ಆರೋಗ್ಯಕರ ಸಮಾಜಕ್ಕೆ ಗಿಡಮೂಲಿಕೆ ಆಧರಿಸಿದ ಔಷಧ ಉತ್ಪನ್ನಗಳು ಅಗತ್ಯ

Shivamogga ಶಿವಮೊಗ್ಗ | 11 ಏಪ್ರಿಲ್ 2025 | ಡಿಜಿ ಮಲೆನಾಡು.ಕಾಂ
ಗಿಡಮೂಲಿಕೆಗಳನ್ನು ಆಧರಿಸಿದ ಔಷಧೀಯ ಉತ್ಪನ್ನಗಳು ಆರೋಗ್ಯಕರ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಭವಿಷ್ಯದಲ್ಲಿ ಇತರ ಔಷಧೀಯ ವಿಧಾನಗಳಿಗೆ ಪರ್ಯಾಯವಾಗಿ ಬೆಳೆಯಲಿದೆ ಎಂದು ಥಾಯ್ಲೆಂಡ್ ನ ಚುಲಾಲೊಂಗೋಂ ವಿಶ್ವವಿದ್ಯಾಲಯದ ಔಷಧ ಶಾಸ್ತ್ರ ವಿಭಾಗದ ನಿರ್ದೇಶಕಿ ಪ್ರೊ. ಸುಕಾಡಾ ಸುಕ್ರೋಂಗ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ : https://whatsapp.com/channel/0029Vaf6LKjHbFV2qoWkPx0G
ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾಭವನದಲ್ಲಿ ‘ನೋನಿಯ ಸಂಶೋಧನಾ ಪ್ರವೃತ್ತಿಗಳು ಮತ್ತು ಆರೋಗ್ಯಕರ ಬದುಕಿಗೆ ಜೀವವೈವಿಧ್ಯತೆಯ ಸುಸ್ಥಿರ ಬಳಕೆ’ ಕುರಿತು ಆಯೋಜಿಸಿದ್ದ ಮೂರು ದಿನಗಳ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
ಜಗತ್ತಿನಾದ್ಯಂತ ಸಿಂಥೆಟಿಕ್ ಔಷಧೀಯ ಉತ್ಪನ್ನಗಳನ್ನು ತಯಾರಿಸುತ್ತಿರುವ ಫಾರ್ಮಾ ಕಂಪನಿಗಳು ಗಿಡಮೂಲಿಕೆಗಳ ಸತ್ವವನ್ನು ಒಳಗೊಂಡ ಮತ್ತು ಅಡ್ಡ ಪರಿಣಾಮಗಳಿಲ್ಲದ ಸುಸ್ಥಿರವಾದ ಔಷಧೀಯ ವಿನ್ಯಾಸಗಳನ್ನು ಅಭಿವೃದ್ಧಿಪಡಿಸುವುದರತ್ತ ಗಮನಹರಿಸುತ್ತಿವೆ ಎಂದು ತಿಳಿಸಿದರು.
ಚೀನಾದ ವಿದ್ಯುನ್ಮಾನ ಮತ್ತು ಜೀವವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೊ. ಸಜೀವಾ ಮಹಾಚಿಗುಂಬುರ ಮಾತನಾಡಿ, ಆಧುನಿಕ ವಿಜ್ಞಾನ ಕೂಡ ಆಯುರ್ವೇದ ಮತ್ತು ಸಾವಯವ ಗಿಡಮೂಲಿಕೆಗಳ ಮಹತ್ವವನ್ನು ಅರಿತಿದ್ದು, ವಿವಿಧ ಜಾಗತಿಕ ಸಂಸ್ಥೆಗಳು ನೋನಿಯಂತಹ ಗಿಡಮೂಲಿಕೆಗಳನ್ನು ಬಳಸಿಕೊಂಡು ವಿವಿಧ ರೋಗಗಳಿಗೆ ಪರಿಹಾರಹುಡುಕುತ್ತಿವೆ. ಎಂದರು.
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಅಪ್ಪಾರಾವ್ ಪೊಡಿಲೆ ಮಾತನಾಡಿ, ಸುಸ್ಥಿರ ಪರಿಸರವನ್ನು ನಿರ್ಮಿಸುವ ನಿಟ್ಟಿನಲ್ಲಿ ಅದೃಶ್ಯ ಸೂಕ್ಷ್ಮ ಜೀವವೈವಿಧ್ಯತೆಯನ್ನು ಸಂರಕ್ಷಿಸುವುದರ ಜತೆಗೆ ಸಮರ್ಪಕವಾದ ಕೃಷಿ ಚಟುವಟಿಕೆಯನ್ನು ಅಳವಡಿಸಿಕೊಳ್ಳುವ ಅಗತ್ಯತೆ ಇದೆ ಎಂದು ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರೊ. ವಿ. ಕೃಷ್ಣ ಅವರ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿರುವ ಆ್ಯಂಟಿ ಏಜಿಂಗ್ ಕ್ರೀಮ್ ಅನ್ನು ವಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆಯ ಸಹಯೋಗದಲ್ಲಿ ಬಿಡುಗಡೆ ಮಾಡಲಾಯಿತು. ಸ್ಥಳೀಯ ರೈತರಿಗೆ ಸಹಕಾರಿ ಆಗಲೆಂದು ಪರಿಸರ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಜೆ. ನಾರಾಯಣ ಅವರು ಅಭಿವೃದ್ಧಿಪಡಿಸಿರುವ ಸಾವಯವ ಗೊಬ್ಬರವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.
ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಆಯುರ್ವೇದ ಔಷಧಿಗಳು ಜನಪ್ರಿಯವಾಗುತ್ತಿವೆ. ಸಂಶ್ಲೇಷಿತ (ಸಿಂಥೆಟಿಕ್) ಔಷಧಗಳಿಗೆ ಹೋಲಿಸಿದರೆ ಆಯುರ್ವೇದದ ಔಷಧ ಚಾಲ್ತಿಗೆ ಬಂದಿದೆ ಎಂದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : [email protected]
Click on below this picture, Like & Follow Facebook Page ” Digi Malenadu “
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಆರ್. ಸಿ. ಜಗದೀಶ್, ಕುಲಸಚಿವ ಎ. ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ವಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಎ.ಕೆ.ಶ್ರೀನಿವಾಸ ಮೂರ್ತಿ, ಪ್ರೊ. ವಿ.ಕೃಷ್ಣ, ಪ್ರೊ. ಜೆ.ನಾರಾಯಣ, ಪ್ರೊ. ಬಿ.ತಿಪ್ಪೇಸ್ವಾಮಿ, ಡಾ. ಎಚ್. ಎಸ್. ಸಂತೋಷ್ ಕುಮಾರ್, ಪ್ರೊ. ವಿಜಯಕುಮಾರ, ಪ್ರಾಧ್ಯಾಪಕರು, ಸಂಶೋಧಕರು, ಪ್ರತಿನಿಧಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/JqXjFMwXzil6h4ePQU7iyo
ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ https://whatsapp.com/channel/0029Vaf6LKjHbFV2qoWkPx0G
ಫೇಸ್ ಬುಕ್ :www.facebook.com/digimalenadu
ಟ್ವಿಟರ್ :www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ :https://digimalenadu.com/about-us/