ಪ್ರತಿ ನಿತ್ಯ ಯೋಗಾಭ್ಯಾಸ ಮಾಡುವುದು ಅವಶ್ಯ

ಪ್ರತಿ ನಿತ್ಯ ಯೋಗಾಭ್ಯಾಸ ಮಾಡುವುದು ಅವಶ್ಯ

ಶಿವಮೊಗ್ಗ | 21 ಜುಲೈ 2025 | ಡಿಜಿ ಮಲೆನಾಡು.ಕಾಂ

ಯೋಗ ಚಿಕಿತ್ಸೆಯು ಮನುಷ್ಯನ ದೈಹಿಕ, ಮಾನಸಿಕ ಅಸಮತೋಲನವನ್ನು ನಿವಾರಿಸುವ ಮೂಲಕ ಸರ್ವತೋಮುಖ ಸಮತೋಲನವನ್ನು ತಂದು ಆರೋಗ್ಯ ಸ್ಥಿರಗೊಳಿಸುವ ವಿದ್ಯೆಯಾಗಿದೆ ಎಂದು ಶಿಕ್ಷಣ ಇಲಾಖೆ ಯೋಗ ಶಿಕ್ಷಕ, ಉಪನ್ಯಾಸಕ ಸಿ ಆರ್ ಅಶ್ವಿನ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ಶ್ರೀ ಶಿವಗಂಗಾ ಯೋಗ ಕೇಂದ್ರದ ಕಲ್ಲಹಳ್ಳಿಯಲ್ಲಿ ಶ್ರೀ ಶಿವಗಂಗಾ ಯೋಗ ಶಿಕ್ಷಕರಿಗೆ ಆಯೋಜಿಸಿದ್ದ ತರಬೇತಿ ಹಾಗೂ ಪುನಶ್ಚೇತನ ಕಾರ್ಯಗಾರದಲ್ಲಿ ಮಾತನಾಡಿ, ಯೋಗಾಭ್ಯಾಸದ ಬಲವು ಸಮೃದ್ಧ ಆರೋಗ್ಯ ಕೊಡುತ್ತದೆ. ರೋಗವನ್ನು ದೂರ ಮಾಡುವ ಜತೆಯಲ್ಲಿ ರೋಗ ಬರದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ಯೋಗವು ಆರೋಗ್ಯ ಸಂವರ್ಧಕ, ರೋಗ ನಿವಾರಕ ಮತ್ತು ರೋಗ ನಿರೋಧಕ ಹೀಗೆ ಯೋಗಕ್ಕೆ ನಾನಾ ಆಯಾಮಗಳು ಉಂಟು ಎಂದು ತಿಳಿಸಿದರು. ಯೋಗ ಎಂದರೆ ಒಂದು ವ್ಯಾಯಾಮ ಅಲ್ಲ, ಅದು ನಮ್ಮ ಮನಸ್ಸುಗಳನ್ನು ಪರಿಶುದ್ಧಿಗೊಳಿಸುವುದು. ಸಕಾರಾತ್ಮಕವಾದ ಭಾವನೆಗಳನ್ನು ಮೂಡಿಸುವುದೇ ಯೋಗ ಎಂದರು.

ಯೋಗಾಚಾರ್ಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿ.ವಿ.ರುದ್ರಾರಾಧ್ಯ ಮಾತನಾಡಿ, ಯೋಗ, ಪ್ರಾಣಾಯಾಮ, ಧ್ಯಾನವನ್ನು ಸರಿಯಾದ ರೀತಿಯಲ್ಲಿ ಯೋಗಾಭ್ಯಾಸ ಮಾಡಬೇಕು. ಒಂದು ವರ್ಷ ನಡೆಯುವ ತರಬೇತಿ ಶಿಬಿರದಲ್ಲಿ ಎಲ್ಲರೂ ಸರಿಯಾಗಿ ಭಾಗವಹಿಸಿ ಅಭ್ಯಾಸ ಮಾಡಬೇಕು ಎಂದು ಹೇಳಿದರು.

ಶಿವಗಂಗಾ ಯೋಗ ಕೇಂದ್ರದ ಟ್ರಸ್ಟ್ ನ ಟ್ರಸ್ಟಿ ಹಾಲಪ್ಪ ಮಾತನಾಡಿ, ಸಮಾಜದ ಹಾಗೂ ಸಾರ್ವಜನಿಕರ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಶ್ರಮಿಸುತ್ತಿರುವ ಏಕೈಕ ಕೇಂದ್ರ ಶಿವಗಂಗಾ ಯೋಗ ಕೇಂದ್ರ. ಈಗಾಗಲೇ ಶಿವಮೊಗ್ಗದ 38 ಶಾಖೆಗಳಲ್ಲಿ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಉಚಿತ ಯೋಗ ಶಿಕ್ಷಣ, ಪ್ರಾಣಾಯಾಮ, ಧ್ಯಾನ ಹಾಗೂ ಆರೋಗ್ಯ ಮಾಹಿತಿಗಳನ್ನು ನೀಡುತ್ತಿದೆ ಎಂದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

Like & Follow Facebook Page ” Digi Malenadu “

ಟ್ರಸ್ಟ್ ಪೋಷಕರಾದ ಎಂ.ಪಿ.ಆನಂದಮೂರ್ತಿ, ಬಾಳೆಕಾಯಿ ಮೋಹನ್, ಅಡಿಗ, ಸುರೇಶ್, ಹೂವೇಗೌಡ, ದೇವೇಂದ್ರಪ್ಪ, ಯೋಗ ಶಿಕ್ಷಕ ಜಿ.ಎಸ್.ಓಂಕಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಜಿ.ವಿಜಯಕುಮಾರ್ ಹಾಗೂ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/JqXjFMwXzil6h4ePQU7iyo

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ನಮ್ಮ ಬಗ್ಗೆ :https://digimalenadu.com/about-us/

ನಕಾರಾತ್ಮಕ ಆಲೋಚನೆ ದೂರ ಮಾಡಿಕೊಳ್ಳಿ, ನಿರಂತರ ಪರಿಶ್ರಮದಿಂದ ಯಶಸ್ಸು

digimalenadu

ಶಿವಮೊಗ್ಗ
error: Content is protected !!