ವಿದ್ಯಾರ್ಥಿಗಳು ಕಾಲ್ಪನಿಕ ಆಕರ್ಷಣೆಗಳಿಗೆ ಬಲಿಯಾಗದಿರಿ
ಶಿವಮೊಗ್ಗ | 9 ಆಗಸ್ಟ್ 2025 | ಡಿಜಿ ಮಲೆನಾಡು.ಕಾಂ
ವಿದ್ಯಾರ್ಥಿಗಳು ಆಧುನಿಕತೆ ಜಾಡಿನಲ್ಲಿ ಕಾಣಸಿಗುವ ಕಾಲ್ಪನಿಕ ಆಕರ್ಷಣೆಗಳಿಗೆ ಸಿಲುಕಿ ಬಲಿಯಾಗಬೇಡಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ ಸಲಹೆ ನೀಡಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ : https://whatsapp.com/channel/0029Vaf6LKjHbFV2qoWkPx0G
ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ವಸತಿ ನಿಲಯದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧುನಿಕ ಜಾಲತಾಣದಲ್ಲಿ ಕಾಣುವುದೆಲ್ಲವು ನಿಜವಲ್ಲ. ವಾಸ್ತವ ಜ್ಞಾನವನ್ನು ಪಡೆಯಿರಿ. ಜಾಲತಾಣಗಳು ನಮ್ಮನ್ನು ಅಂಧತ್ವದ ಮೊಹದ ಬಲೆಗೆ ಸಿಲುಕಿಸುತ್ತಿವೆ. ಅಂತಹ ಆಕರ್ಷಣೆಗಳಿಂದ ಎಚ್ಚರದಿಂದ ಇರಬೇಕು. ವಾಸ್ತವತೆ ವಿಮರ್ಶಿಸಲು ಪ್ರಯತ್ನಿಸಿ. ಹಿರಿಯರ ಸಲಹೆಗಳನ್ನು ಕೇಳಿಸಿಕೊಳ್ಳುವ ಸಂಯಮ ಬೇಕು ಎಂದು ತಿಳಿಸಿದರು.
ನಮ್ಮ ಯುವ ಸಮೂಹದಲ್ಲಿ ಅದ್ಭುತವಾದ ಗುರಿಯಿದೆ, ಆದರೆ ಕ್ರಮಿಸುವ ಮಾರ್ಗ ಗೊತ್ತಿಲ್ಲ. ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಆದ್ಯತೆ ನೀಡಿ, ಪೋಷಕರು ಮತ್ತು ಸಮಾಜದ ಋಣ ತೀರಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಕಾನೂನು ಎಂಬುವುದು ಒಂದು ಸಾಮಾನ್ಯ ಜ್ಞಾನ. ಅಂತಹ ಜ್ಞಾನ ಸದಾ ನಮ್ಮನ್ನು ಜವಾಬ್ದಾರಿಯಿಂದ ನಡೆಯುವಂತೆ ಮಾಡುತ್ತದೆ. ಹೆಣ್ಣು ಮಕ್ಕಳ ಪ್ರತಿ ಹಂತದ ರಕ್ಷಣೆಯಲ್ಲಿ ಕಾನೂನು ಪ್ರಮುಖ ಪಾತ್ರ ವಹಿಸಿದೆ ಎಂದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಹದಿಹರೆಯದ ವಿದ್ಯಾರ್ಥಿನಿಯರು ಅನೇಕ ಗೊಂದಲದಲ್ಲಿದ್ದಾರೆ. ಅಂತಹ ಗೊಂದಲಗಳಿಗೆ ಮೂಲ ಕಾರಣ ಆಧುನಿಕ ಮಾಧ್ಯಮಗಳು, ಜಾಲತಾಣಗಳು. ಸಾಮಾಜಿಕ ಜಾಲತಾಣದಲ್ಲಿ ನೋಡುವ ವಿಚಾರವೆಲ್ಲವು ನಿಜವೆಂಬ ಭ್ರಮೆ ನಮ್ಮಲ್ಲಿದೆ. ನಾವು ಕೂಡ ಆಧುನಿಕವಾಗಿ ಸಮಾಜಕ್ಕೆ ತೆರೆದುಕೊಳ್ಳಬೇಕು ಎಂಬ ಆತುರ ಶುರುವಾಗಿದೆ. ಹಕ್ಕುಗಳನ್ನು ಬಳಸುವಾಗ ನಿಮ್ಮ ಮೇಲಿರುವ ಜವಾಬ್ದಾರಿಗಳ ಬಗ್ಗೆಯೂ ಅರಿವಿರಬೇಕು ಎಂದು ಹೇಳಿದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : digimalenadu@gmail.com
Like & Follow Facebook Page ” Digi Malenadu “
ಎನ್ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್, ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ವಿದ್ಯಾರ್ಥಿ ನಿಲಯದ ಮುಖ್ಯಸ್ಥೆ ಸಂಜಿದಾ ಬಾನು, ದಿವ್ಯ ಮತ್ತಿತರರು ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/JqXjFMwXzil6h4ePQU7iyo
ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ https://whatsapp.com/channel/0029Vaf6LKjHbFV2qoWkPx0G
ಫೇಸ್ ಬುಕ್ :www.facebook.com/digimalenadu
ನಮ್ಮ ಬಗ್ಗೆ :https://digimalenadu.com/about-us/
