ಉದ್ಯಮ, ಶಿಕ್ಷಣ ಕ್ಷೇತ್ರದ ಸಹಯೋಗದ ಅಗತ್ಯತೆ ಮಹತ್ತರ
ಶಿವಮೊಗ್ಗ | 1 ಸೆಪ್ಟೆಂಬರ್ 2026 | ಡಿಜಿ ಮಲೆನಾಡು.ಕಾಂ
ಭವಿಷ್ಯದಲ್ಲಿ ಸಂವಹನ ತಂತ್ರಜ್ಞಾನದ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಶಿಕ್ಷಕರು, ಸಂಶೋಧಕರಿಗೆ ಜ್ಞಾನ ನೀಡುವುದು ತರಬೇತಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಬೆಂಗಳೂರಿನ ತೇಜಸ್ ನೆಟ್ವರ್ಕ್ಸ್ ಉಪಾಧ್ಯಕ್ಷ ಅನಿಂದ್ಯ ಸಾಹಾ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu
ಜೆಎನ್ಎನ್ ಇಂಜಿನಿಯರಿಂಗ್ JNNCE ಕಾಲೇಜಿನಲ್ಲಿ ಆಯೋಜಿಸಿದ್ದ 6G ಮೊಬೈಲ್ ನೆಟ್ವರ್ಕ್ ಕುರಿತ ಎಐಸಿಟಿಇ-ಅಟಲ್ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿ, 6G ತಂತ್ರಜ್ಞಾನದ ಪ್ರಾಮುಖ್ಯತೆ, ಸುಧಾರಿತ ವೈರ್ಲೆಸ್ ಸಂವಹನ ಹಾಗೂ ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದ ಸಹಯೋಗದ ಅಗತ್ಯತೆ ಮಹತ್ತರವಾಗಲಿದೆ ಎಂದು ತಿಳಿಸಿದರು.
ಎನ್ಇಎಸ್ NES ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ತಂತ್ರಜ್ಞಾನಗಳಲ್ಲಿ ಅಧ್ಯಾಪಕರು ನಿರಂತರ ಕೌಶಲ್ಯ ವೃದ್ಧಿಸಿಕೊಳ್ಳುವ ಅಗತ್ಯವಿದೆ ಎಂದರು.
ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೆಪ್ಟೆಂಬರ್ 5ರವರೆಗೆ ಕಾರ್ಯಾಗಾರ ನಡೆಯಲಿದೆ. ಇಟಿಇ (ETE) ಮತ್ತು ಇಸಿಇ (ECE) ವಿಭಾಗ ಜಂಟಿಯಾಗಿ ಕಾರ್ಯಕ್ರಮ ಹಮ್ಮಿಕೊಂಡಿವೆ. ದೇಶಾದ್ಯಂತ ಸ್ವೀಕರಿಸಲಾದ 1,500ಕ್ಕೂ ಹೆಚ್ಚು ಪ್ರಸ್ತಾವನೆಗಳಿಂದ ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನ ಪ್ರಸ್ತಾವನೆಯು ಆಯ್ಕೆಯಾಗಿತ್ತು, ಎಐಸಿಟಿಇ ವತಿಯಿಂದ 3.5 ಲಕ್ಷ ರೂ. ಅನುದಾನ ಮಂಜೂರಾಗಿದೆ.
ಇಟಿಇ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಅಶ್ವಿನಿ ಎಸ್. ಆರ್. ಸಂಯೋಜಕರಾಗಿ ಹಾಗೂ ಇಸಿಇ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪ್ರೇಮಾ ಕೆ. ಎನ್. ಸಹಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. SHIVAMOGGA ಕಾರ್ಯಾಗಾರದಲ್ಲಿ ಕರ್ನಾಟಕದ ವಿವಿಧ ಇಂಜಿನಿಯರಿಂಗ್, ಡಿಪ್ಲೊಮಾ ಮತ್ತು ಅನ್ವಯಿಕ ವಿಜ್ಞಾನ ಕಾಲೇಜುಗಳ ಅಧ್ಯಾಪಕರು ಭಾಗವಹಿಸಿದ್ದಾರೆ.
ಡಿಜಿಮಲೆನಾಡು.ಕಾಂ | ಇ-ಮೇಲ್ : digimalenadu@gmail.com
Like & Follow Facebook Page ” Digi Malenadu “
ಜೆಎನ್ಎನ್ಸಿಇ ಪ್ರಭಾರ ಪ್ರಾಂಶುಪಾಲ ಡಾ. ಎಸ್.ವಿ.ಸತ್ಯನಾರಾಯಣ, ಇಸಿಇ ವಿಭಾಗದ ಮುಖ್ಯಸ್ಥ ಡಾ. ಪ್ರಮೋದ್ ಕುಮಾರ್ ಎಸ್., ಇಟಿಇ ವಿಭಾಗದ ಮುಖ್ಯಸ್ಥ ಡಾ. ಸುರೇಂದ್ರ ಎಸ್. ಇತರರಿದ್ದರು.
ಫೇಸ್ ಬುಕ್ :www.facebook.com/digimalenadu
ನಮ್ಮ ಬಗ್ಗೆ :https://digimalenadu.com/about-us/
