ಯುವ ಪ್ರತಿಭೆಗಳಿಗೆ ಉತ್ಥಾನ ಉತ್ತಮ ವೇದಿಕೆ

ಯುವ ಪ್ರತಿಭೆಗಳಿಗೆ ಉತ್ಥಾನ ಉತ್ತಮ ವೇದಿಕೆ

ಶಿವಮೊಗ್ಗ | 17 ಮೇ 2024 | ಡಿಜಿ ಮಲೆನಾಡು.ಕಾಂ

ಯುವ ಜನರಲ್ಲಿ ಉತ್ತಮ ಪ್ರತಿಭೆ ಇದ್ದು, ಪ್ರತಿಭೆ ಅನಾವರನಗೊಳ್ಳಲು ಉತ್ತಮ ವೇದಿಕೆಗಳ ಅವಶ್ಯಕತೆ ಇದೆ ಎಂದು ನಟಿ ನಿಧಿ ಸುಬ್ಬಯ್ಯ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ನಗರದ ಜೆಎನ್ಎನ್ ಇಂಜಿನಿಯರಿಂಗ್‌ ಕಾಲೇಜಿನ ಎಂಬಿಎ ವಿಭಾಗವು ಏರ್ಪಡಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಗಳ “ಉತ್ಥಾನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶಿಸಲು ಉತ್ಥಾನ ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಅತ್ಯಂತ ಅಗತ್ಯ. ವಿದ್ಯಾರ್ಥಿಗಳು ಸಮಯದ ಸದ್ವಿನಿಯೋಗ ಮಾಡಿದಾಗ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

30 ಪದವಿ ಕಾಲೇಜಿನ 850ಕ್ಕೂ ಅಧಿಕ ವಿದ್ಯಾರ್ಥಿಗಳು, ಸಮೂಹ ನೃತ್ಯ, ರಸಪ್ರಶ್ನೆ, ಸಮೂಹ ಗಾನ, ಫೇಸ್‌ ಪೈಟಿಂಗ್, ಟ್ರಜರ ಹಂಟ್, ಪೇಪರ್ ಪ್ರೆಸಂಟೇಶನ್ , ವಾಲಿಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : [email protected]

Click on below this picture, Like & Follow Facebook Page ” Digi Malenadu “

ಶಿಮುಲ್‌ ಶೇಖರ್, ಎನ್‌ಇಎಸ್‌ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಖಜಾಂಚಿ ಡಿ.ಜೆ.ರಮೇಶ್, ನಿರ್ದೇಶಕ ಅಶ್ವಥ್ ನಾರಾಯಣ ಶೆಟ್ಟಿ, ಶಿವಕುಮಾರ್, ಜೆಎನ್‌ಎನ್‌ ಪ್ರಾಚಾರ್ಯ ಡಾ. ವೈ.ವಿಜಯಕುಮಾರ್, ಎಂಬಿಎ ವಿಭಾಗ ನಿರ್ದೇಶಕ ಡಾ. ಸಿ.ಶ್ರೀ ಕಾಂತ, ಅನುರಾಧ, ಡಾ. ಸಂತೋಷ, ಡಾ. ಪ್ರವೀಣ್ ಕುಮಾರ್, ಡಾ. ಬಿ.ವಿ.ಶ್ರೀನಿವಾಸ್ ಮೂರ್ತಿ  ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!