ಶ್ರೀ ಕನ್ನಿಕಾ ಪರಮೇಶ್ವರಿಗೆ 1008 ಸೀರೆಗಳಿಂದ ಲಲಿತಾ ಸಹಸ್ರನಾಮ ಪೂಜೆ

ಶ್ರೀ ಕನ್ನಿಕಾ ಪರಮೇಶ್ವರಿಗೆ 1008 ಸೀರೆಗಳಿಂದ ಲಲಿತಾ ಸಹಸ್ರನಾಮ ಪೂಜೆ

ಶಿವಮೊಗ್ಗ | 12 ಜುಲೈ 2025 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ ನಗರದ ಗಾಂಧಿಬಜಾರ್‌ನ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶಿವಮೊಗ್ಗ ವಾಸವಿ ಮಹಿಳಾ ಸಂಘದ 50ನೇ ವರ್ಷದ ಸುವರ್ಣದ ಪ್ರಯುಕ್ತ ಆಷಾಢ ಶುಕ್ರವಾರದಂದು 1008 ಸೀರೆಗಳಿಂದ ಶ್ರೀ ಕನ್ನಿಕಾ ಪರಮೇಶ್ವರಿಗೆ ಲಲಿತಾ ಸಹಸ್ರನಾಮ ಪೂಜೆ ನಡೆಸಲಾಯಿತು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ಶಿವಮೊಗ್ಗ ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಪ್ರತಿಭಾ ಅರುಣ್ ಮಾತನಾಡಿ, ಆಷಾಡ ಮಾಸದಲ್ಲಿ ಲಲಿತಾ ದೇವಿಯ ಅರ್ಚನೆ ಮಾಡುವುದರಿಂದ ಸಕಲ ಸಿದ್ಧಿಗಳು ಲಭಿಸುತ್ತವೆ. ಶ್ರೀ ಲಲಿತಾ ಸಹಸ್ರನಾಮ ಅತ್ಯಂತ ಪವಿತ್ರ ಮಂತ್ರವಾಗಿದೆ ಎಂದು ಹೇಳಿದರು.

ಶಿವಮೊಗ್ಗ ವಾಸವಿ ಮಹಿಳಾ ಸಂಘದ ಕಾರ್ಯದರ್ಶಿ ನಮ್ರತಾ ಪ್ರಶಾಂತ್ ಮಾತನಾಡಿ, ಪೂಜೆಯಲ್ಲಿ ಒಟ್ಟು 1008 ಸೀರೆಗಳನ್ನು ದೇವಿಗೆ ಅರ್ಪಿಸಲಾಯಿತು. ಇದರಲ್ಲಿ 500 ಸೀರೆಗಳನ್ನು ದಾನದ ಮೂಲಕ ಅಗತ್ಯ ಇರುವವರಿಗೆ ನೀಡಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹಾಗೂ ಆರ್ಯವೈಶ್ಯ ಮಹಾಜನ ಸಮಿತಿ ಅಧ್ಯಕ್ಷ ಭೂಪಾಲಂ ಶಶಿಧರ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಶುಭಕೋರಿದರು. ಶ್ರೀ ಕನ್ನಿಕಾ ಸಹಸ್ರನಾಮ ಹಾಗೂ ಶ್ರೀ ಲಲಿತಾ ಸಹಸ್ರನಾಮ ಪೂಜೆಯನ್ನು ಮಾಡಲಾಯಿತು. 108 ಮಹಿಳೆಯರು ಪೂಜೆಯಲ್ಲಿ ಭಾಗವಹಿಸಿದ್ದರು. ಹತ್ತು ತರಹದ ಪೂಜಾ ದ್ರವ್ಯಗಳು ಹಾಗೂ ಒಂದು ಸೀರೆಯಿಂದ ಪ್ರತಿಯೊಬ್ಬರು ಪೂಜೆ ನೆರವೇರಿಸಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

Click on below this picture, Like & Follow Facebook Page ” Digi Malenadu “

ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಅಶ್ವತ್ ನಾರಾಯಣ ಶೆಟ್ಟಿ, ಆರ್ಯವೈಶ್ಯ ಸಮಾಜದ ಹಿರಿಯ ಶೇಷಾಚಲ, ಸಂಘದ ನಿಕಟಪೂರ್ವ ಅಧ್ಯಕ್ಷೆ ರಾಧಿಕಾ ಮಾಲತೇಶ್, ಉಪಾಧ್ಯಕ್ಷೆ ಕವಿತಾ ಸಂತೋಷ್, ಖಜಾಂಚಿ ವಿಜಯ ದತ್ತ ಕುಮಾರ್, ಜಂಟಿ ಕಾರ್ಯದರ್ಶಿ ಅನಿತಾ ರಘು, ಸಂಘದ ಮಾಜಿ ಅಧ್ಯಕ್ಷರು, ನಿರ್ದೇಶಕರು ಹಾಗೂ ಆರ್ಯವೈಶ್ಯ ಸಮಾಜದ ಮುಖಂಡರು ಭಾಗವಹಿಸಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/JqXjFMwXzil6h4ePQU7iyo

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ನಮ್ಮ ಬಗ್ಗೆ :https://digimalenadu.com/about-us/

ಪ್ರತಿಯೊಬ್ಬರೂ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ

digimalenadu

ಶಿವಮೊಗ್ಗ
error: Content is protected !!