತ್ರಿಕ ತರಬೇತುದಾರ ಆದಿತ್ಯ ಝಾ ಮಾತನಾಡಿ, ಎಫ್‌ಡಿಪಿ ಕಾರ್ಯಾಗಾರದಲ್ಲಿ ಭಾಗವಹಿಸುವುದರಿಂದ ಜ್ಞಾನ ಹೆಚ್ಚುತ್ತದೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಕಲಿಸುವ ಸಂದರ್ಭದಲ್ಲಿ ನೆರವಾಗುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯೆ ಡಾ. ಎ.ಅರುಣಾ ಮಾತನಾಡಿ, ಅಧ್ಯಾಪಕರು ನಿರಂತರ ಕಲಿಯುವ ಮೂಲಕ ವಿದ್ಯಾರ್ಥಿಗಳ ಕನಸುಗಳನ್ನು ಸಾಕಾರಗೊಳಿಸುವಲ್ಲಿ ನೆರವಾಗಬಹುದು ಎಂದು ತಿಳಿಸಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : [email protected]

Click on below this picture, Like & Follow Facebook Page ” Digi Malenadu “

ವಿವಿಧ ಪದವಿ ಕಾಲೇಜುಗಳಿಂದ 33 ಅಧ್ಯಾಪಕರು ಭಾಗವಹಿಸಿದ್ದರು. ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಐಸಿಟಿ ಅಕಾಡೆಮಿ ಕರ್ನಾಟಕದ ವಿಭಾಗೀಯ ವ್ಯವಸ್ಥಾಪಕ ಎಂ.ಎಸ್‌.ಜಕಾವುಲ್ಲಾ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಡಿ.ಎಸ್‌.ರೂಪಾ, ಉಮ್ಮೆಆಸ್ಮಾ, ಜಿ.ರಕ್ಷಿತಾ, ಸಚ್ಚಿದಾನಂದ ಹಾಗೂ ಅಧ್ಯಾಪಕರು ಭಾಗವಹಿಸಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!