ರೋಟರಿ ಫೌಂಡೇಷನ್ ವತಿಯಿಂದ ನಿರಂತರ ಸೇವಾ ಕಾರ್ಯ
ಶಿವಮೊಗ್ಗ | 17 ಸೆಪ್ಟೆಂಬರ್ 2024 | ಡಿಜಿ ಮಲೆನಾಡು.ಕಾಂ
ರೋಟರಿ ಫೌಂಡೇಶನ್ ಲಾಭರಹಿತ ನಿಗಮವಾಗಿದ್ದು, ಅಂತರರಾಷ್ಟ್ರೀಯ ಮಾನವೀಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳ ಮೂಲಕ ವಿಶ್ವ ತಿಳವಳಿಕೆ ಮತ್ತು ಶಾಂತಿಯನ್ನು ಸಾಧಿಸಲು ರೋಟರಿ ಇಂಟರ್‌ನ್ಯಾಷನಲ್‌ನ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ. ಪಿ.ನಾರಾಯಣ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/JqXjFMwXzil6h4ePQU7iyo
ನಗರದ ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ರೋಟರಿ ದತ್ತಿನಿಧಿ ಕುರಿತ ವಿಶೇಷ ಉಪನ್ಯಾಸ ಕಾಯರ್ಕ್ರಮದಲ್ಲಿ ಮಾತನಾಡಿ, , ಇದು ಸ್ವಯಂಪ್ರೇರಿತ ಕೊಡುಗೆಗಳಿಂದ ಮಾತ್ರ ಬೆಂಬಲಿತವಾಗಿದೆ ಎಂದು ತಿಳಿಸಿದರು.
1917ರಲ್ಲಿ ಅಂತರಾಷ್ಟ್ರೀಯ ರೋಟರಿ ಆರನೇ ಅಧ್ಯಕ್ಷ ಆರ್ಚ್ ಸಿ ಕ್ಲಂಪ್ ಅವರು “ಜಗತ್ತಿನಲ್ಲಿ ಒಳ್ಳೆಯದನ್ನು ಮಾಡಲು” ರೋಟರಿ ದತ್ತಿ ನಿಧಿ ಸ್ಥಾಪಿಸಿದರು. ಇದು 26.5 ಅಮೇರಿಕನ್ ಡಾಲರ್ ಆರಂಭಿಕ ಕೊಡುಗೆಯಿಂದ ಪ್ರಾರಂಭವಾಗಿ ಶತಕೋಟಿ ಅಮೆರಿಕನ್ ಡಾಲರ್‌ಗೂ ಹೆಚ್ಚಿನ ಮೊತ್ತದ ದತ್ತಿನಿಧಿಯಾಗಿ ಬೆಳೆದಿದೆ. ವಿಶ್ವದ ಅತಿ ದೊಡ್ಡ ಮತ್ತು ಪ್ರತಿಷ್ಠಿತ ಅಂತರಾಷ್ಟ್ರೀಯ ಫೆಲೋಷಿಪ್ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದು ಮಾಹಿತಿ ನೀಡಿದರು.
ಪೋಲಿಯೋ ನಿರ್ಮೂಲನೆ, ಮಾನವೀಯ ಅನುದಾನ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಜಗತ್ತಿನ ಮೂಲೆ ಮೂಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು, ಉದ್ಯಮಿಗಳು ಸಂಪೂರ್ಣ ವಿಶ್ವಾಸದಿಂದ ದೇಣಿಗೆ ನೀಡಬಹುದು ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ರೋಟರಿ ಫೌಂಡೇಶನ್ ನಿಂದ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ರಕ್ತನಿಧಿ ಕೇಂದ್ರಗಳು, ಡಯಾಲಿಸಿಸ್ ಸೆಂಟರ್, ಮ್ಯಾಮೊಗ್ರಫಿ ಸೆಂಟರ್, ಮಿಲ್ಕ್ ಬ್ಯಾಂಕ್, ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್, ಶಾಲೆಗಳಿಗೆ ಪೀಠೋಪಕರಣಗಳು ಮುಂತಾದ ಕಾರ್ಯಕ್ರಮಗಳ ಮಾಹಿತಿ ನೀಡಿದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : [email protected]
Click on below this picture, Like & Follow Facebook Page ” Digi Malenadu “
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಅರುಣ್ ದೀಕ್ಷಿತ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಮಾಜಿ ಸಹಾಯಕ ಗವರ್ನರ್ ಚಂದ್ರಹಾಸ ರಾಯ್ಕರ್, ವಸಂತ್ ಹೋಬಳಿದಾರ್, ಡಾ. ಗುಡದಪ್ಪ ಕಸಬಿ, ಜಿ.ವಿಜಯಕುಮಾರ್ ಮತ್ತು ರೋಟರಿ ಶಿವಮೊಗ್ಗ ಪೂರ್ವದ ಮಾಜಿ ಅಧ್ಯಕ್ಷರಾದ ಆದಿಮೂರ್ತಿ, ಡಾ. ಪರಮೇಶ್ವರ್ ಶಿಗ್ಗಾಂವ್, ಶ್ರೀಕಾಂತ್ ಎನ್.ಹೆಚ್., ಮಹೇಶ್ ಆಲೆಮನೆ, ಮಂಜುನಾಥ್ ಕದಂ, ನಾಗವೇಣಿ ಹಾಗೂ ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್ ಮತ್ತು ಸದಸ್ಯರಾದ ಡಾ. ರವಿಕಿರಣ್, ಮಂಜುನಾಥ್, ಕೇಶವಪ್ಪ, ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/JqXjFMwXzil6h4ePQU7iyo
ಫೇಸ್ ಬುಕ್ :www.facebook.com/digimalenadu
ಟ್ವಿಟರ್ :www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ :https://digimalenadu.com/about-us/