ಜನ್ಮದಿನವನ್ನು ಸಮಾಜಮುಖಿ ಚಟುವಟಿಕೆ ಮುಖಾಂತರ ಆಚರಿಸಿ

Sಶಿವಮೊಗ್ಗ | 27 ಜನವರಿ 2025 | ಡಿಜಿ ಮಲೆನಾಡು.ಕಾಂ
ಜನ್ಮದಿನವನ್ನು ಸಮಾಜಮುಖಿಯಾಗಿ ಆಚರಿಸುವ ಮೂಲಕ ಅರ್ಥಪೂರ್ಣ ಸೇವಾ ಚಟುವಟಿಕೆಗಳನ್ನು ಮಾಡಬೇಕು ಎಂದು ರೋಟರಿ ಜಿಲ್ಲೆ ನಿಯೋಜಿತ ಗವರ್ನರ್ ವಸಂತ್ ಹೋಬಳಿದಾರ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ : https://whatsapp.com/channel/0029Vaf6LKjHbFV2qoWkPx0G
ಉಡುಪಿಯ ಶ್ರೀ ಕೃಷ್ಣ ಮಠದ ಆವರಣದ ಮಥುರಾ ಕಂಫರ್ಟ್‌ನಲ್ಲಿ ರೋಟರಿ ಶಿವಮೊಗ್ಗ ಮಿಡ್ ಟೌನ್ ಕೆ.ಕೃಷ್ಣಮೂರ್ತಿ ಅಭಿಮಾನಿ ಬಳಗ, ಯಶೋಧ ಆಟೋ ಯೂನಿಯನ್, ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್, ರಕ್ತ ನಿಧಿ ವಿಭಾಗ ಕೆಎಂಸಿ ಮಣಿಪಾಲದ ಸಂಯುಕ್ತ ಆಶ್ರಯದಲ್ಲಿ ದಾನಿ, ಸಮಾಜ ಸೇವಕ ಕೆ.ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ಜನ್ಮದಿನದ ಪ್ರಯುಕ್ತ ಜಿಲ್ಲಾಡಳಿತ ಉಡುಪಿ ಸಹಕಾರದೊಂದಿಗೆ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಒಂದು ಶ್ರೇಷ್ಠವಾದ ದಾನ. ರಕ್ತದಾನಕ್ಕಿಂತ ಮಿಗಿಲಾದ ದಾನ ಬೇರೊಂದಿಲ್ಲ. ರಕ್ತದ ಸರಬರಾಜು ಇಲ್ಲದೆ ಸಾಕಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ರಕ್ತದ ಕೊರತೆ ನೀಗಿಸಲು ರಕ್ತದಾನ ಒಂದೇ ಮಾರ್ಗ ಎಂದು ತಿಳಿಸಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ರಕ್ತದಾನದಿಂದ ನಾವು ಸದಾ ಲವಲವಿಕೆಯಿಂದ ಇರುವುದರ ಜತೆಗೆ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿ ಇರುತ್ತೇವೆ. ಹೃದಯಘಾತದ ಸಮಸ್ಯೆಯಿಂದ ದೂರ ಇರುತ್ತೇವೆ ಎಂದರು.
ಡಾ. ಗುಡದಪ್ಪ ಕಸಬಿ ಮಾತನಾಡಿ, ರಕ್ತದಾನಿಗಳು ಸಮಾಜದಲ್ಲಿ ನಿಜವಾದ ಹೀರೋಗಳು. ಈ ನಿಟ್ಟಿನಲ್ಲಿ ಶಿವಮೊಗ್ಗ ಹಾಗೂ ಉಡುಪಿಯ ಅನೇಕ ಸಂಘಟನೆಗಳೊಂದಿಗೆ ಸೇರಿಸಿ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : [email protected]
Click on below this picture, Like & Follow Facebook Page ” Digi Malenadu “
ರೋಟರಿ ಶಿವಮೊಗ್ಗ ಮಿಡ್‌ಟೌನ್ ಅಧ್ಯಕ್ಷ ಸುರೇಶ್ ಮಾತನಾಡಿ, ಪ್ರತಿ ವರ್ಷ 300ಕ್ಕೂ ಹೆಚ್ಚು ಯೂನಿಟ್‌ಗಳ ಸಂಗ್ರಹಣೆ ಆಗುವುದರ ಜತೆಗೆ ಸಾಕಷ್ಟು ರಕ್ತದ ಕೊರತೆ ನೀಗಿಸುತ್ತಿರುವ ಇಂತಹ ಸಂಘಟನೆಗಳು ನಿಜಕ್ಕೂ ಅಭಿನಂದನಾರ್ಹ ಎಂದು ತಿಳಿಸಿದರು.
ರಕ್ತದಾನ ಶಿಬಿರದಲ್ಲಿ 303 ಯೂನಿಟ್ ರಕ್ತ ಸಂಗ್ರಹವಾಯಿತು. ಕೆ.ಕೃಷ್ಣಮೂರ್ತಿ, ರಾಜೇಂದ್ರ ಪ್ರಸಾದ್, ರೋಟರಿ ನಿಯೋಜಿತ ಅಧ್ಯಕ್ಷ ಆನಂದ್, ದುರ್ಗಪ್ಪ, ಮಾಜಿ ಅಧ್ಯಕ್ಷೆ ವೀಣಾ ಸುರೇಶ್, ಡಾ. ಪ್ರಣೀತ್, ಡಾ. ತರುಣ್, ಹಾಗೂ ರಕ್ತದಾನಿಗಳು ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/JqXjFMwXzil6h4ePQU7iyo
ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ https://whatsapp.com/channel/0029Vaf6LKjHbFV2qoWkPx0G
ಫೇಸ್ ಬುಕ್ :www.facebook.com/digimalenadu
ಟ್ವಿಟರ್ :www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ :https://digimalenadu.com/about-us/