ಫಾರ್ಮಸಿ ಕಾಲೇಜಿನಲ್ಲಿ ಔಷಧ ತಜ್ಞರ ದಿನಾಚರಣೆ

ಫಾರ್ಮಸಿ ಕಾಲೇಜಿನಲ್ಲಿ ಔಷಧ ತಜ್ಞರ ದಿನಾಚರಣೆ

ಶಿವಮೊಗ್ಗ | 11 ಅಕ್ಟೋಬರ್‌ 2025 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ: ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಆಹಾರ ಸುರಕ್ಷತೆ ಮತ್ತು  ಔಷಧ ಆಡಳಿತ, ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ, ಜಿಲ್ಲಾ ಔಷಧ ತಜ್ಞರ ಸಂಘ ಹಾಗೂ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ವತಿಯಿಂದ ವಿಶ್ವ ಔಷಧ ತಜ್ಞರ ದಿನಾಚರಣೆ ಕಾರ್ಯಕ್ರಮ ಮತ್ತು ಫಾರ್ಮಸಿ ವಿದ್ಯಾರ್ಥಿಗಳಿಂದ ಜಾಥಾ ಏರ್ಪಡಿಸಲಾಗಿತ್ತು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ಜಾಥಾ ಉದ್ಘಾಟಿಸಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್‌ ಮಾತನಾಡಿ, ದೇಶದ ಪ್ರಜೆಗಳ ಆರೋಗ್ಯವನ್ನು ಕಾಪಾಡುವಲ್ಲಿ  ಔಷಧ ತಜ್ಞರ ಪಾತ್ರ ಮಹತ್ವದಾಗಿದೆ.  ಔಷಧ ತಜ್ಞರ ಪಾತ್ರವನ್ನು ಗೌರವಿಸಲು ಮತ್ತು ಸಾರ್ವಜನಿಕ ಯೋಗ ಕ್ಷೇಮಕ್ಕಾಗಿ ಇಂತಹ ಅಪೂರ್ವ ವೇದಿಕೆ ಪೂರಕವಾಗಿದೆ ಎಂದು ಹೇಳಿದರು.

ಮೈಸೂರು ಮೆಡಿಕಲ್ಸ್ ವಿವೇಕಾನಂದ ನಾಯಕ್ ಹಾಗೂ ಮೆಗ್ಗಾನ್ ಆಸ್ಪತ್ರೆಯ ಫಾರ್ಮಸಿ ಅಧಿಕಾರಿ ಪ್ರಭಾಕರ್‌ ಅವರಿಗೆ ರಾಜ್ಯ ಔಷಧ ವಿಜ್ಞಾನ ಪರಿಷತ್‌ ಮತ್ತು ಆಹಾರ ಸುರಕ್ಷತೆ ಔಷಧ ಆಡಳಿತ ಮಂಡಳಿ ಕೊಡುವ ಸರ್ವೋತ್ತಮ ಔಷಧ ತಜ್ಞ ಪ್ರಶಸ್ತಿಯನ್ನು ಸರ್ಕಾರದ ಪರವಾಗಿ ಸಹಾಯಕ ಔಷಧ ನಿಯಂತ್ರಕ ಡಾ. ವೀರೇಶ ಬಾಬು ಹಾಗೂ ಸಹಾಯಕ ಔಷಧ ನಿಯಂತ್ರಕಿ ವಿಶಾಲಾಕ್ಷಿ.ವಿ ಅವರು ಪ್ರದಾನ ಮಾಡಿ ಗೌರವಿಸಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

Like & Follow Facebook Page ” Digi Malenadu “

ಕಾಲೇಜಿನ ಪ್ರಾಂಶುಪಾಲ ಡಾ. ಜಿ.ನಾರಾಯಣಮೂರ್ತಿ, ಜಿಲ್ಲಾ ಔಷಧ ವ್ಯಾಪಾರಿ ಸಂಘದ ಅಧ್ಯಕ್ಷ ಮಧುಸೂಧನ, ಜಿಲ್ಲಾ ರಿಜಿಸ್ಟರ್ಡ್ ಫಾರ್ಮಸಿಸ್ಟ್ ಸಂಘದ ಅಧ್ಯಕ್ಷ ಗಣೇಶ ರಾವ್, ಸಹ ಪ್ರಾಧ್ಯಾಪಕ ಪ್ರಸನ್ನ, ಉಪನ್ಯಾಸಕಿ ಸಂಜನ, ಲಿಖಿತಾ ಉಪಸ್ಥಿತರಿದ್ದರು.

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ನಮ್ಮ ಬಗ್ಗೆ :https://digimalenadu.com/about-us/

ಸಮುದಾಯದ ಒಗ್ಗಟ್ಟಿನಿಂದ ಆರ್ಥಿಕ ಅಭಿವೃದ್ಧಿ

 

digimalenadu

ಶಿವಮೊಗ್ಗ
error: Content is protected !!