ಉತ್ತಮ ಸಂದೇಶ ಸಾರಲು ರಂಗಭೂಮಿ ಬಹುದೊಡ್ಡ ಮಾಧ್ಯಮ

ಉತ್ತಮ ಸಂದೇಶ ಸಾರಲು ರಂಗಭೂಮಿ ಬಹುದೊಡ್ಡ ಮಾಧ್ಯಮ

ಶಿವಮೊಗ್ಗ | 3 ಏಪ್ರಿಲ್‌ 2026 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ: ರಂಗಭೂಮಿ ಸಮಾಜದ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆಗಳನ್ನು ರೂಪಿಸುವ ಮಹತ್ವದ ಕಲೆಯಾಗಿದ್ದು, ಜನಸಾಮಾನ್ಯರಿಗೆ ಉತ್ತಮ ಸಂದೇಶ ಸಾರಲು ಬಹುದೊಡ್ಡ ಮಾಧ್ಯಮವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಮತ್ತು ಎನ್ಇಎಸ್ ಹವ್ಯಾಸಿ ರಂಗವೇದಿಕೆಯಿಂದ ಗುರುವಾರ ಎಸ್.ಆರ್.ಎನ್.ಎಂ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಭಿನ್ನ ಪ್ರಕಾರಗಳು ಒಂದೆಡೆ ಸೇರಿ ಪ್ರದರ್ಶನಗೊಳ್ಳುವ ವಿಶೇಷತೆ ನಾಟಕದ ಮೂಲಕ ಸಾಧ್ಯ. ಕಲೆಯು ಜೀವಂತವಾಗಿರಬೇಕು ಎಂಬುದು ಅತ್ಯಂತ ಮುಖ್ಯ. ನಾಟಕದಲ್ಲಿ ಜೀವಂತಿಕೆ ಇದ್ದಾಗ ಮಾತ್ರ ಅದು ಪ್ರೇಕ್ಷಕರ ಮನಸ್ಸನ್ನು ಸ್ಪರ್ಶಿಸುತ್ತದೆ. ಕಲೆ ಎಂದರೆ ಜನರ ಬದುಕಿನ ಪ್ರತಿಬಿಂಬವಾಗಿರಬೇಕು. ಸಮಾಜದಲ್ಲಿ ಜಾಗೃತಿ ಮೂಡಿಸಲು, ಸಮಸ್ಯೆಗಳ ಬಗ್ಗೆ ಚಿಂತನೆಗೆ ಪ್ರೇರೇಪಿಸಲು ನಾಟಕ ಮಹತ್ತರ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ರಂಗಕರ್ಮಿ ಬಿ.ಆರ್.ರೇಣುಕಪ್ಪ ಮಾತನಾಡಿ, ರಂಗದಲ್ಲಿ ಮನರಂಜನೆಯ ಜತೆಗೆ ಸಂದೇಶ ಸಾರುವತ್ತ ಹೆಚ್ಚು ಗಮನವಹಿಸಬೇಕು. ನಾಟಕದ ಸಂದೇಶಗಳು ಅನೇಕ ಜನ ಸಾಮಾನ್ಯರ ಬದುಕನ್ನು ಬದಲಿಸಿದೆ. ಬಿಇಡ್ ವಿದ್ಯಾರ್ಥಿಗಳು ರಂಗ ಚಟುವಟಿಕೆಗಳಲ್ಲಿ ಸಕ್ರಿಯರಾಗುವ ಮೂಲಕ ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಾಗಿ ತಲುಪಬಹುದು‌ ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಎನ್.ಕೆ.ಚಿದಾನಂದ ಮಾತನಾಡಿ, ರಂಗಭೂಮಿ ಎಂಬುದು ಮನಸ್ಸುಗಳ ಕಟ್ಟುವ ಕಲೆ. ದೇಶದ ಅಭಿವೃದ್ಧಿಯಲ್ಲಿ ಸಂಸ್ಕೃತಿ ಕಲೆ ಎಂಬುದು ಬಹುದೊಡ್ಡ ಆಧಾರ‌ವಾಗಿ ನಿಂತಿದೆ ಎಂದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

Like & Follow Facebook Page ” Digi Malenadu “

ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್ ಹಾಜರಿದ್ದರು. ಯಕ್ಷಗಾನ ಕಲಾವಿದ ಪರಮೇಶ್ವರ ಹೆಗಡೆ ಐನಬೈಲು ಹಾಗೂ ರಂಗಕರ್ಮಿ ಬಿ.ಆರ್.ರೇಣುಕಪ್ಪ ಅವರನ್ನು ಅಭಿನಂದಿಸಲಾಯಿತು.

ಫೇಸ್‌ ಬುಕ್‌ :www.facebook.com/digimalenadu

ನಮ್ಮ ಬಗ್ಗೆ :https://digimalenadu.com/about-us/

ಎನ್ ಇ ಎಸ್ ಉದ್ಯೋಗ ಮೇಳ, ನೇಮಕಾತಿ ಪತ್ರ ಪಡೆದ 418 ವಿದ್ಯಾರ್ಥಿಗಳು

digimalenadu

ಶಿವಮೊಗ್ಗ
error: Content is protected !!