ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಕ್ಯಾನ್ಸರ್ ಜಾಗೃತಿಗಾಗಿ ಸೈಕ್ಲೋಥಾನ್

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಕ್ಯಾನ್ಸರ್ ಜಾಗೃತಿಗಾಗಿ ಸೈಕ್ಲೋಥಾನ್

ಶಿವಮೊಗ್ಗ | 9 ಫೆಬ್ರವರಿ 2025 | ಡಿಜಿ ಮಲೆನಾಡು.ಕಾಂ

ಕ್ಯಾನ್ಸರ್‌ ಜಾಗೃತಿಗಾಗಿ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಶಿವಮೊಗ್ಗ ಸೈಕಲ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ಸೈಕ್ಲೋಥಾನ್‌ನಲ್ಲಿ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು. ಶಿವಮೊಗ್ಗ ಸೈಕಲ್ ಕ್ಲಬ್ ನಿರ್ದೇಶಕ ಡಾ. ಎಚ್.ಎಂ. ನಟರಾಜ್, ಮೆಡಿಕಲ್‌ ಅಂಕೋಲೋಜಿಸ್ಟ್‌ ಡಾ. ಅಪರ್ಣ ಶ್ರೀವತ್ಸ ಹಸಿರು ನಿಶಾನೆ ತೋರಿಸಿ ಸೈಕ್ಲೋಥಾನ್‌ಗೆ ಚಾಲನೆ ನೀಡಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ಡಾ. ಅಪರ್ಣ ಶ್ರೀವತ್ಸ ಕ್ಯಾನ್ಸರ್‌ನ ಮುನ್ಸೂಚನೆ ಮತ್ತು ತಡೆಗಟ್ಟುವಿಕೆ ಕುರಿತು ಮಾತನಾಡಿ, ಕೆಲವರಲ್ಲಿ ಕ್ಯಾನ್ಸರ್‌ಗೆ ಕಾರಣ ಏನೆಂದು ತಿಳಿಯುವದಿಲ್ಲ. ಆದರೆ ಇದು ಯಾರಿಗಾದರೂ ಬರುವ ಸಾಧ್ಯತೆ ಇದೆ. ಅನಾರೋಗ್ಯಕರ ಗಡ್ಡೆ, ಅನಿರೀಕ್ಷಿತ ರಕ್ತಸ್ರಾವ ಕಂಡು ಬಂದರೆ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ.  40 ವರ್ಷ ಮೇಲ್ಪಟ್ಟವರು ವರ್ಷಕ್ಕೊಮ್ಮೆ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ಜಿಕಲ್‌ ಅಂಕಾಲಿಜಿಸ್ಟ್‌ ಡಾ. ವಿವೇಕ್ ಎಂ.ಎ.  ಮಾತನಾಡಿ, ಧೂಮಪಾನ, ಮದ್ಯಪಾನ, ಅನಾರೊಗ್ಯಕರ ಆಹಾರ ಪದ್ಧತಿ, ಚಟುವಟಿಕೆ ಇಲ್ಲದ ಜೀವನಶೈಲಿ ಮುಂತಾದವು ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳು. ಜನರು ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಡಾ. ಎಚ್.ಎಂ.ನಟರಾಜ ಮಾತನಾಡಿ, ಸೈಕ್ಲಿಂಗ್‌ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿದ್ದು, ಎಲ್ಲರೂ ಸೈಕಲ್‌ ಬಳಕೆ ಅಭ್ಯಾಸ ಮಾಡಬೇಕು. ಕೆಲಸಕ್ಕೆ ಹೋಗಿಬರಲು ಸೈಕಲ್‌ ಬಳಸಬೇಕು ಎಂದು ಹೇಳಿದರು.

ವ್ಯವಸ್ಥಾಪಕ ನಿರ್ದೇಶಕ ವರ್ಗೀಸ್ ಪಿ. ಜಾನ್, ಡಾ. ಶ್ರೀವತ್ಸ ನಾಡಿಗ್, ಡಾ. ರವಿ ಕೆ.ಆರ್., ಡಾ. ವಿಕ್ರಮ್ ಎಂ.ಜೆ., ಡಾ. ರಾಮಸುಂದರ್, ಮಾರ್ಕೆಟಿಂಗ್‌ ಜನರಲ್‌ ಮ್ಯಾನೇಜರ್‌ ರಾಜಸಿಂಗ್ ಎಸ್.ವಿ., ಮಾರ್ಕೆಟಿಂಗ್‌ ಮ್ಯಾನೇಜರ್‌ ಶೈಲೇಶ್ ಎಸ್.ಎನ್., ರೋಟರಿ ಕ್ಲಬ್ ಸದಸ್ಯ ಜಿ.ವಿಜಯಕುಮಾರ, ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : [email protected]

Click on below this picture, Like & Follow Facebook Page ” Digi Malenadu “

ಕ್ಯಾನ್ಸರ್ ಜಾಗೃತಿ ಮತ್ತು ಆರೋಗ್ಯಕರ ಜೀವನಶೈಲಿ ಪ್ರೋತ್ಸಾಹಿಸಲು ಮಹತ್ವದ ಸಂದೇಶ ಸಾರಲು ಸೈಕ್ಲೋಥಾನ್ ಯಶಸ್ವಿಯಾಯಿತು. ಸೈಕ್ಲೋಥಾನ್‌ ಕುವೆಂಪು ರಸ್ತೆಯ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ನಿಂದ ಪ್ರಾರಂಭವಾಗಿ ಉಷಾ ನರ್ಸಿಂಗ್ ಹೋಮ್, ವಿನೋಬನಗರ ಪೋಲೀಸ್ ಠಾಣೆ, ಅಲ್ಕೋಳ ವೃತ್ತ,  ಗೋಪಾಳ ಬಸ್ ನಿಲ್ದಾಣ, ಎನ್.ಟಿ. ರಸ್ತೆ ಮೂಲಕ ಸಾಗಿ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಹರಕೆರೆಯಲ್ಲಿ ಮುಕ್ತಾಯಗೊಂಡಿತು. ಸೈಕ್ಲೋಥಾನ್‌ಗೆ 300ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/JqXjFMwXzil6h4ePQU7iyo

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ಯೋಜನೆಗಳ ಪ್ರಾತ್ಯಕ್ಷಿಕೆ

digimalenadu

ಶಿವಮೊಗ್ಗ
error: Content is protected !!