ಮಕ್ಕಳಿಗೆ ಅಧ್ಯಯನ ಆಸಕ್ತಿ ಹೆಚ್ಚಿಸುವುದು ಅವಶ್ಯಕ

ಮಕ್ಕಳಿಗೆ ಅಧ್ಯಯನ ಆಸಕ್ತಿ ಹೆಚ್ಚಿಸುವುದು ಅವಶ್ಯಕ

ಶಿವಮೊಗ್ಗ | 29 ಮೇ 2024 | ಡಿಜಿ ಮಲೆನಾಡು.ಕಾಂ

ಸ್ಕೌಟ್ಸ್‌ ಮತ್ತು ಗೈಡ್ಸ್‌ ಶಿಕ್ಷಕರು ಪುಸ್ತಕ ಭಂಡಾರದಲ್ಲಿ ಇರುವ ಪುಸ್ತಕಗಳ ಅಧ್ಯಯನ ನಡೆಸಿ ಮಕ್ಕಳಿಗೆ ಜ್ಞಾನ ನೀಡಬೇಕು ಎಂದು ಜಿಲ್ಲಾ ಮುಖ್ಯ ಆಯುಕ್ತ ಕೆ.ಪಿ.ಬಿಂದುಕುಮಾರ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಪುಸ್ತಕ ಭಂಡಾರವನ್ನು ಉದ್ಘಾಟಿಸಿ ಮಾತನಾಡಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳಿಗೆ ಅವಶ್ಯವಿರುವ ಪುಸ್ತಕಗಳು ಇಲ್ಲಿದ್ದು, ರಾಜ್ಯ ಮತ್ತು ರಾಷ್ಟ್ರ ಸಂಸ್ಥೆಯಿಂದಲೂ ಬೇಕಾಗಿರುವ ಪುಸ್ತಕಗಳನ್ನು ತರಿಸಲಾಗುವುದು ಎಂದು ತಿಳಿಸಿದರು.

ಮಕ್ಕಳಿಗೂ ಪುಸ್ತಕಗಳ ಅಧ್ಯಯನ ಆಸಕ್ತಿ ಬೆಳೆಸಬೇಕು. ಪುಸ್ತಕಗಳ ಸದುಪಯೋಗ ಮಾಡಿಕೊಳ್ಳುವಂತೆ ಸಲಹೆ ನೀಡಬೇಕು ಎಂದರು.

ಜಿಲ್ಲಾ ಗೈಡ್ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿ ಎಚ್.ಪರಮೇಶ್ವರ್, ಜಿಲ್ಲಾ ಜಂಟಿ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಲಕ್ಷ್ಮೀ ರವಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಭಾರತಿ ಡಾಯಸ, ಕೇಂದ್ರ ಸ್ಥಾನಿಕ ಆಯುಕ್ತರಾದ ಜಿ.ವಿಜಯಕುಮಾರ, ಕೆ.ರವಿ, ಎಡಿಸಿ ವೇಣುಗೋಪಾಲ, ನಾರಾಯಣ, ಮಲ್ಲಿಕಾರ್ಜುನ ಕಾನೂರು, ಆನಂದ, ವೆಂಕಟಾಚಲ ಶಾಸ್ತ್ರಿ, ಡಿಟಿಸಿ ಎಚ್.ಶಿವಶಂಕರ್, ಎಲ್.ಎ ಕಾರ್ಯದರ್ಶಿ ರಾಜೇಶ ಅವಲಕ್ಕಿ, ಶೇಖರಪ್ಪ, ಹರೀಶ, ವೆಂಕಟೇಶ ಹಾಗೂ ಜಿಲ್ಲೆಯ ಪ್ರಿ-ಎ.ಎಲ್.ಟಿ., ಹಿಮಾಲಯ ವೃಕ್ಷಮಣಿಧಾರಕರು ಉಪಸ್ಥಿತರಿದ್ದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : [email protected]

Click on below this picture, Like & Follow Facebook Page ” Digi Malenadu “

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!