ಪ್ರತಿಯೊಬ್ಬರ ಮೇಲಿದೆ ಪ್ರಕೃತಿ ಸಂಪತ್ತು ಉಳಿಸುವ ಹೊಣೆ

ಪ್ರತಿಯೊಬ್ಬರ ಮೇಲಿದೆ ಪ್ರಕೃತಿ ಸಂಪತ್ತು ಉಳಿಸುವ ಹೊಣೆ

ಶಿವಮೊಗ್ಗ | 6 ಮೇ 2024 | ಡಿಜಿ ಮಲೆನಾಡು.ಕಾಂ

ಪ್ರಕೃತಿಯ ಮಡಿಲು ಸರ್ವರನ್ನು ಸಂತೋಷದಿಂದ ಇರುವಂತೆ ಮಾಡುತ್ತದೆ. ಆದ್ದರಿಂದ ಪ್ರಕೃತಿಯನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮೆಲ್ಲರದು ಎಂದು ಯೂತ್ ಹಾಸ್ಟೆಲ್ ರಾಷ್ಟ್ರೀಯ ಉಪಾಧ್ಯಕ್ಷ ಮೈಸೂರಿನ ರವಿಕುಮಾರ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದಿಂದ ಗೌರವ ಸ್ವೀಕರಿಸಿ ಮಾತನಾಡಿದರು.

Click on below this picture, Like & Follow Facebook Page ” Digi Malenadu “

ಪ್ರತಿಯೊಬ್ಬರು ಆರೋಗ್ಯದಿಂದ ಇರಲು ವ್ಯಾಯಾಮ, ಚಾರಣ, ಸೈಕ್ಲಿಂಗ್ ಅತಿ ಮುಖ್ಯ. ಈ ನಿಟ್ಟಿನಲ್ಲಿ ಯೂತ್ ಹಾಸ್ಟೆಲ್ ಅತ್ಯಂತ ಕಡಿಮೆ ಖರ್ಚನಲ್ಲಿ ಸುರಕ್ಷಿತವಾಗಿ ಹಾಗೂ ಅತ್ಯುತ್ತಮ ಪ್ರದೇಶಗಳಿಗೆ ದೇಶದ್ಯಾಂತ ವರ್ಷವೀಡಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಚೇರ‍್ಮನ್ ವಾಗೇಶ್ ಮಾತನಾಡಿ, 115 ವರ್ಷಗಳ ಇತಿಹಾಸ ಇರುವ ಯೂತ್ ಹಾಸ್ಟೆಲ್ ಜರ್ಮನಿಯಲ್ಲಿ ಪ್ರಾರಂಭಗೊಂಡು, 40 ವರ್ಷಗಳ ನಂತರ ಭಾರತದ ಮೈಸೂರಿನಲ್ಲಿ ಪ್ರಾರಂಭಗೊಂಡಿತು. ಈ ಸಂಸ್ಥೆ ಇಂದಿಗೆ 75 ವರ್ಷ ಆಗಿದ್ದು, ನಮ್ಮ ಘಟಕ 75 ಸಮಾರಂಭ ಏರ್ಪಡಿಸಲು ತೀರ್ಮಾನಿಸಿದೆ. ದೇಶದಲ್ಲಿ ಸದಸ್ಯತ್ವದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿ ಇದ್ದು, ನಾವೆಲ್ಲರೂ ಸೇರಿ ಪ್ರಥಮ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಎನ್.ಗೋಪಿನಾಥ್ ಮಾತನಾಡಿ, ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ನಮ್ಮ ಘಟಕದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ವಿದೇಶ ಪ್ರವಾಸಕ್ಕೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ ಶ್ರೀಲಂಕಾಕ್ಕೆ ಪ್ರವಾಸ ಏರ್ಪಡಿಸಲಾಗಿದೆ. ಇತರೆ ದೇಶಗಳಿಗೂ ಕಡಿಮೆ ಖರ್ಚಿನಲ್ಲಿ ಏರ್ಪಡಿಸಬೇಕು ಎಂದು ಹೇಳಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ :[email protected]

ಮಾಜಿ ರಾಜ್ಯ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತಾನಾಡಿ, ನಮ್ಮ ಪಶ್ಚಿಮ ಘಟ್ಟಗಳಲ್ಲೂ ಚಾರಣಕ್ಕೆ ಉತ್ತಮ ಅವಕಾಶ ಇದ್ದು, ಈ ನಿಟ್ಟಿನಲ್ಲಿ ಗಮನ ಹರಿಸಿದರೆ ರಾಜ್ಯ ಪ್ರವಾಸೋದ್ಯಮಕ್ಕೆ ಸಹಕಾರಿಯಾಗಿ ಉದ್ಯೋಗ ಸೃಷ್ಠಿಯಾಗುತ್ತದೆ ಎಂದು ತಿಳಿಸಿದರು. ಡಾ. ಪ್ರಕೃತಿ ಮಂಚಾಲೆ, ಭಾರತಿ ಗುರುಪಾದಪ್ಪ, ಮಲ್ಲಿಕಾರ್ಜುನ್, ದಿಲೀಪ್ ನಾಡಿಗ್, ನಾಗರಾಜ್, ಸತೀಶ್, ಗೋಪಮ್ಮ, ಪರಶಿವಮೂರ್ತಿ ಇದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!