ಜೆಎನ್ಎನ್ ಸಿಒ ಇಲೆಕ್ಟ್ರಾನಿಕ್ಸ್ ತಾಂತ್ರಿಕ ಪ್ರಯೋಗಗಳ ಅನಾವರಣ, ರಸ್ತೆ ಸುರಕ್ಷತೆಗೆ ಬಂತು ‘ಸ್ಮಾರ್ಟ್ ಹೆಲ್ಮೆಟ್’

ಜೆಎನ್ಎನ್ ಸಿಒ ಇಲೆಕ್ಟ್ರಾನಿಕ್ಸ್ ತಾಂತ್ರಿಕ ಪ್ರಯೋಗಗಳ ಅನಾವರಣ, ರಸ್ತೆ ಸುರಕ್ಷತೆಗೆ ಬಂತು ‘ಸ್ಮಾರ್ಟ್ ಹೆಲ್ಮೆಟ್’

ಶಿವಮೊಗ್ಗ | 30 ಮೇ 2024 | ಡಿಜಿ ಮಲೆನಾಡು.ಕಾಂ

ದೇಶದಲ್ಲಿ ರಸ್ತೆ ಅಪಘಾತಗಳು ಸಾವು ನೋವುಗಳು ಹೆಚ್ಚುತ್ತಲೆ ಇವೆ. ಅದರಲ್ಲೂ ತಲೆಗೆ  ಪೆಟ್ಟುಬಿದ್ದು ಸಾವಿಗೀಡಾದ ಸಂಖ್ಯೆಯೇ ಜಾಸ್ತಿ. ಅಂತಹ ಅಪಘಾತಗಳಿಂದ ತಲೆಗೆ ರಕ್ಷಣೆ ನೀಡುವ, ರಸ್ತೆ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವ ಹಾಗೂ ಅಪಘಾತವಾದ ತುರ್ತು ಪರಿಸ್ಥಿಯಲ್ಲಿ ವ್ಯಕ್ತಿಯ ಸಂಬಂಧಪಟ್ಟವರಿಗೆ ತಿಳಿಸುವ ಐಒಟಿ ತಂತ್ರಜ್ಞಾನ ಆಧಾರಿತ ಸ್ಮಾರ್ಟ್‌ ಹೆಲ್ಮೆಟ್‌ ಅನ್ನು ಜೆ.ಎನ್.ಎನ್.ಸಿ.ಇ ವಿದ್ಯಾರ್ಥಿಗಳು ರೂಪಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಶಿವಮೊಗ್ಗ ನಗರದ ಜೆ.ಎನ್.ಎನ್‌ ಇಂಜಿನಿಯರಿಂಗ್‌ ಕಾಲೇಜಿನ ಇಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌ ಇಂಜಿನಿಯರಿಂಗ್‌ ವಿಭಾಗದಿಂದ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಇಲೆಕ್ಟ್ರಾನಿಕ್ಸ್‌ ತಾಂತ್ರಿಕ ಪ್ರಯೋಗಗಳ ಅನಾವರಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಎಸ್.ಎಲ್‌. ಪ್ರಜ್ವಲ್, ಎಂ.ಡಿ. ಉದಿತ್‌, ಶ್ರೀಕೃಷ್ಣ ಕಂಠಿ, ಮೊಹಮದ್‌ ಶೇಕ್‌ ಅವರ ತಂಡ ಸಹ ಪ್ರಾದ್ಯಾಪಕಿ ಬಿ.ಎಸ್‌. ರೂಪಾ ಮಾರ್ಗದರ್ಶನದಲ್ಲಿ ರೂಪಿಸಿದ ‘ಸ್ಮಾರ್ಟ್‌ ಹೆಲ್ಮೆಟ್‌ ಫಾರ್‌ ಅಡ್ವಾನ್ಸ್ಡ್‌ ಅಸಿಸ್ಟೆನ್ಸ್‌ ಅಂಡ್‌ ಸೇಫ್ಟಿ’ ಪ್ರಾತ್ಯಕ್ಷಿಕೆ ಸುರಕ್ಷಿತ ವಾಹನ ಚಾಲನೆಗೆ ಹೊಸ ಸ್ಪರ್ಶ ನೀಡಿತ್ತು.

ಈ ಹೆಲ್ಮೆಟ್‌ ಧರಿಸಿ ವಾಹನ ಚಾಲನೆ ಮಾಡುವುದರಿಂದ ಹಿಂದೆ ಬರುವ ಇತರೆ ವಾಹನಗಳನ್ನು ಚಿಕ್ಕ ಪರದೆ ಮೂಲಕ ಸವಾರರು ನೋಡಬಹುದು. ಇದರೊಂದಿಗೆ ಅಪಘಾತವಾದ ಸಂದರ್ಭದಲ್ಲಿ ಅಪಘಾತಗೊಂಡ ನಿಖರ ಸ್ಥಳದ ಮಾಹಿತಿಯನ್ನು ಅಪಘಾತಕ್ಕಿಡಾದ ವ್ಯಕ್ತಿ ಸಂಬಂಧಿಕರಿಗೆ ತಲುಪುವಂತೆ ರೂಪಿಸಲಾಗಿದೆ. ಐಒಟಿ ತಂತ್ರಜ್ಞಾನದೊಂದಿಗೆ ರಾಸ್ಬೆರಿ ಪೈ ಮತ್ತು ಅರ್ಡಿನೊ ಮೈಕ್ರೊ ಕಂಟ್ರೊಲರ್‌ ಬಳಸಿ ಹೆಲ್ಮೆಟ್‌ ರೂಪಿಸಲಾಗಿದೆ. ಮೂರು ತಿಂಗಳ ನಿರಂತರ ಪ್ರಯೋಗಗಳು ನಡೆಸಲಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳ ತಂಡ.

ಐಒಟಿ ಮೂಲಕ ಮೊಬೈಲ್‌ ಮೂಲಕವೇ ಸ್ವಯಂಚಾಲಿತವಾಗಿ ಅಡಕೆ ಬೇಯಿಸುವ ಮತ್ತು ಒಣಗಿಸುವ ಯೋಜನಾ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಾದ ಮೊಹಮದ್‌ ಫೌಜಾನ್‌, ಆರ್.ಎಸ್‌. ಚಂದನ್, ಸೈಯದ್‌ ಮೊಹಮದ್‌ ನಯಾಜ್‌ ತಂಡ ಸಹಾಯಕ ಪ್ರಾಧ್ಯಾಪಕಿ ಕೆ.ಎನ್. ಪ್ರೇಮಾ ಮಾರ್ಗದರ್ಶನದಲ್ಲಿ ರೂಪಿಸಿ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದರು.

ಡೀಪ್‌ ಲರ್ನಿಂಗ್‌ ಮೂಲಕ ಇನ್‌ಫ್ಯಾಟ್ಸ್‌ ಕ್ರೈ ರೆಸ್ಪಾನ್ಸ್‌, ಅಂಧರಿಗಾಗಿ ಫೇಕ್‌ ಕರೆನ್ಸಿ ರೆಕಗ್ನಿಷನ್ ಸಿಸ್ಟಮ್‌, ವಿಸುಯಲ್‌ ಕ್ರಿಪ್ಟೊಗ್ರೆಫಿ ಸ್ಕೀಮ್‌ ಡಿಸೈನ್‌ ಬೇಸ್ಡ್‌ ಆನ್‌ ಕ್ಯೂಆರ್‌ ಕೋಡ್‌, ಲೈಫೈ ಮೂಲಕ ಡೇಟಾ ಟ್ರಾನ್ಸ್‌ಮಿಷನ್‌, ಮೊಬೈಲ್‌ ನಲ್ಲಿರುವ ತಾಂತ್ರಿಕ ಗುಣಲಕ್ಷಣಗಳನ್ನು ವಿದ್ಯಾರ್ಥಿಗಳಿಗೆ ತಿಳಿಹೇಳುವ ಜಿಎಸ್‌ಎಂ ಮಾಡೆಲ್‌ ಹೊಂದಿದ ಸೆಲ್‌ ಫೋನ್‌, ಬ್ರೈನ್‌ ಕಂಟ್ರೋಲ್ಡ್‌ ರೊಬೊಟಿಕ್‌ ಕಾರು, ಕೃತಕ ಬುದ್ದಿಮತ್ತೆ ಮೂಲಕ ಕ್ಷ-ಕಿರಣದಿಂದ ಶ್ವಾಸಕೋಶ ಕ್ಯಾನ್ಸರ್‌ ಪತ್ತೆ ಮಾಡುವ ತಂತ್ರಜ್ಞಾನ ಸೇರಿ ವಿದ್ಯಾರ್ಥಿಗಳ ನಾವೀನ್ಯ ಪ್ರಯೋಗಗಳು ನೋಡುಗರನ್ನು ಆಕರ್ಷಿಸಿತು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : [email protected]

Click on below this picture, Like & Follow Facebook Page ” Digi Malenadu “

ಸಹಾಯಕ ಪ್ರಾಧ್ಯಾಪಕಿ ಡಾ. ಎಸ್‌. ಶೀಲಾ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಎಚ್‌.ವರುಣ, ಯು. ಸುಮಂತ್, ಪುರುಷೋತ್ತಮ್‌, ಯುವರಾಜ್‌ ತಂಡ ರೂಪಿಸಿದ ಡಿಸೈನ್‌ ಸಿಮ್ಯುಲೇಷನ್‌ ಅಂಡ್‌ ಲೇಔಟ್‌ ಆಫ್‌ ಲೋ ಡ್ರಾಪ್‌ ಔಟ್‌ ಓಲ್ಟೇಜ್‌ ರೆಗ್ಯುಲೇಟರ್ (ಪ್ರಥಮ ಬಹುಮಾನ), ಡಾ. ಎಚ್.ಆರ್‌. ಶ್ವೇತಾ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಬಿ. ಅಂಕಿತಾ, ಎಚ್.ಜಿ. ರತ್ನಾ, ಗಗನಾ, ಮೊಹಮದ್‌ ಇಸ್ಮಾಯಿಲ್‌ ತಂಡ ರೂಪಿಸಿದ ಆಟೊಮೆಟೆಡ್‌ ರೆಸ್ಪಾನ್ಸ್‌ ಅಂಡ್‌ ಕ್ಲಾಸಿಫಿಕೇಷನ್‌ ಆಫ್‌ ಇನ್ ಫ್ಯಾಂಟ್ಸ್ ಕ್ರೈ(ದ್ವಿತೀಯ ಬಹುಮಾನ), ಸ್ಮಾರ್ಟ್‌ ಹೆಲ್ಮೆಟ್‌ ಫಾರ್‌ ಅಡ್ವಾನ್ಸ್ಡ್‌ ಅಸಿಸ್ಟೆನ್ಸ್‌ ಅಂಡ್‌ ಸೇಫ್ಟಿ (ತೃತೀಯ ಬಹುಮಾನ) ಪಡೆದಿದೆ.

ಕಾಲೇಜಿನ ಪ್ರಾಚಾರ್ಯ ಡಾ. ವೈ.ವಿಜಯಕುಮಾರ್‌, ಸಂಶೋಧನಾ ಡೀನ್‌ ಡಾ. ಎಸ್.ವಿ.ಸತ್ಯನಾರಾಯಣ, ಏಕತ್ವ ಇನೊವೇಷನ್‌ ಕಂಪನಿ ಸಿಇಒ ಎಚ್.ಸಿ.ವಿಕಾಸ್, ಕ್ಯಾಡೆನ್ಸ್‌ ಡಿಸೈನ್‌ ಸಿಸ್ಟಮ್‌ ಇಂಜಿನಿಯರ್‌ ಎ.ಸಿ.ಸಂಜಯ್, ಸಂಯೋಜಕರಾದ ಡಾ. ಎಸ್. ಪ್ರಮೋದ್‌ ಕುಮಾರ್, ಎಸ್.ಡಿ.ನಳೀನಾ ಉಪಸ್ಥಿತರಿದ್ದರು.

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!