ಉದ್ಯೋಗ ಅವಕಾಶ, ಸಮುದಾಯದ ಅಭಿವೃದ್ಧಿ ಐ ಲೈಫ್ ಫೋರಂ

ಶಿವಮೊಗ್ಗ | 13 ಫೆಬ್ರವರಿ 2025 | ಡಿಜಿ ಮಲೆನಾಡು.ಕಾಂ
ಐ ಲೈಫ್ ಇಂಟರ್‌ನ್ಯಾಷನಲ್ ಲಿಂಗಾಯತ್ ಫೋರಂ ಸಂಘಟನೆಗೆ ಸೇರುವುದರ ಮುಖಾಂತರ ಸಮುದಾಯದ ಅಭಿವೃದ್ಧಿ, ವ್ಯಾಪಾರ ವ್ಯವಹಾರ ಹಾಗೂ ಉದ್ಯೋಗದ ಅವಕಾಶಗಳನ್ನು ವೃದ್ಧಿಸಿಕೊಳ್ಳಲು ಅವಕಾಶವಿದೆ ಎಂದು ಐ ಲೈಫ್ ಸಂಸ್ಥೆ ಬೆಂಗಳೂರು ಚಾಪ್ಟರ್ ಪ್ರಧಾನ ಕಾರ್ಯದರ್ಶಿ ಸುನೀಲ್ ಪಿ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ : https://whatsapp.com/channel/0029Vaf6LKjHbFV2qoWkPx0G
ಐ ಲೈಫ್ ಟ್ರಸ್ಟ್ ಕಚೇರಿಯಲ್ಲಿ ಭೇಟಿ ನೀಡಿ ಸದಸ್ಯತ್ವ ಅಭಿಯಾನ ಹಾಗೂ ಶಿವಮೊಗ್ಗದಲ್ಲಿ ವ್ಯಾಪಾರ ವಹಿವಾಟು, ಸಮುದಾಯದ ಅಭಿವೃದ್ಧಿಯ ಬಗ್ಗೆ ಚರ್ಚಿಸಿ ಮಾತನಾಡಿ, ಐ ಲೈಫ್ ಸಂಸ್ಥೆ ಈಗಾಗಲೇ ರಾಜ್ಯದ ಹುಬ್ಬಳ್ಳಿ, ದಾವಣಗೆರೆ, ಬೆಂಗಳೂರು, ಮೈಸೂರು ಹಾಗೂ ಶಿವಮೊಗ್ಗದಲ್ಲಿ ಚಾಪ್ಟರ್‌ಗಳನ್ನು ಸ್ಥಾಪನೆ ಮಾಡುವುದರ ಮುಖಾಂತರ ವೀರಶೈವ ಲಿಂಗಾಯತ ಸಮುದಾಯದ ಯುವಜನತೆಯ ವ್ಯಾಪಾರ, ವ್ಯವಹಾರ, ಉದ್ಯೋಗ ಅವಕಾಶಗಳನ್ನು ಪ್ರೋತ್ಸಾಹಿಸಿ ಬೆಳೆಸಲು ಮತ್ತು ಸಮುದಾಯವನ್ನು ಒಟ್ಟುಗೂಡಿಸಲು ಐ ಲೈಫ್ ಸಂಸ್ಥೆ ಸತತ ಪರಿಶ್ರಮ ವಹಿಸುತ್ತಿದೆ ಎಂದು ತಿಳಿಸಿದರು.
ಐ ಲೈಫ್ ಸಂಸ್ಥೆ ಯಾವುದೇ ಧಾರ್ಮಿಕ ಹಾಗೂ ರಾಜಕಾರಣ ಚಟುವಟಿಕೆ ನಡೆಸುವುದಿಲ್ಲ. ಸಂಘಟನೆಗಾಗಿ, ಸಮುದಾಯದ ಅಭಿವೃದ್ಧಿಗಾಗಿ, ಸದಸ್ಯರ ಏಳಿಗೆಗಾಗಿ ಹಗಲಿರಲು ಶ್ರಮಿಸುತ್ತಿರುವ ಪ್ರತಿಷ್ಠಿತ ಅಂತರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ಇದಾಗಿದೆ. ಹೆಚ್ಚು ಹೆಚ್ಚು ಜನರು ಸದಸ್ಯರಾಗುವುದರ ಮುಖಾಂತರ ವ್ಯಾಪಾರ ಹಾಗೂ ಪರಸ್ಪರರಲ್ಲಿ ಒಡನಾಟ, ಸ್ನೇಹ ಹಾಗೂ ಸಂಬಂಧಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಲಿಂಗಾಯಿತ ಯುವ ವೇದಿಕೆ ಅಂತರಾಷ್ಟ್ರೀಯ ಮಟ್ಟದಲ್ಲೂ ಹಾಗೂ ಜಾಗತಿಕ ಮಟ್ಟದಲ್ಲಿ ಸಮುದಾಯ ಒಂದುಗೂಡಿಸಲು ಶ್ರಮವಹಿಸುತ್ತಿದೆ ಎಂದರು.
ಐ ಲೈಫ್ ಸಂಸ್ಥೆ ನಿರ್ದೇಶಕ ಗಣೇಶ್ ಎಂ ಅಂಗಡಿ ಮಾತನಾಡಿ, ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು, ಶಿಕ್ಷಣ ತಜ್ಞರು ಹಾಗೂ ಉದ್ಯಮಿಗಳ ನೆಟ್ವರ್ಕ್ ಹಾಗೂ ಸಂಪರ್ಕ ಕೊಂಡಿ ಬಲಪಡಿಸಲು, ಇದರ ಮುಖಾಂತರ ವ್ಯಾಪಾರ ವಹಿವಾಟು ಸೇವೆ ಮಾಡುತ್ತಿರುವವರಿಗೆ ಐ ಲೈಫ್ ಒಂದು ಒಳ್ಳೆಯ ವೇದಿಕೆಯಾಗಿದೆ ಎಂದು ತಿಳಿಸಿದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : [email protected]
Click on below this picture, Like & Follow Facebook Page ” Digi Malenadu “
ಐ ಲೈಫನಂತಹ ಸಂಸ್ಥೆಗಳನ್ನು ಯುವಜನರು ಸೇರಿಕೊಳ್ಳುವುದರ ಮುಖಾಂತರ ಸಮಾಜಮುಖಿಯಾಗಿ ಹಾಗೂ ಸ್ವಂತ ವೈಯುಕ್ತಿಕ ದುಡಿಮೆಯ ಅಭಿವೃದ್ಧಿಗೆ ಸದಸ್ಯತ್ವ ಪಡೆದುಕೊಳ್ಳಬೇಕು ಎಂದರು. ನೂತನ ಸದಸ್ಯರು ಸೇರ್ಪಡೆಗೊಂಡರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಉಪಾಧ್ಯಕ್ಷ ಜಿ.ವಿಜಯಕುಮಾರ್, ನಿರ್ದೇಶಕ ಪ್ರದೀಪ್ ವಿ ಎಲಿ, ಕಾರ್ಯದರ್ಶಿ ಸುರೇಶ್ ಎ ಎಂ., ರಶೀಲಾ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/JqXjFMwXzil6h4ePQU7iyo
ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ https://whatsapp.com/channel/0029Vaf6LKjHbFV2qoWkPx0G
ಫೇಸ್ ಬುಕ್ :www.facebook.com/digimalenadu
ಟ್ವಿಟರ್ :www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ :https://digimalenadu.com/about-us/
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳಿಗೆ ಸನ್ಮಾನ