ರೋಟರಿಯಿಂದ ನಿರಂತರ ಸಮಾಜಮುಖಿ ಕಾರ್ಯ

ಶಿವಮೊಗ್ಗ | 19 ಫೆಬ್ರವರಿ 2025 | ಡಿಜಿ ಮಲೆನಾಡು.ಕಾಂ
ರೋಟರಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ ಎಂದು ನಿಯೋಜಿತ ಗವರ್ನರ್ ವಸಂತ್ ಹೋಬಳಿದಾರ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ : https://whatsapp.com/channel/0029Vaf6LKjHbFV2qoWkPx0G
ನಗರದ ಕಾಸ್ಮೋ ಕ್ಲಬ್‌ನಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಆಯೋಜಿಸಿದ್ದ ರೋಟರಿ ನಾಯಕತ್ವ ಪ್ರಶಸ್ತಿ ಪ್ರಧಾನ, ರೋಟರಿ ಅಕಾಡೆಮಿ ಫಾರ್ ಹೈಯರ್ ಲೀಡರ್ಶಿಪ್ ಅವಾರ್ಡ್ (ರಹಲಾ) ಕಾರ್ಯಕ್ರಮದ ಸಮಾರೋಪದಲ್ಲಿ ಅವರನ್ನು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ರೋಟರಿ ಸಂಸ್ಥೆಯಲ್ಲಿ ನಿಯೋಜಿತ ಗವರ್ನರ್ ಆಗಿ ಆಯ್ಕೆಯಾಗಿರುವುದು ಸಂತಸದ ಜತೆಗೆ ಜವಾಬ್ದಾರಿ ಹೆಚ್ಚಿಸಿದೆ. ಆ ನಿಟ್ಟಿನಲ್ಲಿ 25 ವರ್ಷದಿಂದ ರೋಟರಿ ಸಂಸ್ಥೆಯಲ್ಲಿ ಸೇವೆ ಮಾಡುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇನೆ ಎಂದು ತಿಳಿಸಿದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : [email protected]
Click on below this picture, Like & Follow Facebook Page ” Digi Malenadu “
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಜಿ ಮಾತನಾಡಿ, ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿದೆ ಎಂದರು. ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್, ರೋಟರಿಯ ಅಭಿನಂದನ್ ಎ.ಶೆಟ್ಟಿ, ರಾಜಾರಾಮ್ ಭಟ್, ಎನ್.ಪ್ರಕಾಶ್, ಸಹಾಯಕ ಗವರ್ನರ್ ಎಚ್.ಎಂ. ಸುರೇಶ್, ಇವೆಂಟ್ ಚೇರ್ಮನ್ ರವಿ ಕೋಟೊಜಿ, ಚಂದ್ರಶೇಖರ್ ಮೆಂಡನ್ ಸವೀನ್ ಮತ್ತು ಐರೋಡಿ ರಾಮದೇವ ಕಾರಂತ, ಜಿ.ವಿಜಯ್ ಕುಮಾರ್, ರಮೇಶ, ಚುಡಾಮಣಿ ಪವಾರ್, ಈಶ್ವರ್, ಆನಂದ್, ಗುಡದಪ್ಪ ಕಸಬಿ, ಮಂಜುನಾಥ್ ರಾವ್ ಕದಂ, ಬಸವರಾಜ, ಜಯಶೀಲ ಶೆಟ್ಟಿ, ಅರುಣ್ ದೀಕ್ಷಿತ್, ಕಿಶೋರ್, ಗೀತಾ ಜಗದೀಶ್, ಧರ್ಮೇಂದ್ರ ಸಿಂಗ್ ಉಪಸಿತರಿದ್ದರು. 500ಕ್ಕೂ ಹೆಚ್ಚು ಸದಸ್ಯರು ಇದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/JqXjFMwXzil6h4ePQU7iyo
ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ https://whatsapp.com/channel/0029Vaf6LKjHbFV2qoWkPx0G
ಫೇಸ್ ಬುಕ್ :www.facebook.com/digimalenadu
ಟ್ವಿಟರ್ :www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ :https://digimalenadu.com/about-us/