ಉತ್ತಮ ವ್ಯಕ್ತಿತ್ವಗಳಿಂದ ಯುವಜನತೆ ಸ್ಪೂರ್ತಿ ಪಡೆಯಿರಿ

ಉತ್ತಮ ವ್ಯಕ್ತಿತ್ವಗಳಿಂದ ಯುವಜನತೆ ಸ್ಪೂರ್ತಿ ಪಡೆಯಿರಿ

ಶಿವಮೊಗ್ಗ | 2 ಜುಲೈ 2025 | ಡಿಜಿ ಮಲೆನಾಡು.ಕಾಂ

ಉತ್ತಮ ವ್ಯಕ್ತಿತ್ವಗಳಿಂದ ಯುವಜನರು ಸ್ಪೂರ್ತಿ ಪಡೆಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನಿಂದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ಬಿಕಾಂ, ಬಿಬಿಎ, ಬಿಸಿಎ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ಅಭ್ಯುದಯ-2025 ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಆಕರ್ಷಣೆಗಳು ಸಹಜ. ನಮ್ಮ ಮನಸ್ಸು ಉತ್ತಮ ಸದಾಭಿರುಚಿಯತ್ತ ಆಕರ್ಷಿತ ಆಗಬೇಕಿದೆ. ಪೋಷಕರು ಮತ್ತು ಶಿಕ್ಷಕರ ಅನುಭವದ ಕಿವಿ ಮಾತಿಗೆ ಮನ್ನಣೆ ನೀಡಬೇಕು. ವ್ಯಕ್ತಿತ್ವ ವಿಕಸನಕ್ಕೆ ವಿದ್ಯಾರ್ಥಿ ಜೀವನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಸಂಸ್ಕೃತಿ, ಸಂಸ್ಕಾರವನ್ನು ಕಾಪಾಡುವುದು ಯುವ ಸಮೂಹದ ಮೇಲಿರುವ ದೊಡ್ಡ ಜವಾಬ್ದಾರಿ. ಪೋಷಕರು, ವಿದ್ಯಾಸಂಸ್ಥೆಗೆ ಮಕ್ಕಳನ್ನು ದಾಖಲಾತಿ ಮಾಡಿದ ನಂತರ ಪ್ರತಿ ಹಂತದಲ್ಲಿ ಅವರ ಕಲಿಕೆ, ಸೃಜನಶೀಲತೆಯ ಕುರಿತಾಗಿ ಗಮನ ವಹಿಸಬೇಕು ಎಂದರು.

ವೈದ್ಯೆ ಡಾ. ರಕ್ಷಾ ರಾವ್ ಮಾತನಾಡಿ, ಪದವಿ ಶಿಕ್ಷಣವು ಯುವ ಸಮೂಹದ ಹೊಸತನದ ಜವಾಬ್ದಾರಿಯತ್ತ ತೆರೆದುಕೊಳ್ಳುತ್ತದೆ. ಆಲೋಚನಾ ಪ್ರೌಢಿಮೆ ಹೆಚ್ಚಾಗಬೇಕು. ಒತ್ತಡಗಳನ್ನು ಸರಿಯಾಗಿ ನಿರ್ವಹಿಸಬೇಕು. ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು. ಅದು ಬದುಕಿನ ಯಶಸ್ಸಿಗೆ ಅಮೃತ ದರ್ಶಿನಿಯಾಗಿ ಕಾಪಾಡುತ್ತದೆ ಎಂದು ಹೇಳಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

Click on below this picture, Like & Follow Facebook Page ” Digi Malenadu “

ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಸ್.ಶಿವಪ್ರಸಾದ್, ಎನ್ಇಎಸ್ ಆಜೀವ ಸದಸ್ಯರಾದ ಡಾ. ಭರತ್, ರಾಮಪ್ರಸಾದ್ ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/JqXjFMwXzil6h4ePQU7iyo

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ನಮ್ಮ ಬಗ್ಗೆ :https://digimalenadu.com/about-us/

ಮಕ್ಕಳಿಗೆ ಸಮವಸ್ತ್ರ ವಿತರಿಸಿದ ರೋಟರಿ ಸೆಂಟ್ರಲ್ ಕ್ಲಬ್

digimalenadu

ಶಿವಮೊಗ್ಗ
error: Content is protected !!