ಪ್ರಕೃತಿ ವಿಸ್ಮಯ ಅರಿಯಲು ಚಾರಣ ಸಹಕಾರಿ

ಶಿವಮೊಗ್ಗ | 7 ಫೆಬ್ರವರಿ 2025 | ಡಿಜಿ ಮಲೆನಾಡು.ಕಾಂ
ಪ್ರಕೃತಿಯ ವಿಸ್ಮಯಗಳನ್ನು ಅರಿಯಲು ಚಾರಣ ಸಹಕಾರಿ. ಚಾರಣದಲ್ಲಿ ಪಾಲ್ಗೊಳ್ಳುವುದರಿಂದ ದೇಹ, ಮನಸ್ಸು ಸದೃಢವಾಗುತ್ತದೆ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಜಿ.ಗಣೇಶ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ : https://whatsapp.com/channel/0029Vaf6LKjHbFV2qoWkPx0G
ದಿಕ್ಸೂಚಿ ಅಡ್ವೆಂಚರ್ಸ್ ವತಿಯಿಂದ ಹಿಮಾಲಯದ ಅತ್ಯಂತ ಸುಂದರ ಹಾಗೂ ಚಾರಣಿಗರಿಗೆ ಸವಾಲಾಗಿರುವ 12 ಸಾವಿರ ಅಡಿ ಎತ್ತರದ ಕೌರಿ ಪಾಸ್ ಚಳಿಗಾಲದ ಚಾರಣಕ್ಕೆ ಚಾರಣಿಗರನ್ನು ಬಿಳ್ಕೋಡುಗೆ ನೀಡಿ ಮಾತನಾಡಿ, ಚಾರಣದಿಂದ ಪರಸ್ಪರರಲ್ಲಿ ಓಡನಾಟ, ಪರಿಚಯವಾಗುತ್ತದೆ. ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ವರ್ಷಕ್ಕೊಂದು ಬಾರಿಯಾದರೂ ಹಿಮಾಲಯ ಚಾರಣ ಮಾಡಬೇಕು ಎಂದು ತಿಳಿಸಿದರು.
ಯೂತ್ ಹಾಸ್ಟೆಲ್ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಚಾರಣದಲ್ಲಿ ಭಾಗಿಯಾಗುವುದರಿಂದ ವಿಶೇಷ ಸ್ಥಳಗಳ ಪರಿಚಯದ ಜತೆಗೆ ಪ್ರಕೃತಿಯ ಹಾಗೂ ಪರಿಸರದ ಸಂಸ್ಕೃತಿ, ಜನರ ಜೀವನಶೈಲಿ, ವೈವಿಧ್ಯತೆ ಪರಿಚಯವಾಗುತ್ತದೆ. ಬೇರೆ ಬೇರೆ ಸ್ಥಳಗಳಲ್ಲಿ ಜನರು ನಡೆಸುವ ಜೀವನ ವಿಧಾನದ ಬಗ್ಗೆ ಮಾಹಿತಿ ತಿಳಿಯುತ್ತದೆ. ಬೆಟ್ಟಗಳ ಚಾರಣದಿಂದ ವಿಶೇಷ ಅನುಭವ ನಮ್ಮದಾಗುತ್ತದೆ. ದಿಕ್ಸೂಚಿ ಅಡ್ವೆಂಚರ್ ವತಿಯಿಂದ ಅತ್ಯಂತ ಕಡಿಮೆ ದರದಲ್ಲಿ ಚಾರಣ ಆಯೋಜಿಸಲಾಗಿದೆ ಎಂದರು.
ದಿಕ್ಸೂಚಿ ಅಡ್ವೆಂಚರ್ ಅಧ್ಯಕ್ಷ ಪೃಥ್ವಿರಾಜ್ ಗಿರಿಮಾಜಿ ಮಾತನಾಡಿ, ಈಗಾಗಲೇ ನಮ್ಮ ಸಂಸ್ಥೆ ವತಿಯಿಂದ ಜಿಲ್ಲೆ ಹಾಗೂ ರಾಜ್ಯಮಟ್ಟದ ಚಾರಣಗಳನ್ನು 100ಕ್ಕೂ ಹೆಚ್ಚು ಬಾರಿ ಆಯೋಜಿಸಿದ್ದೇವೆ. ಚಾರಣದಲ್ಲಿ ಭಾಗವಹಿಸುವುದರಿಂದ ಸಾಹಸ ಮನೋಭಾವ, ಕ್ರೀಡಾಸಕ್ತಿ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : [email protected]
Click on below this picture, Like & Follow Facebook Page ” Digi Malenadu “
ರಾಜ್ಯದ ವಿವಿಧ ಭಾಗಗಳಿಂದ ಚಾರಣಿಗರು ಕೌರಿ ಪಾಸ್ ಪ್ರವಾಸದಲ್ಲಿ ಪಾಲ್ಗೊಂಡಿದ್ದರು. ಕೆ.ವೈಷ್ಣವಿ, ಜಿ.ಓಂಕಾರ್, ಅಶ್ವಿನಿ ಸಿ ಗೋಗಿ, ಜಿ.ಪಿ.ಸುಧೀರ್ ಕುಮಾರ್, ಜಿ.ಇ.ಅರ್ಚನಾ, ಎಂ.ರಘು, ಸಿ.ಎನ್.ಅನ್ನಪೂರ್ಣ, ಜಿ.ಆರ್.ವಿನೋದ್ ಕುಮಾರ್, ಗಣೇಶ್ ಗಾಣಿಗೆರೆ, ವಿ.ಶ್ರೇಯಸ್, ಧ್ರುವ ಗೋಗಿ, ಎಂ.ಜಿ.ಅಶೋಕ್, ಬಿ.ಎಸ್.ಕಿರಣ್‌ಕುಮಾರ್ ಇತರರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/JqXjFMwXzil6h4ePQU7iyo
ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ https://whatsapp.com/channel/0029Vaf6LKjHbFV2qoWkPx0G
ಫೇಸ್ ಬುಕ್ :www.facebook.com/digimalenadu
ಟ್ವಿಟರ್ :www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ :https://digimalenadu.com/about-us/