ನಿರಂತರ ಪರಿಶ್ರಮದಿಂದ ಗುರಿ ಸಾಧನೆ

ನಿರಂತರ ಪರಿಶ್ರಮದಿಂದ ಗುರಿ ಸಾಧನೆ

ಶಿವಮೊಗ್ಗ | 25 ಮೇ 2024 | ಡಿಜಿ ಮಲೆನಾಡು.ಕಾಂ

ವಿದ್ಯಾರ್ಥಿಗಳು ಏಕಲವ್ಯನಂತೆ ಗುರಿ ಹೊಂದಿರಬೇಕು. ಗುರಿ ಸಾಧಿಸಲು ಅಚಲವಾದ ಸಮರ್ಪಣಾ ಭಾವ ಮತ್ತು ಪರಿಶ್ರಮ ಪಡುವ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪಿಇಎಸ್ ಶಿಕ್ಷಣ ಸಂಸ್ಥೆ ಟ್ರಸ್ಟಿ ಎಸ್. ವೈ.ಅರುಣಾದೇವಿ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಪಿಇಎಸ್‌ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಕ್ಯಾಂಪಸ್‌ ಸಂದರ್ಶನದಲ್ಲಿ ಆಯ್ಕೆಯಾದ 650 ವಿದ್ಯಾರ್ಥಿಗಳಿಗೆ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಉದ್ಯೋಗ ಕ್ಷೇತ್ರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೊದಲ ಎರಡು ವರ್ಷಗಳು ಭವಿಷ್ಯ ರೂಪಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಪಿಇಎಸ್ ಟ್ರಸ್ಟ್ ಮುಖ್ಯ ಆಡಳಿತ ಸಂಯೋಜಕ ಡಾ. ಆರ್‌.ನಾಗರಾಜ ಮಾತನಾಡಿ, ಉದ್ಯೋಗ ಮಾರುಕಟ್ಟೆಯಲ್ಲಿ ಪ್ರಸ್ತುತ ಇರುವ  ಸವಾಲುಗಳ ನಡುವೆಯೂ 650 ಕ್ಕೂ ಅಧಿಕ ವಿದ್ಯಾರ್ಥಿಗಳು ಉದ್ಯೋಗ ಅವಕಾಶ ಪಡೆದುಕೊಂಡಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಟಿಸಿಎಸ್, ಟಾಟಾ, ಪ್ರಗತಿ ಆಟೋಮೇಷನ್, ಎಟಾನ್ ಸೊಲ್ಯೂಷನ್ಸ್ ,ಡಿಎಫ್ಎಂ ಟೆಕ್ನಾಲಜಿಸ್, ಟೊಯೊಟಾ, ಪ್ರೇರಣಾ ಇಂಜಿನಿಯರಿಂಗ್ ವರ್ಕ್ಸ್‌, ಇಂಡಸ್ ಟವರ್, ಎನ್ವೆಂಚರ್, ಐಟಿಸಿ ಫುಡ್ಸ್, ಓಜಸ್ ಪವರ್, ಐಡಿಯಾ ಇನ್ಫಿನಿಟಿ , ಎವಿಡೆನ್, ಡಿಮಾರ್ಟ್‌, ನಿವಾ ಬುಪಾ, ಇಂಡೋ ಎಂಐಎಂ, ಒರಾಯನ್ ಗ್ರೂಪ್ಸ್ ಹೀಗೆ ಅನೇಕ ಕಂಪನಿಗಳು ಭಾಗವಹಿಸಿದ್ದವು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : [email protected]

Click on below this picture, Like & Follow Facebook Page ” Digi Malenadu “

ಪಿಇಎಸ್ ಐಟಿಎಂ ಪ್ರಾಚಾರ್ಯ ಡಾ. ಬಿ.ಎನ್‌.ಯುವರಾಜು, ಪಿಇಎಸ್ ಐಎಎಂಎಸ್ ಪ್ರಾಚಾರ್ಯ ಎ.ಅರುಣಾ, ಪಿಇಎಸ್ ಪಾಲಿಟೆಕ್ನಿಕ್ ಪ್ರಾಚಾರ್ಯ ಪ್ರೊ. ಜೆ.ಕೆ.ಗೌತಮ್, ಪಿಇಎಸ್ ಟ್ರಸ್ಟ್ ನ ಸಿಡಿಸಿ ಮುಖ್ಯಸ್ಥ ಡಾ. ಟಿ.ಎಂ.ಪ್ರಸನ್ನಕುಮಾರ್, ಸಹಾಯಕ ಪ್ರಾಧ್ಯಾಪಕಿ ಹಿಮರಶ್ಮಿ ಎಸ್ ನಾಯಕ್, ಸಹಾಯಕ ಮ್ಯಾನೇಜರ್ ಪೂಜಾ ಕೆ.ಗೌಡ ಉಪಸ್ಥಿತರಿದ್ದರು.

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!