ಹಿಮಾಚಲ ಪ್ರದೇಶದ ಚಂದ್ರಕಾಣಿ ಪಾಸ್ ಚಾರಣ

ಹಿಮಾಚಲ ಪ್ರದೇಶದ ಚಂದ್ರಕಾಣಿ ಪಾಸ್ ಚಾರಣ

ಶಿವಮೊಗ್ಗ | 29 ಮೇ 2024 | ಡಿಜಿ ಮಲೆನಾಡು.ಕಾಂ

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ದೆಹಲಿ, ಸಂಸ್ಕೃತ ಭಾರತಿ ಶಿವಮೊಗ್ಗ,  ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ, ಗೀರ್ವಾಣ ಭಾರತಿ ಶ್ರೀ ಆದಿಚುಂಚನಗಿರಿ ಘಟಕ ಹಾಗೂ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಆಶ್ರಯದಲ್ಲಿ ಹಿಮಾಚಲ ಪ್ರದೇಶದ ಚಂದ್ರಕಾಣಿ ಪಾಸ್ ನ 12,500 ಅಡಿ ಎತ್ತರದ ಪ್ರದೇಶದಲ್ಲಿ ಸಂಸ್ಕೃತ  ಧ್ವಜಾರೋಹಣ ನೆರವೇರಿಸಲಾಯಿತು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಮೈಸೂರಿನ ಚಾರಣಿಗ ಕೃಷ್ಣಕುಮಾರ್ ಮಾತನಾಡಿ, 14 ರಾಜ್ಯದ ಪ್ರತಿನಿಧಿಗಳು ತಮ್ಮ ರಾಜ್ಯದಲ್ಲಿ ಸಂಸ್ಕೃತದ ಪ್ರಚಾರ ಕಾರ್ಯವನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ದೇಶಾದ್ಯಂತ ಸಂಸ್ಕೃತಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಕೃತ ಭಾರತಿ ಸದಾ ನಮಗೆ ಸಹಕಾರ ನೀಡುತ್ತದೆ. ಇದರ ಸಹಕಾರ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕೇಂದ್ರೀಯ ವಿಶ್ವವಿದ್ಯಾಲಯದ ಚಾರಣದ ಸಂಯೋಜನಾಧಿಕಾರಿ ಮನೋಜ್ ಮಿಶ್ರಾ ಹಾಗೂ ಚಾರಣದ ಮುಖ್ಯಸ್ಥ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್ ಚಾರಣಿಗರ ತಂಡದ ನಾಯಕರಾಗಿ ಮಾರ್ಗದರ್ಶಕರಾಗಿದ್ದರು.

ಚಾರಣದ ನಾಯಕರಾದ ಸುಂದರಲಾಲ್ ಪಾಂಡೆ, ನಾಗೇಂದ್ರ, ಆದಿತ್ಯ ಪ್ರಸಾದ್, ಉಮಾಮಹೇಶ್ವರ ಹಾಜರಿದ್ದರು. ದೇಶದ ವಿವಿಧ ರಾಜ್ಯಗಳಿಂದ ಕೇಂದ್ರೀಯ ವಿಶ್ವ ವಿದ್ಯಾನಿಲಯದ 25 ಜನ ವಿದ್ಯಾರ್ಥಿಗಳ ಜತೆಗೆ ಕರ್ನಾಟಕದ 26 ಜನರ ತಂಡ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : [email protected]

Click on below this picture, Like & Follow Facebook Page ” Digi Malenadu “

ಸೋಲಾಟಾಂಕಿ, ಮೌಂಟೇನಾಗ, ಉಬ್ಲತಾಜ್, ದೋರನಾಲ ಶಿಬಿರಗಳನ್ನು ದಾಟಿ 12,500 ಅಡಿ ಎತ್ತರದ ಹಿಮಾಲಯದ ಚಂದ್ರಕಾಣಿ ಪಾಸ್ ನಲ್ಲಿ ಸಂಸ್ಕೃತ ಧ್ವಜಾರೋಹಣ ನೆರವೇರಿಸಲಾಯಿತು. ಐದು ದಿನಗಳಲ್ಲಿ 60 ಕಿಮೀ ಚಾರಣ ನಡೆಸಿದ್ದಾರೆ. ಒಟ್ಟು 51 ಜನ ಸಂಸ್ಕೃತ ವಿದ್ಯಾರ್ಥಿಗಳು ಚಾರಣದಲ್ಲಿದ್ದರು.

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!